Advertisement

ಮನ್‌ ಕಿ ಬಾತ್‌ನಲ್ಲಿ ನಮ್ಮ ಸಂಚಿಯ ಹೊನ್ನಮ್ಮ!

10:25 AM Oct 30, 2019 | mahesh |

ಹೊಸದಿಲ್ಲಿ: ಈ ಬಾರಿಯ “ಮನ್‌ ಕಿ ಬಾತ್‌’ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣುಮಕ್ಕಳ ಮಹತ್ವವನ್ನು ಒತ್ತಿ ಹೇಳುವುದಕ್ಕಾಗಿ 16ನೇ ಶತಮಾನದ ಕನ್ನಡ ಕವಯಿತ್ರಿ ಸಂಚಿಯ ಹೊನ್ನಮ್ಮ ಅವರ ತ್ರಿಪದಿಯೊಂದನ್ನು ಉದ್ಗರಿಸಿದ್ದಾರೆ.

Advertisement

“ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು, ಪೆಣ್ಣಿಂದ ಭೃಗು ಪೆರ್ಚಿದನು, ಪೆಣ್ಣಿಂದಲೇ ಜನಕ ರಾಯನು ಜಸವಡೆದನು, ಪೆಣ್ಣ ನಿಂದಿಸಲೇಕೆ ಪೆರರು?’ ಎಂದು ಕನ್ನಡದಲ್ಲೇ ಹೇಳುವ ಮೂಲಕ ಮೋದಿ ಸಂಚಿಯ ಹೊನ್ನಮ್ಮನಿಗೆ ಗೌರವ ಸಲ್ಲಿಸಿದ್ದಾರೆ.

ಇದೇ ವೇಳೆ ಅಲಹಾಬಾದ್‌ ಹೈಕೋರ್ಟ್‌ 2010 ರಲ್ಲಿ ಅಯೋಧ್ಯೆ ಭೂವಿವಾದ ತೀರ್ಪು ಪ್ರಕಟಿಸಿ ದಾಗ ಸರಕಾರ, ಪಕ್ಷಗಳು ಮತ್ತು ನಾಗರಿಕ ಸಮಾಜವು ಪ್ರೌಢಿಮೆಯಿಂದ ವರ್ತಿಸಿ ಸಮಾಜದಲ್ಲಿ ಬಿರುಕು ತರುವ ಯತ್ನವನ್ನು ವಿಫ‌ಲಗೊಳಿಸಿದವು. ಒಕ್ಕೊರಲಿನ ಧ್ವನಿಯು ದೇಶವನ್ನು ಹೇಗೆ ಬಲಿಷ್ಠಗೊಳಿಸುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದೂ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next