ಮುಂಬಯಿ: ಔರಂಗಾಬಾದ್‌ನಾದ್ಯಂತ ರೆಸ್ಟೋರೆಂಟ್‌ಗಳ ಸಮಯದ ಮಿತಿ ವಿಸ್ತರಿಸುವಂತೆ ಮಂಗಳವಾರ ಔರಂಗಾಬಾದ್ ಉಸ್ತುವಾರಿ ಸಚಿವ ಸುಭಾಶ್ ದೇಸಾಯಿ ಅವರನ್ನು ಆಹಾರ್ ನಿಯೋಗವು ಭೇಟಿಯಾಯಿತು.
ಆಹಾರ್ ನಿಯೋಗದಲ್ಲಿ ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಆಹಾರ್ ವಿವಿಧ ವಲಯಗಳ ಉಪಾಧ್ಯಕ್ಷರಾದ ಧೀರಾಜ್ ಶೆಟ್ಟಿ ಮತ್ತು ವಿಜಯ್ ಶೆಟ್ಟಿ ಉಪಸ್ಥಿತರಿದ್ದರು.
ಔರಂಗಾಬಾದ್ ಸಹಿತ ಕೆಲವು ಜಿಲ್ಲೆಗಳಲ್ಲಿ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ಸಮ ಯದ ಮಿತಿ ನೀಡಿರುವುದರಿಂದ ವ್ಯವಹಾರಕ್ಕೆ ಆಗಿ ರುವ ತೊಂದರೆಯನ್ನು ನಿವಾರಿಸುವಂತೆ ಆಹಾರ್ ಸದಸ್ಯ ಸಂಸ್ಥೆಯಾಗಿರುವ ಔರಂಗಾಬಾದ್ ಹೊಟೇಲ್ ಅಸೋಸಿಯೇಶನ್ ಈಗಾಗಲೇ ಆಹಾರ್‌ಗೆ ಮನವಿ ಮಾಡಿರುವುದನ್ನು ಪರಿಗಣಿಸಿ ಆಹಾರ್ ನಿಯೋ ಗವು ಸಚಿವರನ್ನು ಭೇಟಿ ಮಾಡಿ ಹೊಟೇಲ್ ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರ ನೀಡಿತು.
ಔರಂಗಾಬಾದ್‌ನಲ್ಲಿ ಹೊಟೇಲ್‌ಗಳಿಗೆ ಸಮ ಯದ ಮಿತಿ ನೀಡಿರುವುದರಿಂದ ಸ್ಥಳೀಯ ಮಟ್ಟ ದಲ್ಲಿ ನಿರುದ್ಯೋಗವು ಉಲ್ಬಣಗೊಂಡಿದೆ. ಇದು ಕಳೆದ ಎರಡು ವರ್ಷಗಳಿಂದ ಆಗಾಗ್ಗೆ ವಿಧಿÓ ಲಾ ಗುತ್ತಿರುವ ಲಾಕ್‌ಡೌನ್ ಮತ್ತು ನಿರ್ಬಂಧಿತ ಸಮಯಗಳಿಂದ ಭಾರೀ ನಷ್ಟದಲ್ಲಿ ತತ್ತರಿಸು ತ್ತಿರುವ ಹೊಟೇಲ್ ಉದ್ಯಮಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ ಎಂದು ಆಹಾರ್ ಮನವಿಯಲ್ಲಿ ತಿಳಿಸಿದೆ. ಅಲ್ಲದೆ ಸಮಯದ ವಿಸ್ತರಣೆಯಿಂದ ರೆಸ್ಟೋರೆಂಟ್‌ಗಳಲ್ಲಿ ಜನಸಂದಣಿ ಕಡಿಮೆ ಮಾಡುವುದರೊಂದಿಗೆ ಕೊರೊನಾ ಮಾರ್ಗಸೂಚಿಗಳ ಪಾಲನೆಯನ್ನು ಖಚಿತಪಡಿಸಿದೆ. ಹೊಟೇಲ್ ಉದ್ಯಮವು ಈಗಾಗಲೇ ನಷ್ಟದಲ್ಲಿ ನಡೆಯುತ್ತಿದ್ದು, ಈ ಸಂದರ್ಭ ಅಬಕಾರಿ ಶುಲ್ಕದಲ್ಲಿನ ಶೇ. 15ರಷ್ಟು ಹೆಚ್ಚಳವು ಉದ್ಯಮಕ್ಕೆ ಬರೆ ಎಳೆದಂತಾಗಿದೆ. ಇದನ್ನು ಮರುಪರಿಶೀಲಿಸುವಂತೆ ಸಚಿವರನ್ನು ಆಹಾರ್ ವಿನಂತಿಸಿತು.
