Advertisement

ಧರ್ಮಾರಣ್ಯ: ಹವ್ಯಕ ಮಂಡಲದ ಮಾಸಿಕ ಸಭೆ

02:30 AM Jul 13, 2017 | Harsha Rao |

ಕಾಸರಗೋಡು: ಮುಳ್ಳೇರಿಯಾ ಹವ್ಯಕ ಮಂಡಲದ ಮಾಸಿಕ ಸಭೆ ಶ್ರೀ ರಾಮಚಂದ್ರಾಪುರ ಮಠದ ಅಂಗ ಸಂಸ್ಥೆಯಾದ ಸುಳ್ಯ ವಲಯದ ಅರಂಬೂರು ಸರಳಿಕುಂಜ ಧರ್ಮಾರಣ್ಯದಲ್ಲಿ ಜರಗಿತು.

Advertisement

ಸಭೆಯು ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂ ದಿಗೆ ಪ್ರೊ| ಶ್ರೀಕೃಷ್ಣ ಭಟ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಪ್ರಾಸ್ತಾವಿಕ ಗತ ಸಭಾ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು. ವಿಶೇಷ ಅಭ್ಯಾಗತರಾಗಿ ಮಹಾ ಮಂಡಲದ ಜೀವಿಕ ವಿಭಾಗದ ಪ್ರಧಾನರಾದ ಬಾಲಸುಬ್ರಹ್ಮಣ್ಯ ಭಟ್‌ ಮತ್ತು ಬೆಂಗಳೂರು ಮಂಡಲ ಕಾರ್ಯದರ್ಶಿ ಶ್ರೀಕಾಂತ್‌ ಹೆಗ್ಡೆ ಅವರು ಭಾಗವಹಿಸಿದರು. ಬಾಲಸುಬ್ರಹ್ಮಣ್ಯ ಭಟ್‌ ಅವರು ಸಂಘಟನಾತ್ಮಕ ವಿಷಯ ಮತ್ತು ಜೀವಿಕಾ ವಿಭಾಗದ ಕಾರ್ಯಯೋಜನೆಯ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಡಾ| ಕೃಷ್ಣಮೂರ್ತಿ ಅವರ ಬಗ್ಗೆ ಪ್ರಶಸ್ತಿ ವಿಚಾರವಾಗಿ ವಿವರಣೆಗಳನ್ನಿತ್ತರು. 

ಶ್ರೀಕಾಂತ ಹೆಗ್ಡೆ ಅಭಯಾಕ್ಷರ ಅಭಿಯಾನ ಅಭಯ ಚಾತುರ್ಮಾಸ್ಯದ ಬಗ್ಗೆ ವಿವರಣೆಗಳನ್ನಿತ್ತರು. ಶ್ರೀರಾಮ ಚಂದ್ರಾಪುರ ಮಠದ ಕಾಮದುಘಾ ಯೋಜನೆಯ ಸಂಚಾಲಕ ರಾದ ಡಾ| ವೈ.ವಿ. ಕೃಷ್ಣಮೂರ್ತಿ ಅವರಿಗೆ ಅನವರತ ಗೋ ಸೇವೆಯನ್ನು ಗುರುತಿಸಿ ವಿರಾಟ್‌ ಹಿಂದೂಸ್ತಾನ್‌ ಸಂಘಂ ಸಂಘಟನೆಯು ದೇಶೀಯ ಮಟ್ಟದ ವಿಶೇಷ ಗೋ ಸೇವಾ ಪ್ರಶಸ್ತಿ ನೀಡಿದ್ದು ಆ ಪ್ರಯುಕ್ತ ಅವರನ್ನು ಮಂಡಲ ವತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು.

ಗೋಕರ್ಣ ಅಶೋಕೆಯಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ತಾಮ್ರ ಕಲಶ ಮತ್ತು ರಜತ ಕಲಶ ಸೇವೆ ಮಾಡಿಸಿದವರಿಗೆ ಪ್ರಸಾದವನ್ನು ವಲಯದವರ ಮೂಲಕ ವಿತರಿಸಲಾಯಿತು.
ಶ್ರೀ ಗುರುಗಳು ಆಶೀರ್ವದಿಸಿ ಅನುಗ್ರಹಿಸಿ ನೀಡಿರುವ ರುದ್ರಾಕ್ಷಿಯನ್ನು ಎಲ್ಲಾ ವಲಯದವರಿಗೆ ಹಸ್ತಾಂತರಿಸಲಾಯಿತು ಹಾಗು ರುದ್ರಾಕ್ಷಿಯನ್ನು ವ್ಯಾಸ ಮಂತ್ರಾಕ್ಷತೆಯೊಂದಿಗೆ ಪ್ರತಿ ಮನೆಗಳಿಗೆ ತಲುಪಿಸಲು ತೀರ್ಮಾನಿಸಲಾಯಿತು. 

ಉಪಾಧ್ಯಕ್ಷ ಕುಮಾರ್‌ ಪೈಸಾರಿ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್‌ ಗಬ್ಬಲಡ್ಕ, ಮಂಡಲ ಗುರಿಕ್ಕಾರ ಮೂಗ್ರ ಸತ್ಯನಾರಾಯಣ ಭಟ್‌, ಮೂಲಮಠ ಅಶೋಕೆಯ ಪ್ರತಿನಿಧಿ ಎಂ.ಎನ್‌.ಹರೀಶ್‌ ಶುಂಠಿಕೊಪ್ಪ, ಮಂಡಲ ಪದಾಧಿಕಾರಿಗಳು ಹಾಗು ವಲಯ ಪದಾಧಿಕಾರಿಗಳು ಮೊದಲಾದವರು ಸಭೆಯಲ್ಲಿ ಪಾಲ್ಗೊಂಡರು.

Advertisement

ಸುಳ್ಯ ಹವ್ಯಕ ವಲಯದ ಪದಾಧಿಕಾರಿಗಳು, ಗುರಿಕ್ಕಾರರು ಹಾಗು ಧರ್ಮಾರಣ್ಯದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸಭೆಯನ್ನು ಯಶಸ್ಸುಗೊಳಿಸಲು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next