Advertisement

ಮರಳು ಉಸ್ತುವಾರಿ ಸಮಿತಿ ಆದೇಶ ರದ್ದು ; ಮತ್ತೆ 27 ಮಂದಿಗೆ ಅವಕಾಶ

10:08 AM Oct 12, 2022 | Team Udayavani |

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧವನ್ನು ಪ್ರಶ್ನಿಸಿ 27 ಮಂದಿ ತಾತ್ಕಾಲಿಕ ಪರವಾನಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಸಿಆರ್‌ಝಡ್‌ ವಲಯದಲ್ಲಿ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವ ಬಗ್ಗೆ ಅ. 10ರಂದು ಆದೇಶ ನೀಡಿದೆ.

Advertisement

ಸಿಆರ್‌ಝಡ್‌ ವಲಯದಲ್ಲಿ ಮರಳು ಗಾರಿಕೆಗೆ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಿ ತಾತ್ಕಾಲಿಕ ಪರವಾನಿಗೆ ಹೊಂದಿದ್ದ 30 ಮಂದಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಸಿಆರ್‌ಝಡ್‌ ವಲಯದಲ್ಲಿ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವ ಬಗ್ಗೆ ಸೆ. 3ರಂದು ಆದೇಶಿಸಿತ್ತು. ಬಳಿಕ ಇನ್ನೂ 27 ಮಂದಿ ತಾತ್ಕಾಲಿಕ ಪರವಾ ನಿಗೆ ದಾರರು ಸಲ್ಲಿಸಿದ್ದ ಅರ್ಜಿಯ ವಿಚಾ ರಣೆ ನಡೆಸಿದ ಹೈಕೋರ್ಟ್‌ ಅವರ ತಾತ್ಕಾಲಿಕ ಪರವಾನಿಗೆಗಳಿಗೂ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿದೆ.

ಸೆ. 3ರ ಆದೇಶದಲ್ಲಿ ಉಲ್ಲೇಖೀಸಿರುವ ಎಲ್ಲ ಅಂಶಗಳು ಈ ಆದೇಶದಲ್ಲೂ ಅನ್ವಯವಾಗುತ್ತಿದ್ದು ಯಂತ್ರೋಪಕರಣಗಳನ್ನು ಬಳಸದೆ ಮಾನವಶ್ರಮದ ಮೂಲಕ (ಮ್ಯಾನ್ಯುವಲ್‌) ಮರಳುಗಾರಿಕೆ ನಡೆಸಲು ಅನುಮತಿ ನೀಡಬಹುದಾಗಿದೆ ಎಂದು ಆದೇಶದಲ್ಲಿ ಹೇಳಿದೆ. ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆೆಗೆ ನಿಷೇಧ ವಿಧಿಸಿ ಹಸುರು ಪೀಠ (ಗ್ರೀನ್‌ ಟ್ರಿಬ್ಯೂನಲ್‌) ನೀಡಿದ್ದ ಆದೇಶದ ಆಧಾರದಲ್ಲಿ ದಕ್ಷಿಣ ಕನ್ನಡದಲ್ಲೂ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ನಿಷೇಧ ವಿಧಿಸಲಾಗಿತ್ತು.

ತಾತ್ಕಾಲಿಕ ಪರವಾನಿಗೆದಾರರು ಸಲ್ಲಿಸಿದ್ದ ಅರ್ಜಿಯಲ್ಲಿ ರಾಜ್ಯ ಸರಕಾರ, ಭಾರತ ಸರಕಾರ ಕರ್ನಾಟಕ ರಾಜ್ಯ ಕರಾವಳಿ ನಿಯಂತ್ರಣ ಪ್ರಾಧಿಕಾರ, ಏಳು ಸದಸ್ಯರ ದ.ಕ. ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ಪ್ರತಿವಾದಿಗಳಾಗಿದ್ದರು.

ಸೆ. 3ರ ಆದೇಶ
ತಾತ್ಕಾಲಿಕ ಪರವಾನಿಗೆದಾರರಿಗೆ 2022ರ ಮೇ 21ರಂದು ಹೊರಡಿಸಿದ್ದ ಆದೇಶ ಹಾಗೂ ಮೇ 23ರಂದು ನೀಡಿದ್ದ ನೋಟಿಸ್‌ ಹಸುರುಪೀಠದ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿ ನೀಡಿದ್ದಾಗಿದ್ದು ಇದು ಕಾನೂನಿನ ದೃಷ್ಟಿಯಲ್ಲಿ ನಿಲ್ಲುವುದಿಲ್ಲ. ಆದುದರಿಂದ ಇದನ್ನು ರದ್ದುಪಡಿಸಲಾಗಿದೆ. ಪ್ರತಿವಾದಿಗಳು (ಸರಕಾರ) ಯಂತ್ರಗಳನ್ನು ಬಳಸಿ ಅಕ್ರಮ ಮರಳುಗಾರಿಕೆ ನಡೆಯದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸ್ವಾತಂತ್ರÂ ಹೊಂದಿದ್ದಾರೆ. ಅರ್ಜಿದಾರರಿಗೆ ತಾತ್ಕಾಲಿಕ ಪರವಾನಿಗೆಯಲ್ಲಿ ವಿಧಿಸಿದ ಷರತ್ತುಗಳಂತೆ ಮಾನವಶ್ರಮದ ಮೂಲಕ ಮರಳುಗಾರಿಕೆಗೆ ಅನುಮತಿ ನೀಡಬಹುದಾಗಿದೆ ಎಂದು ನ್ಯಾಯಾಲಯ ಸೆ. 3ರ ಆದೇಶದಲ್ಲಿ ತಿಳಿಸಿತ್ತು.

Advertisement

ಇದನ್ನೂ ಓದಿ : ಡೆಮಾಕ್ರಟಿಕ್ ಪಕ್ಷ ತೊರೆದ ಅಮೆರಿಕದ ಮೊದಲ ಹಿಂದೂ ಸಂಸದೆ ತುಳಸಿ ಗಬ್ಬಾರ್ಡ್

Advertisement

Udayavani is now on Telegram. Click here to join our channel and stay updated with the latest news.

Next