Advertisement
ಮರಳು ದಂಧೆಯ ತಂಡಗಳು ರಾತ್ರಿ ಹಗಲೆನ್ನದೆ ಬತ್ತುತ್ತಿರುವ ಹೊಳೆಗಳಿಂದ ಕಾನೂನು ನಿಬಂಧನೆಗಳನ್ನೆಲ್ಲ ಗಾಳಿಗೆ ತೂರಿ ಮರಳು ಲೂಟಿ ನಡೆಸುತ್ತಿರುವುದಾಗಿ ಪರಿಸರ ನಿವಾಸಿಗಳು ಹೇಳುತ್ತಿದ್ದಾರೆ.
Related Articles
Advertisement
ಲಕ್ಷಾಂತರ ರೂ. ಆದಾಯದ ಮೂಲಈ ಹಿಂದೆ ಪೊಲೀಸ್, ಭೂಗರ್ಭ ವಿಭಾಗ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಮರಳು ಸಾಗಾಟ ತಂಡಗಳ ವಿರುದ್ಧ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿತ್ತು. ಸರಕಾರದ ಖಜಾನೆಗೆ ಲಕ್ಷಾಂತರ ರೂ. ಆದಾಯ ಈ ಸಂದರ್ಭ ದಕ್ಕಿತ್ತು. ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಅಂಗಡಿಮೊಗರಿ ನಿಂದ ಪಾಂಬಾಟಿಯವರೆಗಿನ ಪ್ರದೇಶಗಳಲ್ಲಿ ಹೊರ ರಾಜ್ಯದ ಕಾರ್ಮಿಕರಾದ ಬಂಗಾಳಿಗಳ ಮೂಲಕ ಮರಳು ಲೂಟಿ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಂಗಡಿಮೊಗರಿನ ಮಟ್ಟಂಪಾಡಿಯಿಂದ ಪಾಂಬಾಟಿಯವರೆಗೆ ಮರಳುಗಾರಿಕೆ ನಡೆಯುತ್ತಿದೆ. ಶಿರಿಯ ಹೊಳೆ ಭಾಗಗಳಾದ ಇವು ಪಾಂಬಾಟಿಯಲ್ಲಿ ಪುತ್ತಿಗೆ ಹೊಳೆಗೆ ಸೇರಿಕೊಳ್ಳುತ್ತವೆ. ಇದಲ್ಲದೆ ಪುತ್ತಿಗೆ ಸೇತುವೆಯ ಸಮೀಪದಲ್ಲೂ ಮರಳುಗಾರಿಕೆ ಭಾರಿ ವೇಗದಲ್ಲಿ ನಡೆಯುತ್ತಿದೆ. ಮಳೆಗಾಲ ನಿಂತ ಕೂಡಲೇ ಇಲ್ಲಿ ಮರಳುಗಾರಿಕೆ ಬಲಗೊಳ್ಳುತ್ತದೆ ಎಂದು ನಾಗರಿಕರು ಹೇಳುತ್ತಿದ್ದಾರೆ. ಅಕ್ಟೋಬರ್‌ನಿಂದ ಜೂನ್ ಮೊದಲ ವಾರದವರೆಗೆ ಇಲ್ಲಿ ಮರಳುಗಾರಿಕೆ ಸರ್ವೇಸಾಮಾನ್ಯವಾಗಿದೆ. ಹಲವು ಬಾರಿ ಕುಂಬಳೆ ಪೊಲೀಸ್ ಠಾಣೆ, ಮಂಜೇಶ್ವರ ತಾಲೂಕು ಕಚೇರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ. ಇದಕ್ಕೆ ಉನ್ನತ ಅ ಧಿಕಾರಿಗಳ ಸಹಾಯ ಇದೆ ಎಂಬ ಸಂಶಯ ನಾಗರಿಕರಲ್ಲಿ ಬಲವಾಗಿದೆ. ಪ್ರತಿ ವರ್ಷವೂ ಪುತ್ತಿಗೆ, ಅಂಗಡಿಮೊಗರು ಭಾಗಗಳಲ್ಲಿ ಮರಳು ಗಾರಿಕೆ ನಡೆಯುತ್ತದೆ. ಟನ್‌ಗಟ್ಟಲೆ ಮರಳು ಲೂಟಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಳೆ ನಿಂತೊಡನೆ ಈ ಹೊಳೆಗಳಿಗೆ ವಾಹನಗಳು ಇಳಿಯುತ್ತವೆ. ಹೊಳೆಗಳಲ್ಲಿ ವಾಹನಗಳ ಚಕ್ರಗಳ ಗುರುತು ಕಾಣಿಸಿಕೊಳ್ಳುತ್ತಿದ್ದು, ರಸ್ತೆಗಳೇ ರೂಪುಗೊಂಡಂತಿದೆ. ವಿದ್ಯಾರ್ಥಿಗಳ ಬಳಕೆ
ಹೊಳೆಯಿಂದ ತೆಗೆಯುವ ಮರ ಳನ್ನು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಿಡ ಲಾಗುತ್ತದೆ. ಬಳಿಕ ಟಿಪ್ಪರ್ ಲಾರಿ ಮತ್ತಿತರ ವಾಹನಗಳಲ್ಲಿ ಸಾಗಿಸುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ. ಮರಳುಗಾರಿಕೆ ನಡೆಸಲು ಶಾಲಾ ವಿದ್ಯಾರ್ಥಿಗಳನ್ನು ಕೂಡ ಬಳಸು ತ್ತಿರುವ ಆರೋಪವಿದೆ. ಈ ರೀತಿ ಮರಳು ಗಾರಿಕೆ ಸಂದರ್ಭ ವರ್ಷಗಳ ಹಿಂದೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆ ಯೊಂದರ ನೀರಿನಲ್ಲಿ ಬಾಲಕನೋರ್ವ ಮುಳುಗಿ ಸಾವಿಗೀಡಾದ ಘಟನೆಯೂ ನಡೆದಿತ್ತು. ಈ ಮಧ್ಯೆ ಅಂಗಡಿಮೊಗರು, ಏಳಾನ ಮೊದಲಾದ ಕಡೆಗಳ ಹೊಳೆಗಳಿಂದ ಶಾಲಾ ವಿದ್ಯಾರ್ಥಿ ಗಳನ್ನು ಬಳಸಿಕೊಂಡು ಮರಳುಗಾರಿಕೆ ನಡೆಸುತ್ತಿರುವುದನ್ನು ಸ್ಥಳೀಯರು ತಡೆದಿದ್ದರು.