Advertisement
ಉತ್ತರ ಪ್ರದೇಶದ ನಾನ್‌ಫರಾದ ನಿವಾಸಿ ಗೋರಕ್‌ನಾಥ (40), ಉ. ಪ್ರದೇಶದ ನಿಸಾದ್ ನಗರದ ಭೂತಾನ್ (54), ಉ.ಪ್ರದೇಶದ ಕಿರಿ ಜಿಲ್ಲೆಯ ಬಡಗಾಂ ವಾಸಿ ಅನಿಲ್ (25), ಉ.ಪ್ರ. ಕಿರಿ ಜಿಲ್ಲಾ ನಿಸಾನ್ ನಗರದ ಸರವನ್ ಕುಮಾರ್ (25), ಧಾರವಾಡ ಜಿಲ್ಲೆ ಎಂಬಿಕೆರೆಯ ರವಿ (27) ಮತ್ತು ಕಂಡೂರಿನ ಇನಾಯಿಧಿತುಲ್ಲಾ (22) ಗುರುವಾರ ಬಂಧಿತರು. ಬಂಧಿತರಲ್ಲಿ ಹೆಚ್ಚಿನವರೆಲ್ಲರೂ ಮರಳು ಕಾರ್ಮಿಕರಾಗಿದ್ದಾರೆ.
ಬಂಧಿತ ಭಾಸ್ಕರ ಮೊಗವೀರ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ ಕೋರ್ಟಿಗೆ ಹಾಜರುಪಡಿಸಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಾಲಾರೋಪಿಯನ್ನು ಬಾಲರಕ್ಷಣಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಉಳಿದಂತೆ ಬಂಧನವಾದ ಆರೋಪಿಗಳನ್ನು ಹಂತ-ಹಂತವಾಗಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ಕೋರ್ಟಿಗೆ ಹಾಜರುಪಡಿಸಲಾಗುವುದು. ಕೆಲವರಿಗೆ ಈಗಾಗಲೇ ನ್ಯಾ. ಬಂಧನ ವಿಧಿಸಲಾಗಿದೆ. ಮತ್ತೆ ಬಂಧಿತರಾದವರನ್ನು ಕೋರ್ಟಿಗೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅವರಿಗೂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ. “24×7 ಪೊಲೀಸ್ ತಂಡ ಸಕ್ರಿಯ’
ಕುಂದಾಪುರ ಡಿವೈಎಸ್‌ಪಿ, ವೃತ್ತ ನಿರೀಕ್ಷಕರು ಹಾಗೂ ಕುಂದಾಪುರ ಠಾಣಾಧಿಕಾರಿ ಹೀಗೆ 3 ತಂಡಧಿಗಳಾಗಿ ಆರೋಪಿಗಳ ಬಂಧನ ಕಾರ್ಯದಲ್ಲಿ ತೊಡಗಿದ್ದಾರೆ. ಉಳಿದವರ ಶೋಧ ಮುಂದುವರಿದಿದೆ. ಜಿಲ್ಲಾಧಿಕಾರಿಧಿಗಳ ನಿರ್ದೇಶನದಂತೆ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಪೊಲೀಸ್ ಅಧಿಕಾರಿ, ಸಿಬಂದಿ ಸಾಕಷ್ಟು ಮಟ್ಟಿಗೆ ಗರಿಷ್ಠ ಮಟ್ಟದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲು ಯೋಜನೆ ರೂಪಿಸಿಕೊಂಡು ಗಸ್ತು ನಡೆಸುತ್ತಿದ್ದಾರೆ.
Related Articles
ಜಿಲ್ಲಾಡಳಿತಕ್ಕೇ ಸವಾಲಾಗಿ ಬೆಳೆದಿರುವ ಅಕ್ರಮ ಮರಳುಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಈಗಾಗಲೇ ಟಾಸ್ಕ್ಧಿಫೋರ್ಸ್ ಸಭೆಯನ್ನು ಕರೆದು ಏನೇನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಸ್ಪಷ್ಟವಾದ ಸೂಚನೆಯನ್ನು ಆಯಾ ಇಲಾಖಾಧಿಕಾರಿಗಳಿಗೆ ನೀಡಿದ್ದಾರೆ. ಅದರಂತೆ ಪೊಲೀಸರು ಕಾರ್ಯಾಚರಣೆ ನಿರತರಾಗಿದ್ದಾರೆ.
Advertisement