Advertisement
ಸಭೆಯು ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂ ದಿಗೆ ಪ್ರೊ| ಶ್ರೀಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಪ್ರಾಸ್ತಾವಿಕ ಗತ ಸಭಾ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು. ವಿಶೇಷ ಅಭ್ಯಾಗತರಾಗಿ ಮಹಾ ಮಂಡಲದ ಜೀವಿಕ ವಿಭಾಗದ ಪ್ರಧಾನರಾದ ಬಾಲಸುಬ್ರಹ್ಮಣ್ಯ ಭಟ್ ಮತ್ತು ಬೆಂಗಳೂರು ಮಂಡಲ ಕಾರ್ಯದರ್ಶಿ ಶ್ರೀಕಾಂತ್ ಹೆಗ್ಡೆ ಅವರು ಭಾಗವಹಿಸಿದರು. ಬಾಲಸುಬ್ರಹ್ಮಣ್ಯ ಭಟ್ ಅವರು ಸಂಘಟನಾತ್ಮಕ ವಿಷಯ ಮತ್ತು ಜೀವಿಕಾ ವಿಭಾಗದ ಕಾರ್ಯಯೋಜನೆಯ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಡಾ| ಕೃಷ್ಣಮೂರ್ತಿ ಅವರ ಬಗ್ಗೆ ಪ್ರಶಸ್ತಿ ವಿಚಾರವಾಗಿ ವಿವರಣೆಗಳನ್ನಿತ್ತರು.
ಶ್ರೀ ಗುರುಗಳು ಆಶೀರ್ವದಿಸಿ ಅನುಗ್ರಹಿಸಿ ನೀಡಿರುವ ರುದ್ರಾಕ್ಷಿಯನ್ನು ಎಲ್ಲಾ ವಲಯದವರಿಗೆ ಹಸ್ತಾಂತರಿಸಲಾಯಿತು ಹಾಗು ರುದ್ರಾಕ್ಷಿಯನ್ನು ವ್ಯಾಸ ಮಂತ್ರಾಕ್ಷತೆಯೊಂದಿಗೆ ಪ್ರತಿ ಮನೆಗಳಿಗೆ ತಲುಪಿಸಲು ತೀರ್ಮಾನಿಸಲಾಯಿತು.
Related Articles
Advertisement
ಸುಳ್ಯ ಹವ್ಯಕ ವಲಯದ ಪದಾಧಿಕಾರಿಗಳು, ಗುರಿಕ್ಕಾರರು ಹಾಗು ಧರ್ಮಾರಣ್ಯದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸಭೆಯನ್ನು ಯಶಸ್ಸುಗೊಳಿಸಲು ಸಹಕರಿಸಿದರು.