Advertisement

ಆ್ಯಪಲ್‌ ಐಪ್ಯಾಡ್‌ನ‌ಲ್ಲಿ ಸ್ಯಾಮ್‌ಸಂಗ್‌ !

07:59 PM Nov 24, 2019 | Sriram |

ಆ್ಯಪಲ್‌ ಉತ್ಪನ್ನಗಳ ಅಭಿಮಾನಿಯಾದವರಿಗೆ “ರೆಟಿನಾ ಡಿಸ್‌ಪ್ಲೇ’ ತುರಿತು ತಿಳಿದೇ ಇರುತ್ತದೆ. ಆ್ಯಪಲ್‌ನ ಜನಪ್ರಿಯ ಉಪಕರಣವಾದ ಐಪ್ಯಾಡ್‌ನ‌ಲ್ಲಿ ಇರುವ ಸ್ಕ್ರೀನ್‌, “ರೆಟಿನಾ ಡಿಸ್‌ಪ್ಲೇ’ ಎಂದೇ ಹೆಸರುವಾಸಿ. ಸಾಮಾನ್ಯವಾಗಿ ಫ‌ುಲ್‌ ಎಚ್‌.ಡಿ ಸ್ಕ್ರೀನ್‌ನಲ್ಲಿ 1920×1440 ಪಿಕ್ಸೆಲ್‌ಗ‌ಳಿರುತ್ತವೆ. ಪಿಕ್ಸೆಲ್‌ಗ‌ಳ ಸಂಖ್ಯೆ ಹೆಚ್ಚಿದಷ್ಟೂ ಸ್ಕ್ರೀನ್‌ನ ಗುಣಮಟ್ಟ ಮತ್ತು ಅದು ತೋರಿಸುವ ವಿಡಿಯೋ ಗುಣಮಟ್ಟ ಹೆಚ್ಚುತ್ತದೆ.

