Advertisement

ಹಿನ್ನೀರಿನ ನದಿ ಪಾತ್ರದಲ್ಲಿ ಮರಳುಗಾರಿಕೆಗೆ ಕಾರ್ಯಾದೇಶ; ಮರಳು ಲಭ್ಯ: ಜಿಲ್ಲಾಧಿಕಾರಿ

02:13 AM Apr 06, 2022 | Team Udayavani |

ಮಂಗಳೂರು: ಫಲ್ಗುಣಿ ನದಿ ಪಾತ್ರದ ಅದ್ಯಪಾಡಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶ ಮತ್ತು ನೇತ್ರಾವತಿ ನದಿ ಪಾತ್ರದ ಶಂಭೂರು ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳಿನೊಂದಿಗೆ ಮರಳನ್ನು ತೆಗೆಯಲು ಜಿಲ್ಲಾ ಮರಳು ಸಮಿತಿಯಿಂದ ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೊರೇಶನ್‌ ಲಿ. (ಕೆಎಸ್‌ಎಂಸಿಎಲ್‌) ಗೆ ಅಧಿಸೂಚನೆ ಹೊರಡಿಸಿ ಕಾರ್ಯಾದೇಶ ನೀಡಲಾಗಿದೆ.

Advertisement

ಡ್ಯಾಂಗಳಲ್ಲಿ ಹೂಳನ್ನು ತೆಗೆಯಲು ಕರೆಯಲಾಗಿದ್ದ ಟೆಂಡರ್‌ ಪ್ರಕ್ರಿಯೆಯ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್‌ ವಜಾಗೊಂಡಿದೆ. ಕಾರ್ಯಾದೇಶದ ಅನ್ವಯ ಹೂಳೆತ್ತುವ ಕೆಲಸವನ್ನು ಪ್ರಾರಂಭಿಸಲಾಗಿದೆ.
ಪ್ರಸ್ತುತ ಈ ಡ್ಯಾಂಗಳಲ್ಲಿ ಹೂಳಿನೊಂದಿಗೆ ದೊರಕುವ ಮರಳನ್ನು ತೆಗೆದು ಸ್ಟಾಕ್‌ ಯಾರ್ಡ್‌ನಲ್ಲಿ ಶೇಖರಣೆ ಮಾಡುತ್ತಿದ್ದು, ಅದ್ಯಪಾಡಿ ಮರಳು ದಾಸ್ತಾನು ಪ್ರದೇಶದಲ್ಲಿ ಸುಮಾರು 15 ಸಾವಿರ ಮೆ. ಟನ್‌ ಮತ್ತು ಶಂಭೂರು ಮರಳು ದಾಸ್ತಾನು ಪ್ರದೇಶದಲ್ಲಿ ಅಂದಾಜು 700 ಮೆ. ಟನ್‌ ಮರಳು ಲಭ್ಯವಿದೆ.

ಈ ಮರಳನ್ನು ಗ್ರಾಹಕರಿಗೆ ಕೆಎಸ್‌ಎಂಸಿಎಲ್‌ ವತಿಯಿಂದ ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ ವಿತರಿಸಲಾಗುವುದು.

ಸಾರ್ವಜನಿಕರು, ಕಾಮಗಾರಿಗಳ ಗುತ್ತಿಗೆದಾರರು https://sand.karnataka.gov.in ಮರಳು ಮಿತ್ರ ಆ್ಯಪ್‌ನ ಮುಖಾಂತರ ಪ್ರತೀ ಮೆ.ಟನ್‌ ಮರಳಿಗೆ 700 ರೂ. ಮೊತ್ತವನ್ನು ಪಾವತಿಸಿ ಮರಳನ್ನು ಪಡೆಯಬಹುದು ಎಂದು ಜಿಲ್ಲಾ ಮರಳು ಸಮಿತಿಯ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಸಿಆರ್‌ಝಡ್‌: ಪರವಾನಿಗೆ ಕೋರಿ 282 ಅರ್ಜಿಗಳು
ಮಂಗಳೂರು: ಸಿಆರ್‌ಝಡ್‌ನ‌ಲ್ಲಿ ಮರಳು ಗಾರಿಕೆಗೆ ಪರವಾನಿಗೆ ಕೋರಿ 282 ಅರ್ಜಿಗಳು ಬಂದಿದ್ದು, ಪರಿಶೀಲನೆ ನಡೆಯುತ್ತಿದೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸಭೆ ಮುಂದಿನ ವಾರ ನಡೆಯುವ ಸಾಧ್ಯತೆಗಳಿದ್ದು, ಸಭೆಯಲ್ಲಿ ಚರ್ಚಿಸಿ ಪರವಾನಿಗೆಗಳನ್ನು ಮಂಜೂರು ಮಾಡಲಾಗುತ್ತದೆ.

Advertisement

ಸಿಆರ್‌ಝಡ್‌ನ‌ ನೇತ್ರಾವತಿ ನದಿಯಲ್ಲಿ 9 ಬ್ಲಾಕ್‌ಗಳು ಮತ್ತು ಫಲ್ಗುಣಿ ನದಿಯಲ್ಲಿ 5 ಬ್ಲಾಕ್‌ಗಳ ಸಹಿತ ಒಟ್ಟು 14 ಬ್ಲಾಕ್‌ಗಳಲ್ಲಿ ಮರಳು ತೆರವಿಗೆ ಈ ಬಾರಿ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ) ಪರಿಸರ ವಿಮೋಚನ ಪತ್ರ ನೀಡಿದೆ. ಕಳೆದ ಬಾರಿ ನೇತ್ರಾವತಿ ನದಿಯಲ್ಲಿ 8, ಫಲ್ಗುಣಿ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ 1 ಬ್ಲಾಕ್‌ ಸಹಿತ 13 ಬ್ಲಾಕ್‌ಗಳಲ್ಲಿ ಮರಳು ತೆರವಿಗೆ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಪರವಾನಿಗೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next