Advertisement

ಫ್ರೀಸ್ಟೈಲ್‍: ಸ್ಯಾಮ್ ಸಂಗ್‍ನ ಪುಟ್ಟ ಪ್ರೊಜೆಕ್ಟರ್ ಸದ್ಯದಲ್ಲೇ ಬಿಡುಗಡೆ

03:00 PM Mar 21, 2022 | Team Udayavani |

ನವದೆಹಲಿ: ಈ ವರ್ಷದ ಪ್ರಮುಖ ಗ್ಯಾಜೆಟ್‍ಗಳಲ್ಲೊಂದು ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟ ಸ್ಯಾಮ್‍ ಸಂಗ್‍ ಫ್ರೀ ಸ್ಟೈಲ್‍ ಪೋರ್ಟಬಲ್‍ ಪ್ರೊಜೆಕ್ಟರ್ ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

Advertisement

ಕೇವಲ 800 ಗ್ರಾಂ ತೂಕವಿರುವ ಫ್ರೀಸ್ಟೈಲ್‍ ಪೋರ್ಟಬಲ್‍ ಪ್ರೊಜೆಕ್ಟರ್, ಅದಲ್ಲಿರುವ ನವೀನ ವೈಶಿಷ್ಟ್ಯತೆಗಳಿಂದ ಗಮನ ಸೆಳೆದಿದೆ. ಆಧುನಿಕ ಜೀವನ ಶೈಲಿಗೆ ತಕ್ಕಂತೆ ಅದನ್ನು ರೂಪಿಸಲಾಗಿದೆ.

ಇದನ್ನೂ ಓದಿ:ವಿಐಯಿಂದ ನಜಾರಾ ಸಹಯೋಗದೊಂದಿಗೆ ವಿ ಗೇಮ್‍

ಕೇವಲ 800 ಗ್ರಾಂ ತೂಕದ ಈ ಪ್ರೊಜೆಕ್ಟರ್ ಒಂದು ಕೈಯಲ್ಲಿ ಸಾಗಿಸುವಷ್ಟು ಹಗುರವಾಗಿದೆ. 180 ಡಿಗ್ರಿಗಳಲ್ಲಿ ಪ್ರೊಜೆಕ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಫ್ರೀಸ್ಟೈಲ್, ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳಲ್ಲಿರುವಂತೆ, ಪ್ರಮಾಣೀಕೃತ ಓಟಿಟಿ ಫ್ಲಾಟ್‍ಫಾರ್ಮ್ ಸೇರಿದಂತೆ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಗಳನ್ನು ಕಾಸ್ಟಿಂಗ್‍, ಮಿರರಿಂಗ್‍ ಮಾಡಬಹುದು.

Advertisement

ಯಾವ ಸ್ಥಳದಲ್ಲೇ ಆಗಲಿ, ಇದರ 360-ಡಿಗ್ರಿ ಧ್ವನಿಯು ಸಿನಿಮಾ-ಗುಣಮಟ್ಟದ ಧ್ವನಿ ಅನುಭವವನ್ನು ನೀಡುತ್ತದೆ.

ಈ ಹೊಸ ಸಾಧನವನ್ನು ಗ್ರಾಹಕರು ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಮಾರ್ಚ್ 28 ರವರೆಗೆ 2000 ರೂ.ಗಳ ಮುಂಗಡ ನೀಡಿ ಬುಕ್‍ ಮಾಡಬಹುದು ಮತ್ತು ಅಂತಿಮ ಖರೀದಿಯಲ್ಲಿ 4 ಸಾವಿರ ರೂ. ರಿಯಾಯಿತಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next