ಆಹಾರ್‌ನ ಮನವಿ ಸ್ವೀಕರಿಸಿದ ಔರಂಗಾ ಬಾದ್‌ನ ಉಸ್ತುವಾರಿ ಸಚಿವ ಸುಭಾಶ್ ದೇಸಾಯಿ ಅವರು, ತತ್‌ಕ್ಷಣ ಔರಂಗಾಬಾದ್‌ನ ಜಿಲ್ಲಾಧಿ ಕಾರಿಗೆ ಕರೆ ಮಾಡಿ, ಕೋವಿಡ್ ಮಾರ್ಗ ಸೂಚಿ ಗಳನ್ನು ಸಂಪೂರ್ಣವಾಗಿ ಅನುಸರಿಸಿಕೊಂಡು ರೆಸ್ಟೋರೆಂಟ್‌ಗಳ ಸಮಯ ವಿಸ್ತರಿಸುವಂತೆ ಆದೇಶಿ ಸಿದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಲಾಕ್‌ಡೌನ್‌ನಿಂದಾಗಿ ಹೊಟೇಲ್ ಉದ್ಯಮವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಬಕಾರಿ ಶುಲ್ಕ ಹೆಚ್ಚಳದ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಚರ್ಚಿಸುತ್ತೇನೆ. ಹೊಟೇಲಿಗರು ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ವ್ಯವಹಾರ ಮುಂದುವರಿಸಬೇಕು ಎಂದು ಸಚಿವರು ಹೇಳಿದರು.
ಸಮಸ್ಯೆ ಪರಿಹರಿಸಲಾಗುವುದು: ಶಿವಾನಂದ ಡಿ. ಶೆಟ್ಟಿ :
ಸಮಯ ವಿಸ್ತರಿಸದ ಕಾರಣ ಔರಂಗಾಬಾದ್ ಜಿಲ್ಲೆಯ ರೆಸ್ಟೋರೆಂಟ್‌ಗಳು ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದವು. ಆದ್ದರಿಂದ ನಾವಿಂದು ಸಚಿವ ಸುಭಾಷ್ ದೇಸಾಯಿ ಅವರನ್ನು ಭೇಟಿಯಾಗಿದ್ದೇವೆ. ತತ್‌ಕ್ಷಣ ಸಚಿವರು ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಶೀಘ್ರ ಕ್ರಮಕೈಗೊಂಡಿದ್ದಕ್ಕಾಗಿ ಅವರಿಗೆ ಕೃತಜ್ಞರಾಗಿದ್ದೇವೆ. ಹೊಟೇಲಿಗರ ಹತಾಶೆಯ ಸಮಯದಲ್ಲಿ ಉದ್ಯಮಕ್ಕೆ ಸರಕಾರದ ಎಲ್ಲ ರೀತಿಯ ಬೆಂಬಲದ ಅಗತ್ಯವಿದೆ. ಅದು ಮುಚ್ಚಿಹೋಗಿರುವ ವ್ಯವಹಾರವನ್ನು ಮತ್ತೆ ತೆರೆಯಲು ಸಹಾಯ ಮಾಡುತ್ತದೆ. ಅಲ್ಲದೆ ಹೊಸ ಹೂಡಿಕೆಗಳನ್ನು ಆಕರ್ಷಿಸುವುದರೊಂದಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಹಲವಾರು ಜಿಲ್ಲೆಗಳಲ್ಲಿ ವ್ಯಾಕ್ಸಿನೇಶನ್ ಕಡಿಮೆಯಾಗಿರುವುದರಿಂದ ವ್ಯಾಕ್ಸಿನೇಶನ್‌ಗೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿಗಳಿಂದಾಗಿ ಹೊಟೇಲ್‌ಗಳು ಇನ್ನೂ ವ್ಯವಹಾರಕ್ಕೆ ಸಂಪೂರ್ಣ ರೀತಿಯಲ್ಲಿ ತೆರೆದುಕೊಂಡಿಲ್ಲ. ಇದರಿಂದ ಹೊಟೇಲಿಗರು ತೊಂದರೆ ಅನುಭವಿಸುತ್ತಿದ್ದಾರೆ. ಅಬಕಾರಿ ಶುಲ್ಕ ಹೆಚ್ಚಳ ಸಹಿತ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ ದೇಬಾಶೀಶ್ ಚಕ್ರಬರ್ತಿ, ಸ್ಟೇಟ್ ರಿಲೀಫ್ ಆ್ಯಂಡ್ ರಿಹ್ಯಾಬಿಲಿಟೇಶನ್‌ನ ಪ್ರಿನ್ಸಿಪಾಲ್ ಸೆಕ್ರೆಟರಿ ಅಸೀಮ್ ಗುಪ್ತಾ ಅವರ ಭೇಟಿಗೆ ಅನುಮತಿ ಸಿಕ್ಕಿದೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ತಿಳಿಸಿದ್ದಾರೆ.