Advertisement

ಸುಲಭ ದರದಲ್ಲಿ ಮರಳು; ತಪ್ಪಿದರೆ ಕ್ರಮ: ಜಿಲ್ಲಾಡಳಿತ

01:57 AM Nov 12, 2019 | Sriram |

ಉಡುಪಿ: ಸಾರ್ವಜನಿಕರಿಗೆ ಸುಲಭ ದರದಲ್ಲಿ ಸಾಕಷ್ಟು ಮರಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅವಕಾಶ ನೀಡಲಾಗಿದೆ. ಹಾಗಿದ್ದೂ ಕೆಲವು ಪರವಾನಿಗೆದಾರರು ಹಾಗೂ ಸಾಗಾಟ ವಾಹನದವರು ಹೆಚ್ಚಿನ ದರವನ್ನು ಪಡೆಯುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Advertisement

ಮರಳು ಗ್ರಾಹಕರು ಸಾಗಾಟ ಪರವಾನಿಗೆಯನ್ನು (MDP) ಸಾಗಾಣಿಕೆದಾರರಿಂದ ಕಡ್ಡಾಯವಾಗಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಅನಧಿಕೃತ ಮರಳು ಎಂದು ಪರಿಗಣಿಸಿ ಮುಂದಿನ ಕ್ರಮ ಜರಗಿಸಲಾಗುತ್ತದೆ. ಪಿಡಬ್ಲೂ$Âಡಿ ಗುತ್ತಿಗೆದಾರರು, ಸಾರ್ವಜನಿಕರು ಕಾಮಗಾರಿಗಳಿಗೆ ಅಗತ್ಯಕ್ಕನುಸಾರ ಮರಳನ್ನು ಪಡೆಯಬಹುದು. ಇದನ್ನು ಹೊರತುಪಡಿಸಿ ಅನಧಿಕೃತ ಮರಳುಗಾರಿಕೆ/ ಸಾಗಾಟ/ ದಾಸ್ತಾನು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಉಲ್ಲಂಘಿಸಿದರೆ ಗೂಂಡಾ ಕಾಯಿದೆ
ಪ್ರಕರಣಗಳು ಪುನರಾವರ್ತನೆಯಾದರೆ ನಿಯಮಾ ನುಸಾರ ಗೂಂಡಾ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಜಿ. ಜಗದೀಶ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮರಳಿನ, ಸಾಗಾಟ ದರ ವೆಚ್ಚದ ವಿವರ
ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ (ಪ್ರದೇಶದ ಸ್ವರ್ಣಾ, ಸೀತಾ ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳಿಂದ ತೆರವುಗೊಳಿಸಿದ ಮರಳಿನ ದರ ಪ್ರತಿ ಮೆ.ಟನ್‌ಗೆ (ಸಾಗಾಟ ಪರವಾನಿಗೆಯೊಂದಿಗೆ): 550 ರೂ., 3 ಯುನಿಟ್‌ಗೆ (10 ಮೆ.ಟನ್‌) 5,500 ರೂ.

ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿ ಕುಂದಾಪುರ ತಾಲೂಕಿನ ಮರಳು ಬ್ಲಾಕ್‌ ಸಂಖ್ಯೆ: 4 ರ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಮತ್ತು 6 ರ ಜಪ್ತಿ- ಹಳ್ನಾಡು ಗ್ರಾಮದ ವ್ಯಾಪ್ತಿಯಲ್ಲಿ) ಮರಳುಗಾರಿಕೆ ನಡೆಸಿ ತೆಗೆದ ಮರಳಿನ ದಾಸ್ತಾನು/ ಶೇಖರಣೆ ಸ್ಥಳದಿಂದ ದರ ಪ್ರತಿ ಮೆ.ಟನ್‌ಗೆ (ಸಾಗಾಟ ಪರವಾನಿಗೆಯೊಂದಿಗೆ): 650 ರೂ. 3 ಯುನಿಟ್‌ಗೆ: 6,500 ರೂ..

Advertisement

ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ (10 ಮೆ.ಟನ್‌ ಗೆ): ದೊಡ್ಡ ಲಾರಿಗೆ 3,000 ರೂ. (20 ಕಿ.ಮೀ. ವರೆಗೆ), ಅನಂತರದ ಪ್ರತಿ ಕಿ.ಮೀಗೆ 50 ರೂ. ಗಳು. ಮಧ್ಯಮ ಗಾತ್ರದ ವಾಹನಗಳಿಗೆ 2,000 ರೂ. (20 ಕಿ.ಮೀ. ವರೆಗೆ), ಅನಂತರದ ಪ್ರತಿ ಕಿ.ಮೀ.ಗೆ 40 ರೂ.ಗಳು. ಸಣ್ಣ ವಾಹನಗಳಿಗೆ 1,500 ರೂ. (20 ಕಿ.ಮೀ. ವರೆಗೆ), ಅನಂತರದ ಪ್ರತಿ ಕಿ.ಮೀ.ಗೆ 35 ರೂ.

ಹೆಚ್ಚಿನ ದರ ವಿಧಿಸಿದಲ್ಲಿ ಮಾಹಿತಿ ನೀಡಿ
ನಿಗದಿಗಿಂತ ಹೆಚ್ಚಿನ ದರ ವಿಧಿಸಿದಲ್ಲಿ ಹಿರಿಯ ಭೂಜ್ಞಾನಿಯವರ ಕಚೇರಿ, ಗಣಿ ಮತ್ತು ಭೂಜ್ಞಾನ ಇಲಾಖೆ ಉಡುಪಿ: 0820-2572333, ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 0820-2574802, 1077 (ಟೋಲ್‌ ಫ್ರೀ), ಮಹೇಶ ಭೂವಿಜ್ಞಾನಿ : 9632742629, ಡಾ| ಮಹದೇಶ್ವರ ಎಚ್‌. ಎಸ್‌., ಭೂವಿಜ್ಞಾನಿ : 9483096118, ಗೌತಮ್‌ ಶಾಸಿŒ ಎಚ್‌., ಭೂವಿಜ್ಞಾನಿ : 9008917890, ಸಂಧ್ಯಾಕುಮಾರಿ, ಭೂವಿಜ್ಞಾನಿ: 9901370559, ಹಾಜಿರಾ ಸಜಿನಿ ಎಸ್‌., ಭೂಜ್ಞಾನಿ : 9663836959 ಅವರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next