Advertisement

ಸ್ಯಾಮ್‍ ಸಂಗ್‍ ನಿಯೋ ಕ್ಯುಎಲ್‍ಇಡಿ ಟಿವಿ ಬಿಡುಗಡೆ

05:11 PM Apr 12, 2022 | Team Udayavani |

ನವದೆಹಲಿ: ಸ್ಯಾಮ್‍ ಸಂಗ್‍ ಕಂಪೆನಿಯು ನಿಯೋ ಕ್ಯುಎಲ್‌ಇಡಿ ಟಿವಿಯ ಅತ್ಯಾಧುನಿಕ 2022 ಸರಣಿಯನ್ನು ಬಿಡುಗಡೆ ಮಾಡಿದ್ದು, ಶೀಘ್ರವೇ ಭಾರತದಲ್ಲಿ ದೊರೆಯಲಿದೆ.

Advertisement

ಈ ತಿಂಗಳ 18 ರವರೆಗೂ ನಿಯೋ ಕ್ಯುಎಲ್‌ಇ ಡಿ 8ಕೆ ಮತ್ತು ನಿಯೋ ಕ್ಯುಎಲ್‌ಇ ಡಿ ಟೆಲಿವಿಷನ್ ಗಳನ್ನು ಸ್ಯಾಮ್ ಸಂಗ್ ನ ಅಧಿಕೃತ ಆನ್ ಲೈನ್ ಸ್ಟೋರ್ ಆಗಿರುವ ಸ್ಯಾಮ್ ಸಂಗ್ ಶಾಪ್ ನಲ್ಲಿ https://www.samsung.com/in/offer/online/pre-reserve-new-neo-qled/ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.

ಬಳಕೆದಾರರು ನಿಯೋ ಕ್ಯುಎಲ್ಇಡಿ 8ಕೆ ಟಿವಿಯನ್ನು, 10 ಸಾವಿರ ರೂ. ಮುಂಗಡ ನೀಡಿ ಕಾಯ್ದಿರಿಸಬಹುದಾಗಿದ್ದು, ಖರೀದಿಯ ಸಮಯದಲ್ಲಿ ರೂ 20,000 ರಿಯಾಯಿತಿ ಪಡೆಯಬಹುದಾಗಿದೆ. ಅಂತೆಯೇ, ನಿಯೋ ಕ್ಯುಎಲ್ಇಡಿ ಟಿವಿಯನ್ನು 5 ಸಾವಿರ ರೂ. ಮುಂಗಡ ನೀಡಿ ಕಾಯ್ದಿರಿಸಬಹುದಾಗಿದ್ದು, ಟಿವಿಯನ್ನು ಖರೀದಿಸುವಾಗ ರೂ 10,000 ರಿಯಾಯಿತಿ ದೊರೆಯಲಿದೆ.

ಹೊಚ್ಚ ಹೊಸ ನಿಯೋ ಕ್ಯು ಎಲ್ಇಡಿ ಟಿವಿ ಶ್ರೇಣಿ ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನ, ರಿಯಲ್ ಡೆಪ್ತ್ ಎನ್‍ಹಾನ್ಸರ್‍, ಡಾಲ್ಬಿ ಅಟ್ಮಾಸ್, ಎಐ ಧ್ವನಿ ಬೆಂಬಲ, ಪೂರ್ವನಿರ್ಮಿತ ಹೋಂ ಐಓಟಿ ಇತ್ಯಾದಿಗಳಿಂದ ಸುಸಜ್ಜಿತವಾಗಿದೆ. ಈ ಟೆಲಿವಿಷನ್ ಗಳು ಸ್ಮಾರ್ಟ್ ಮತ್ತು ಇಂಟೆಲಿಜೆಂಟ್ ವೈಶಿಷ್ಟ್ಯಗಳನ್ನು ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next