Advertisement

ಸನಾತನ ಶಿಕ್ಷಣ ಪದ್ಧತಿ ಪರಂಪರೆ ಸಂಸ್ಕೃತಿಗಳ ಮಹತ್ವ; ಉಪನ್ಯಾಸ

08:08 PM Apr 10, 2019 | Team Udayavani |

ಮಹಾನಗರ: ಭಾರತೀಯ ಶಿಕ್ಷಣ ಮಂಡಳಿಯ ಮಂಗಳೂರು ಘಟಕದ ವತಿಯಿಂದ ನಗರದ ಸಂಘನಿಕೇತನದಲ್ಲಿ “ಸನಾತನ ಶಿಕ್ಷಣ ಪದ್ಧತಿ ಪರಂಪರೆ ಸಂಸ್ಕೃತಿಗಳ ಮಹತ್ವ’ದ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವುವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

Advertisement

ಉಪನ್ಯಾಸಕ ಬಾಲಕೃಷ್ಣ ಭಟ್‌ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಸುದರ್ಶನ್‌ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಶಿಕ್ಷಣ ಮಂಡಳಿಯ ಮಂಗ ಳೂರು ಘಟಕದ ಉಪಾಧ್ಯಕ್ಷೆ ಲೇಖಕಿ ಡಾ| ಅರುಣಾ ನಾಗರಾಜ್‌ ಸ್ವಾಗತಿಸಿದರು.

ಮಂಡಳಿಯ ಅಧ್ಯಕ್ಷೆ ಭಾರತಿ ಗಟ್ಟಿ ನೇತೃತ್ವದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿ ಗಳು ಸಂಸ್ಕೃತಭಾಷೆಯ ಅರಿವು ಮೂಡಿ ಸುವ ಹಾಡಿಗೆ ನೃತ್ಯ ಮಾಡಿದರು. ಸಂವಾದ ಕಾರ್ಯಕ್ರಮದಲ್ಲಿ ಅನೇಕ ಪ್ರೇಕ್ಷಕರು ಭಾಗಿಗಳಾದರು ಮತದಾನ ಎಂಬ ಸ್ವರಚಿತ ಕವನವನ್ನು ಡಾ| ಅರುಣಾ ನಾಗರಾಜ್‌ ವಾಚಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next