Advertisement

ಲಂಚ ಆರೋಪ: ಸ್ಯಾಮ್ಸಂಗ್‌ ಮುಖ್ಯಸ್ಥ ಲೀ ಜೇ ಬಂಧನ

03:45 AM Feb 18, 2017 | |

ಸಿಯೋಲ್‌: ಸ್ಯಾಮ್‌ಸಂಗ್‌ ಮೆಮೊರಿ ಚಿಪ್‌ನಲ್ಲಿ ಇದೊಂದು ಕರಾಳ ನೆನಪು! ಸ್ಯಾಮ್‌ಸಂಗ್‌ ಸಮೂಹ ಮುಖ್ಯಸ್ಥ ಲೀ ಜೇ ಯಂಗ್‌ ಅವರನ್ನು ಭ್ರಷ್ಟಾಚಾರದ ಆರೋಪದಡಿ ದಕ್ಷಿಣ ಕೊರಿಯಾ ಸರ್ಕಾರ ಬಂಧಿಸಿದೆ. 

Advertisement

48 ವರ್ಷದ ಲೀ ಅವರು ಪದಚ್ಯುತ ಅಧ್ಯಕ್ಷೆ ಪಾರ್ಕ್‌ ಗುಯೆನ್‌ ಹುಯೆ ಅವರ ಸಮೀಪವರ್ತಿಯೊಬ್ಬರಿಗೆ 268 ಕೋಟಿ ರೂ. ಲಂಚ ನೀಡಿ, ಸ್ಯಾಮ್‌ಸಂಗ್‌ಗೆ ಸೇರಿದ ಎರಡು ಘಟಕಗಳ ವಿಲೀನಕ್ಕೆ ನಿಯಮಗಳನ್ನು ಸಡಿಲಿಸಲು ಕೇಳಿಕೊಂಡಿದ್ದರು. ಈ ಆರೋಪದಡಿಯಲ್ಲಿ ಲೀ ಜೇ ಅವರನ್ನು ಬಂಧಿಸಲಾಗಿದ್ದು, ಕಂಪನಿಯ ಮತ್ತೂಬ್ಬ ಅಧಿಕಾರಿಯ ಮೇಲೂ ವಿಚಾರಣೆ ನಡೆಸಲಾಗುತ್ತಿದೆ. ಎರಡು ದಿನಗಳ ಹಿಂದೆ ಸಿಯೋಲ್‌ ಕೇಂದ್ರ ಜಿಲ್ಲಾ ನ್ಯಾಯಾಲಯ ಸತತ 22 ಗಂಟೆ ಕಾಲ ತೀವ್ರ ವಿಚಾರಣೆ ನಡೆಸಿದ್ದು ವಿಶ್ವದಾದ್ಯಂತ ಸುದ್ದಿಯಾಗಿತ್ತು. ಅಲ್ಲದೆ, ಲೀ ಜೇ ಅವರು ಪದಚ್ಯುತೆ ಅಧ್ಯಕ್ಷೆಯ ಮಗಳಿಗೆ ಜರ್ಮನಿಯಲ್ಲಿ ಕುದುರೆ ಸವಾರಿ ಕಲಿಯಲು ಅಪಾರ ಹಣ ನೀಡಿದ್ದಾರೆ ಎಂಬ ಆರೋಪವನ್ನೂ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next