Advertisement
ಇದೀಗ ದ.ಕೊರಿಯದ ಪ್ರಖ್ಯಾತ ಸ್ಯಾಮ್ಸಂಗ್ ಕಂಪನಿ, ಅಮೆರಿಕದ ಮೈಕ್ರೊಸಾಫ್ಟ್ ಮತ್ತು ಗೂಗಲ್ ಜೊತೆಗೂಡಿ ಪ್ರಬಲ ವ್ಯವಸ್ಥೆಯೊಂದನ್ನು ಸಿದ್ಧಪಡಿಸಲು ಹೊರಟಿದೆ.
Related Articles
Advertisement
ಸ್ಯಾಮ್ಸಂಗ್ ಯೋಜನೆಯೇನು?: ಸ್ಯಾಮ್ಸಂಗ್‌ನ ಗೆಲಾಕ್ಸಿ ಮೊಬೈಲ್ ಅತ್ಯಂತ ಜನಪ್ರಿಯವಾಗಿದೆ. ಈ ಮೊಬೈಲ್‌ನೊಳಗೆ ವೈರಸ್ ನುಸುಳುವುದನ್ನು ತಡೆಯಲು ಹಲವು ಸ್ತರದ ಭದ್ರತಾವ್ಯವಸ್ಥೆಯನ್ನು ಸ್ಯಾಮ್ಸಂಗ್ ಮಾಡಲಿದೆ. ಹಾರ್ಡ್‌ವೇರ್ (ಮೊಬೈಲ್) ಮತ್ತು ಸಾಫ್ಟ್ ವೇರ್ (ಮೊಬೈಲ್‌ನಲ್ಲಿ ಬಳಸುವ ಆ್ಯಪ್ ಗಳು)ಗಳನ್ನು ಬಳಕೆದಾರ ತಾನೇ ಸೃಷ್ಟಿಸಿದ ಕೀ ಮೂಲಕ ರಕ್ಷಿಸಲಿದೆ. ಈ ಕೀಯನ್ನು ತೆರೆಯಲು ಸ್ವತಃ ಸ್ಯಾಮ್ಸಂಗ್‌ಗೂ ಸಾಧ್ಯವಿಲ್ಲ.
ಬಳಕೆದಾರ ಒಂದು ಪ್ರತ್ಯೇಕ ಫೋಲ್ಡರ್ ಸೃಷ್ಟಿಸಿ, ಪಾಸ್‌ವರ್ಡ್, ಪಿನ್, ಖಾಸಗಿ ಮಾಹಿತಿಗಳನ್ನು ಅಲ್ಲಿ ಸಂಗ್ರಹಿಸಿಡಬಹುದು.
ರಿಯಲ್ ಮಾನಿಟರಿಂಗ್ ವ್ಯವಸ್ಥೆಯ ಮೂಲಕ ಅಲ್ಲೇನಾದರೂ ಅಸಹಜ ಬೆಳವಣಿಗೆಗಳಾದರೆ ಸ್ಯಾಮ್ಸಂಗ್ ಪತ್ತೆ ಮಾಡಲಿದೆ.