Advertisement

ಸನಾತನ ಧರ್ಮ ನಮ್ಮ ಉಸಿರು: ವಿದ್ಯಾ ಪ್ರಸನ್ನ ಸ್ವಾಮೀಜಿ

02:04 PM Oct 02, 2017 | Team Udayavani |

ಬಜಪೆ: ಸತ್ಯವೆಂದರೆ ಸನಾತನ ಧರ್ಮದ ತಾಯಿ. ಧರ್ಮವನ್ನು ಮನೆಮನೆಗೆ ತಲುಪಿಸಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಭಗವದ್ಗೀತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು. ಸನಾತನ ಧರ್ಮ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಶ್ರೀ ಸುಬ್ರಹಣ್ಯ ಅಧೋಕ್ಷಜ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.

Advertisement

ಅವರು ಇಲ್ಲಿನ ಶ್ರೀ ಶಾರಾದೋತ್ಸವ ಸಮಿತಿಯ ವತಿಯಿಂದ 25ನೇ ವರ್ಷದ ಪ್ರಯುಕ್ತ ಕೇಂದ್ರ ಮೈದಾನದಲ್ಲಿ ನಡೆದ
ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

 ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀವರ್ಚನ ನೀಡಿ, ಸ್ವಚ್ಚ ಭಾರತದ
ಪರಿಕಲ್ಪನೆಯೊಂದಿಗೆ ಯುವಕರ ಶಕ್ತಿ ಗಟ್ಟಿ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಕಾರ್ಯ ಆಗಬೇಕು. ಆಮೂಲಕ ಧರ್ಮಜಾಗೃತಿ ಹಾಗೂ ಧರ್ಮ ಚೈತನ್ಯ ಮೂಡಿಬರಲಿ ಎಂದು ಹೇಳಿದರು.

ಬಜರಂಗದಳ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌ ಮಾತನಾಡಿ, ನ.24ರಿಂದ 26ರ ವರೆಗೆ ಉಡುಪಿಯಲ್ಲಿ ಧರ್ಮ ಸಂಪತ್ತು ನಡೆಯಲಿದೆ. ದೇಶದ ಎರಡು ಸಾವಿರ ಸಾಧು ಸಂತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್‌ ಧಾರ್ಮಿಕ ಉಪನ್ಯಾಸ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಇನ್‌ ಫೋಟೆಕ್‌ನ ಆಡಳಿತ ನಿರ್ದೇಶಕ ದೇವಿ ಪ್ರಸಾದ್‌ ವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ದೊಡ್ಡಿಕಟ್ಟ ಶ್ರೀ ಸ್ವಯಂ ಭೂಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಎಲ್‌.ವಿ. ಅಮೀನ್‌, ಉದ್ಯಮಿ ಗಿರೀಶ್‌ ಎಂ. ಶೆಟ್ಟಿ ಕಟೀಲು, ಬಿಜೆಪಿ ಮಂಗಳೂರು ನಗರ ದಕ್ಷಿಣ ಹಿಂದುಳಿದ ಮೋರ್ಚಾದ ಅಧ್ಯಕ್ಷ ಸದಾನಂದ ನಾವರ, ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲ ಸುವರ್ಣ, ರಜತೋತ್ಸವ ಸಮಿತಿಯ ಅಧ್ಯಕ್ಷ ಭುಜಂಗ ಕುಲಾಲ್‌ ಉಪಸ್ಥಿತರಿದ್ದರು. ನಿತೇಶ್‌ ಶೆಟ್ಟಿ ಎಕ್ಕಾರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next