Advertisement

“ರೆಟಿನಾ ಡಿಸ್‌ಪ್ಲೇ’ ಎಂಬ ಹೆಸರು ಇಡಲು ಕಾರಣ ಮನುಷ್ಯನ ಕಣ್ಣಿಗೆ ಇರುವಷ್ಟೇ ಶಕ್ತಿ ಸ್ಕ್ರೀನ್‌ನಲ್ಲಿದೆ ಎಂದು ತೋರ್ಪಡಿಸಿಕೊಳ್ಳುವುದು. ಇದುವರೆಗೂ ಯಾವುದೇ ಸ್ಕ್ರೀನ್‌ ಮನುಷ್ಯನ ಕಣ್ಣಿನಲ್ಲಿ ಇರುವಷ್ಟು ಸಾಮರ್ಥ್ಯವನ್ನು ಪಡೆದಿಲ್ಲ.ಮನುಷ್ಯನ ಕಣ್ಣು ಕೋಟ್ಯಂತರ ಬಣ್ಣದ ಶೇಡ್‌ಗಳನ್ನು ಗುರುತಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದುವರೆಗೂ ಮಾರುಕಟ್ಟೆಯಲ್ಲಿರುವ ಸ್ಕ್ರೀನ್‌ಗಳಲ್ಲಿ ಇದಕ್ಕೆ ಸಮೀಪ ಬರುವಂಥವಿದ್ದರೆ ರೆಟಿನಾ ಡಿಸ್‌ಪ್ಲೇ ಕೂಡಾ ಅವುಗಳಲ್ಲಿ ಒಂದು. ಆ್ಯಪಲ್‌ ಸಂಸ್ಥೆಯ ಟ್ರೇಡ್‌ ಮಾರ್ಕ್‌ ಆಗಿರುವ “ರೆಟಿನಾ ಡಿಸ್‌ಪ್ಲೇ’ ಸ್ಕ್ರೀನನ್ನು ತಯಾರಿಸಿದ್ದು ಮಾತ್ರ ಆ್ಯಪಲ್‌ ಅಲ್ಲ ಎನ್ನುವ ಸಂಗತಿ ಅನೇಕರಲ್ಲಿ ಅಚ್ಚರಿ ತರಬಹುದು. ಅದನ್ನು ಆ್ಯಪಲ್‌ಗೆ ಸರಬರಾಜು ಮಾಡುವುದು ಸ್ಯಾಮ್‌ಸಂಗ್‌. ಅದಷ್ಟೇ ಅಲ್ಲದೆ ಆ್ಯಪಲ್‌ ಉತ್ಪನ್ನಗಳಲ್ಲಿ ಬಳಕೆಯಾಗುವ ಬಹುಮುಖ್ಯವಾದ ಭಾಗ ಮೆದುಳು ಎಂದೇ ಕರೆಯಲ್ಪಡುವ ಪ್ರಾಸೆಸರ್‌ಅನ್ನು ಒದಗಿಸುವುದು ಕೂಡಾ ಸ್ಯಾಮ್‌ಸಂಗ್‌. ಆ್ಯಪಲ್‌ನ ಉತ್ಪನ್ನಗಳಲ್ಲಿ ಇರುವ ಬಿಡಿಭಾಗಗಳೆಲ್ಲವೂ ಈ ರೀತಿಯಾಗಿ ಬೇರೆ ಬೇರೆ ಕಂಪನಿಗಳಿಂದ ಬಂದವೇ ಆಗಿವೆ. ಹೀಗಾಗಿ ಆ್ಯಪಲ್‌, ತನ್ನ ಉತ್ಪನ್ನವನ್ನು ಡಿಸೈನ್‌ ಮಾಡುತ್ತವೆ. ಇನ್ನುಳಿದ ಬಿಡಿಭಾಗಗಳೆಲ್ಲವನ್ನೂ(ಹಾರ್ಡ್‌ವೇರ್‌) ತರಿಸಿಕೊಂಡು ಅಸೆಂಬಲ್‌(ಜೋಡಣೆ) ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತದೆ. ಇದರ ಹಿಂದೆ ಕಂಪನಿಯ ಖರ್ಚನ್ನು ಉಳಿಸುವ, ಜೊತೆಗೇ ಲಾಭವನ್ನು ಹೆಚ್ಚಿಸುವ ಉದ್ದೇಶ ಅಡಗಿದೆ. ಬಿಡಿಭಾಗಗಳ ಮೇಲೆ ಸಂಶೋಧನೆ ನಡೆಸಿ ಉತ್ಪನ್ನವನ್ನು ತಯಾರಿಸುವುದರ ಜೊತೆಗೇ, ಮಾರುಕಟ್ಟೆಯಲ್ಲಿ ಇರುವುದರಲ್ಲಿ ಅತ್ಯುತ್ತಮವಾದುದನ್ನು ಆರಿಸಿಕೊಂಡು ಬಳಸಿಕೊಳ್ಳುವುದರಲ್ಲಿ ಜಾಣ್ಮೆಯೂ ಇದೆ. ಜಗತ್ತಿನ ಅತಿ ಶ್ರೀಮಂತ ಕಂಪನಿಗಳಲ್ಲೊಂದು ಎಂಬ ಹೆಸರು ಬಂದಿರುವುದು ಸುಮ್ಮನೆಯೇ ಅಲ್ಲ. ಆ್ಯಪಲ್‌ ಎಷ್ಟು ಬೆಲೆ ಬಾಳುತ್ತೆ ಗೊತ್ತಾ 1 ಟ್ರಿಲಿಯನ್‌ ಡಾಲರ್‌. ಅಂದರೆ 1ರ ಮುಂದೆ 12 ಸೊನ್ನೆ! ಸರಳವಾಗಿ ಹೇಳುವುದಾದರೆ ಸುಮಾರು 71 ಲಕ್ಷ ಕೋಟಿ ರೂ.!

Advertisement

Udayavani is now on Telegram. Click here to join our channel and stay updated with the latest news.

Next