Advertisement

ಸ್ಯಾಮ್‌ಸಂಗ್‌ ವರ್ಟಿಕಲ್‌ ಟಿವಿ

04:44 PM May 03, 2019 | pallavi |

ಸ್ಯಾಮ್‌ಸಂಗ್‌ ಕಂಪೆನಿಯು ಲಂಬ ಅಥವಾ ಪೋಟ್ರೇಟ್ ಮೋಡ್‌ನ‌ಲ್ಲಿ ಬಳಸಬಹುದಾದ ಹೊಸ ಟಿವಿ ಆವಿಷ್ಕಾರದತ್ತ ಗಮನ ಹರಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಇದರ ಬೆಲೆ ಸುಮಾರು 11.03 ಲಕ್ಷ ರೂ. ಇರಲಿದೆ. ಮೇ ತಿಂಗಳಾಂತ್ಯಕ್ಕೆ ದ. ಕೊರಿಯಾದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

Advertisement

43 ಇಂಚ್‌ನ ಡಿಸ್‌ಪ್ಲೇ ಇದರದ್ದಾಗಿದ್ದು, 4.1 ಚಾನೆಲ್ ಸ್ಪೀಕರ್‌ ಸಿಸ್ಟಂ ಅನ್ನು 60 ಡಬ್ಲ್ಯೂ ಔಟ್ಪುಟ್‌ನೊಂದಿಗೆ ಮತ್ತು ಸ್ಮಾರ್ಟ್‌ ಕಾರ್ಯ ಕ್ಷಮತೆಯನ್ನು ಹೊಂದಿದೆ. ಇದು ಸ್ಮಾರ್ಟ್‌ ಫೋನ್‌ನಂತೆ ರಚನೆಯನ್ನು ಹೊಂದಿದೆ.

ಅಗಲ ಅಥವಾ ಉದ್ದವಾಗಿ ಬಳಕೆ ಮಡುವ ಅವಕಾಶ ಇದರಲ್ಲಿರುವುದರಿಂದ ಅಂತರ್ಜಾಲ ವೀಕ್ಷಣೆಗೂ ಇದು ಸಹಕಾರಿ. ಹೆಚ್ಚಿನ ಸಂದರ್ಭದಲ್ಲಿ ಮೊಬೈಲ್ ವೀಕ್ಷಣೆಯಿಂದಲೇ ಕಣ್ಣುಗಳು ಹಾನಿಗೊಳಗಾಗುವ ಸಂಭವವಿದ್ದು, ಈ ಟಿವಿಯ ಆಧುನಿಕ ತಂತ್ರಜ್ಞಾನ ಅಳವಡಿಸಿರುವ ಟಿವಿಯ ಮೂಲಕ ಮೊಬೈಲ್ನಲ್ಲಿ ಮಡಬಹುದಾದ ಎಲ್ಲ ಕೆಲಸಗಳನ್ನು ಮಾಡುವ ಅವಕಾಶವಿದೆ. ಮೊಬೈಲ್ ಸೇರಿದಂತೆ ಇನ್ನಿತರ ಟೆಕ್ನಾಲಜಿಗಳನ್ನು ತಯಾರಿಸುವ ಮೂಲಕ ಮನೆ ಮಾತಾಗಿರುವ ಸ್ಯಾಮ್‌ಸಂಗ್‌ ಈಗ ವರ್ಟಿಕಲ್ ಟಿವಿ ತಯಾರಿಕೆಯ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೂಂದು ಹೊಸ ದಾಖಲೆ ಬರೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. •

Advertisement

Udayavani is now on Telegram. Click here to join our channel and stay updated with the latest news.

Next