Advertisement
ನೂತನವಾಗಿ ರೂಪುಗೊಳ್ಳುವ ಇಂಟಗ್ರೇಟಡ್ ಸಾಫ್ಟ್‌ವೇರ್‌ನಲ್ಲಿ ಮರಳು ಗಾರಿಕೆ ದಿಬ್ಬಗಳಿಂದ ಮರಳು ತೆಗೆದು ಬೇಡಿಕೆ ಸಲ್ಲಿಸಿರುವವವರ ತಾಣಕ್ಕೆ ಮರಳು ಸರಬರಾಜು ಆಗುವವರೆಗಿನ ಎಲ್ಲ ಮಾಹಿತಿಗಳು ಒಳ್ಳಗೊಳ್ಳಲಿದೆ. ಇದಕ್ಕಾಗಿ ನೂತನ ಆ್ಯಪ್‌ವೊಂದನ್ನು ಸಿದ್ಧಪಡಿ ಸಲಾಗುವುದು. ಈ ಆ್ಯಪ್ ಸಾರ್ವಜನಿಕರಿಗೂ ಲಭ್ಯವಿರಲಿದ್ದು ಪ್ರತಿಯೊಂದು ಹಂತವನ್ನು ಆ್ಯಪ್ ಮೂಲಕ ವೀಕ್ಷಿಸಬಹುದಾಗಿದೆ. ಇದನ್ನು ಪ್ರಾಯೋಗಿಕವಾಗಿ ಒಂದು ದಿಬ್ಬದಲ್ಲಿ ಅಳವಡಿಸಿ ಬಳಿಕ ಇತರೆಡೆಗೆ ವಿಸ್ತರಿಸುವ ಯೋಜಿಸಲಾಗಿದೆ.
ಸಿಆರ್‌ಝಡ್ ವ್ಯಾಪ್ತಿಯೊಳಗೆ ಬರುವ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ 1 ಬ್ಲಾಕ್ ಸಹಿತ 13 ಬ್ಲಾಕ್‌ಗಳಲ್ಲಿ (ದಿಬ್ಬ) ಈ ಬಾರಿ ಮರಳು ತೆರವಿಗೆ ಅನುಮತಿ ನೀಡಲಾಗಿದೆ. ಒಟ್ಟು 104 ಮಂದಿಗೆ ಮರಳು ತೆಗೆಯಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ತಾತ್ಕಾಲಿಕ ಪರವಾನಿಗೆ ನೀಡಿದೆ. ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಸಿಆರ್‌ಝಡ್ ಅನುಮತಿಯಂತೆ ಗುರುತಿಸ ಲಾಗಿರುವ 13 ದಿಬ್ಬಗಳಲ್ಲಿನ 10,58,598 ಮೆ. ಟನ್ ಮರಳು ತೆರವುಗೊಳಿಸಬಹುದಾಗಿದೆ.
Related Articles
ಮರಳುಗಾರಿಕೆ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ಪ್ರಸ್ತುತ ಇರುವ ವಿವಿಧ ತಂತ್ರಾಂಶ ಹಾಗೂ ನಿಗಾ ವ್ಯವಸ್ಥೆಗಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಇಂಟಗ್ರೆಟೇಡ್ ಸಾಫ್ಟ್‌ವೇರ್ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ತಂತ್ರಾಂಶ ಹಾಗೂ ಆ್ಯಪ್ ರೂಪಿಸುವ ಬಗ್ಗೆ ಪೂರಕ ಪ್ರಕ್ರಿಯೆಗಳನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು.
-ಡಾ| ರಾಜೇಂದ್ರ ಕೆ.ವಿ., ದ.ಕನ್ನಡ ಜಿಲ್ಲಾಧಿಕಾರಿ
Advertisement
– ಕೇಶವ ಕುಂದರ್