Advertisement

ಸ್ಯಾಮ್‌ಸಂಗ್‌ ಇಲೆಕ್ಟ್ರಾನಿಕ್ಸ್‌ ತ್ತೈಮಾಸಿಕ ಲಾಭ ಶೇ.50 ಜಿಗಿತ

11:28 AM Jan 24, 2017 | udayavani editorial |

ಸೋಲ್‌ : ವಿಶ್ವದ ವಿವಿಧೆಡೆ  ಗ್ಯಾಲಕ್ಸಿ  ನೋಟ್‌ 7 ಸ್ಮಾರ್ಟ್‌ ಫೋನ್‌ಗಳು ಸ್ಫೋಟಗೊಂಡ ಹಲವಾರು ಪ್ರಕರಣಗಳಿಂದಾಗಿ ತನ್ನ ಪ್ರತಿಷ್ಠೆಗೆ ತೀವ್ರ ಹೊಡೆತ ಕಂಡಿದ್ದ ವಿಶ್ವದ ಅತೀ ದೊಡ್ಡ ಸ್ಮಾರ್ಟ್‌ ಫೋನ್‌ ಉತ್ಪಾದನ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್‌ ಇಲೆಕ್ಟ್ರಾನಿಕ್ಸ್‌ ಕಂಪೆನಿ ಹಾಲಿ ಹಣಕಾಸು ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ ಶೇ.50 ರಷ್ಟು ಹೆಚ್ಚು ಲಾಭವನ್ನು ಗಳಿಸುವ ಮೂಲಕ ಜಾಗತಿಕ ಕಾರ್ಪೋರೇಟ್‌ ವಲಯದಲ್ಲಿ ಅಚ್ಚರಿ ಮೂಡಿಸಿದೆ.

Advertisement

ಅಕ್ಟೋಬರ್‌ನಿಂದ ಡಿಸೆಂಬರ್‌ ವರೆಗಿನ ತ್ತೈಮಾಸಿಕ ಅವಧಿಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ 9.22 ಟ್ರಿಲಿಯ ನಿರ್ವಹಣಾ ಲಾಭವನ್ನು ದಾಖಲಿಸಿದೆ.  ಕಂಪೆನಿಯ ಆದಾಯವು 53.3 ಟ್ರಿಲಿಯ ಡಾಲರ್‌ಗಳಲ್ಲಿ ದಾಖಲಾಗಿದೆ. 

ಈ ನಡುವೆ ದಕ್ಷಿಣ ಕೊರಿಯ ಈ ಟೆಕ್‌ ದಿಗ್ಗಜ ಸಂಸ್ಥೆಯು ಭಾರೀ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಹಗರಣ ನಡೆಸಿದೆ ಎಂಬ ಆರೋಪಕೆ ಗುರಿಯಾಗಿದ್ದು ಇದು ಸ್ಯಾಮ್‌ಸಂಗ್‌ ಇಲೆಕ್ಟ್ರಾನಿಕ್ಸ್‌ ಕಂಪೆನಿಗೆ ಒದಗಿರುವ ಇನ್ನೊಂದು ದೊಡ್ಡ ಪ್ರಹಾರವಾಗಿದೆ. 

ಈ ಹಗರಣಕ್ಕೆ ಸಂಬಂಧಿಸಿದಂತೆ ದೇಶದ ಅಧ್ಯಕ್ಷರನ್ನೂ ವಾಗ್‌ದಂಡನೆಗೆ ಗುರಿಪಡಿಸಲಾಗಿದೆ ಮತ್ತು ಸಂಸ್ಥೆಯ ನಾಯಕನಾಗಿರುವ ಲೀ ಜೇ ಯಾಂಗ್‌ ಅವರ ಬಂಧನಕ್ಕೆ ಪ್ರಾಸಿಕ್ಯೂಟರ್‌ಗಳು ಕೋರ್ಟ್‌ ಅನುಮತಿಯನ್ನು ಕೋರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next