Advertisement

“ಸ್ಯಾಮ್‌ಸಂಗ್‌ ಎಂ 53 5ಜಿ’ಬಿಡುಗಡೆ; ಕ್ವಾಡ್‌ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್‌

09:06 PM Apr 23, 2022 | Team Udayavani |

ಸ್ಯಾಮ್‌ಸಂಗ್‌ ಸಂಸ್ಥೆಯು ಗ್ಯಾಲಾಕ್ಸಿ ಎಂ53 5ಜಿ ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಈ ಫೋನು 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ನಾಲ್ಕು ಕ್ಯಾಮೆರಾಗಳಿರುವ ಫೋನಿನಲ್ಲಿ 108ಎಂಪಿ ಪ್ರೈಮರಿ ಕ್ಯಾಮೆರಾವಿದ್ದರೆ, 32ಎಂಪಿ ಸೆಲ್ಫಿ ಕ್ಯಾಮೆರಾವಿದೆ.

5000ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 25 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ. 6ಜಿಬಿ ರ್ಯಾಮ್‌ ಜತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಹೊಂದಿರುವ ಫೋನಿನ ಬೆಲೆ 23,999 ರೂ. ಆಗಿದ್ದರೆ, 8 ಜಿಬಿ RAM ಜತೆ 128 ಜಿಬಿ ಇಂಟರ್ನಲ್‌ ಸ್ಟೋರೇಜ್‌ ಹೊಂದಿರುವ ಫೋನಿನ ಬೆಲೆ 25,999 ರೂ. ಆಗಿದೆ.

ಇದನ್ನೂ ಓದಿ:ಮುರಿದು ಬಿದ್ದ ರಿಲಯನ್ಸ್-ಫ್ಯೂಚರ್ ಗ್ರೂಪ್‌ 24,713 ಕೋಟಿ ರೂ.ಒಪ್ಪಂದ

ಮೆಮೋರಿ ಕಾರ್ಡ್‌ ಮೂಲಕ ಸ್ಟೋರೇಜ್‌ ಅನ್ನು 1ಟೆರಾ ಬೈಟ್‌ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next