Advertisement
ಆ್ಯಪ್ ಮೂಲಕ ಮೇ 22ರಿಂದಇದುವರೆಗೆ 11,466 ಬೇಡಿಕೆಗಳು ಸ್ವೀಕೃತವಾಗಿದ್ದು, 11,028 ಬೇಡಿಕೆ ಗಳಿಗೆ ಮರಳನ್ನು ಪೂರೈಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರ ಪ್ರಕಟನೆ ತಿಳಿಸಿದೆ.
ಸಿಆರ್‌ಝಡ್ ಪ್ರದೇಶದಲ್ಲಿನ ಮರಳು ಪ್ರತಿ ಲೋಡ್‌ಗೆ 5,500 ರೂ. ಹಾಗೂ ತುಂಬೆ ಅಣೆಕಟ್ಟಿನಿಂದ ಮೇಲೆತ್ತಿದ ಮರಳು ಪ್ರತಿ ಲೋಡ್‌ಗೆ 4,830 ರೂ. ಇದೆ. ಕ್ರೆಡಾೖ, ಸಿವಿಲ್ ಕಂಟ್ರಾಕ್ಟರ್ ಅಸೋಸಿಯೇಶನ್, ವಾಹನ ಮಾಲಕರು ಮತ್ತು ಎಲ್ಲ ತಾತ್ಕಾಲಿಕ ಪರವಾನಿಗೆದಾರರೊಂದಿಗೆ ಅ. 11ರಂದು ಸಭೆ ನಡೆಸಿ ಅಹವಾಲು ಮತ್ತು ಬೇಡಿಕೆಗಳನ್ನು ಸ್ವೀಕರಿಸಲಾಗಿದ್ದು, ಪ್ರಸ್ತುತ ಆ್ಯಪ್‌ನಲ್ಲಿ ಕೆಲವು ಮಾರ್ಪಾಟು ಮಾಡಿ ಬಲ್ಕ್ ಆರ್ಡರ್‌ಗಳನ್ನು ಸ್ವೀಕರಿಸಲಾಗುತ್ತಿದೆ. ಪಿಡಿಒಗಳಿಂದ ಆ್ಯಪ್ ಬಳಕೆ ಮಾಹಿತಿ
ಜನಸಾಮಾನ್ಯರು ಕೂಡ ಸ್ಯಾಂಡ್ ಬಜಾರ್ ಆ್ಯಪ್‌ನ ಮೂಲಕ ಮರಳು ಬೇಡಿಕೆಯನ್ನು ನೋಂದಾಯಿಸುವ ಬಗ್ಗೆ ಹಾಗೂ ಆ್ಯಪ್ ಬಳಸುವ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿಸಲು ಆಯಾ ಗ್ರಾ.ಪಂ.ಗಳಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅ. 16ರಂದು ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಎಲ್ಲ ಗ್ರಾಹಕರು ಸ್ಯಾಂಡ್ ಬಜಾರ್ ಆ್ಯಪ್ ಮೂಲಕವೇ ಮರಳಿನ ಬೇಡಿಕೆ ನೋಂದಣಿ ಮಾಡಲು ತಮ್ಮ ಗ್ರಾ.ಪಂ.ಗಳಲ್ಲಿ ಮಾಹಿತಿ ಪಡೆಯಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.