Advertisement

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20 ಬುಕಿಂಗ್‌ ಆರಂಭ

10:04 AM Feb 16, 2020 | sudhir |

ನವದೆಹಲಿ: ಸ್ಯಾಮ್‌ಸಂಗ್‌ನ ಭಾರಿ ನಿರೀಕ್ಷೆಯ ಸ್ಮಾರ್ಟ್‌ಫೋನ್‌ ಸರಣಿ ಗ್ಯಾಲಾಕ್ಸಿ ಎಸ್‌20 ಫೋನ್‌ಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಭಾರತದಲ್ಲಿ ಆರಂಭಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಸರಣಿ ಅಡಿ ಮೂರು ಫೋನ್‌ಗಳನ್ನು ಬಿಡುಗಡೆ ಮಾಡಿದೆ.

Advertisement

ವೆನಿಲ್ಲಾ ಗ್ಯಾಲಾಕ್ಸಿ ಎಸ್‌20(ಆರಂಭಿಕ ಬೆಲೆ 66,999 ರೂ.), ಗ್ಯಾಲಾಕ್ಸಿ ಎಸ್‌20ಪ್ಲಸ್‌(73,999 ರೂ.), ಗ್ಯಾಲಕ್ಸಿ ಎಸ್‌20 ಆಲ್ಟ್ರಾ(92,999 ರೂ.) ಫೋನುಗಳನ್ನು ಬಿಡುಗಡೆ ಮಾಡಲಾಗಿದೆ.

ಮುಂಗಡ ಕಾಯ್ದಿರಿಸುವಿಕೆಗೆ ಸಾಕಷ್ಟು ಆಫ‌ರ್‌ಗಳನ್ನೂ ಸ್ಯಾಮ್‌ಸಂಗ್‌ ನೀಡಿದೆ. ಇದರ ಜೊತೆಗೆ 1 ವರ್ಷಗಳ ಕಾಲ ರಿಲಯನ್ಸ್‌ ಜಿಯೊನ ಡಬಲ್‌ ಡಾಟಾ ಲಾಭ ಕೂಡ ಗ್ರಾಹಕರಿಗೆ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next