Advertisement

ಭ್ರಷ್ಟಾಚಾರ;ಸ್ಯಾಮ್ ಸಂಗ್ ಕಂಪನಿ ಮುಖ್ಯಸ್ಥ ಲೀಗೆ 5 ವರ್ಷ ಜೈಲುಶಿಕ್ಷೆ

01:43 PM Aug 25, 2017 | Sharanya Alva |

ಸಿಯೋಲ್:ದಕ್ಷಿಣ ಕೊರಿಯಾದ ಅತೀ ಶ್ರೀಮಂತ ಉದ್ಯಮಿ, ಜಗದ್ವಿಖ್ಯಾತ ಇಲೆಕ್ಟ್ರಾನಿಕ್ಸ್ ಪರಿಕರಗಳ ಉತ್ಪನ್ನಗಳ ಸಂಸ್ಥೆ ಸ್ಯಾಮ್ ಸಂಗ್ ಅಧ್ಯಕ್ಷ, ಗ್ರೂಪ್ ಉಪಾಧ್ಯಕ್ಷ ಜೇ ವೈ ಲೀ (ಲೀ ಜೇ ಯಾಂಗ್) ಅವರನ್ನು ಭ್ರಷ್ಟಾಚಾರ ಹಾಗೂ ಹಲವು ಹಗರಣಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಇಲ್ಲಿನ ಕೋರ್ಟ್ ಶುಕ್ರವಾರ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Advertisement

ಲೀ ವಿರುದ್ಧ ಸ್ವತಂತ್ರ್ಯವಾಗಿ ತನಿಖೆ ನಡೆಸಲಾಗಿದ್ದು, ಇದರಲ್ಲಿ ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೈಗೆ 40 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಡಿ ಲೀ ಬಂಧಿತರಾಗಿದ್ದಾರೆ. ದೇಶದ ಅತಿ ದೊಡ್ಡ ಕಂಪನಿಯ ಮುಖ್ಯಸ್ಥರನ್ನು ಬಂಧಿಸುವುದಕ್ಕೆ ಮುನ್ನ ಅದರ ಆರ್ಥಿಕ ಪರಿಣಾಮಗಳನ್ನು ಪರಿಶೀಲಿಸಲಾಗುವುದು ಎಂದು ಪ್ರಾಸಿಕ್ಯೂಟರ್ ಗಳು ವಿಚಾರಣೆ ವೇಳೆ ತಿಳಿಸಿದ್ದರು.

49 ವರ್ಷದ ಸ್ಯಾಮ್ ಸಂಗ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಉಪಾಧ್ಯಕ್ಷನನ್ನು ಕೈಕೋಳದೊಂದಿಗೆ ಜಸ್ಟೀಸ್ ಮಿನಿಸ್ಟ್ರಿ ಬಸ್ ನಲ್ಲಿ ಸಿಯೋಲ್ ಸೆಂಟ್ರಲ್ ಜಿಲ್ಲಾ ಕೋರ್ಟ್ ಗೆ ಕರೆತರಲಾಗಿತ್ತು. ಲೀ ಅವರನ್ನು ಫೆಬ್ರುವರಿಯಲ್ಲಿ ಬಂಧಿಸಲಾಗಿತ್ತು. ಆದರೆ ತಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಲೀ ವಾದಿಸಿದ್ದರು. ಏತನ್ಮಧ್ಯೆ ಲೀ ಅವರು ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲಿದ್ದಾರೆ ಎಂದು ಲೀ ಪರ ವಕೀಲ ಸಾಂಗ್ ವು ಚೆಯೋಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next