Advertisement

ಅತ್ಯಾಧುನಿಕಫಿಚರ್‌ ನೊಂದಿಗೆಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ಎಸ್4

02:41 PM Oct 26, 2018 | |

ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್‌ ಕಂಪೆನಿ 57,900 ರೂ. ಗೆ ಟ್ಯಾಬ್ಲೆಟ್‌ ಎಸ್‌4 ಅನ್ನು ಗುರುವಾರ ಮಾರುಕಟ್ಟೆಗೆ ತಂದಿದೆ. ಈ ಟ್ಯಾಬ್‌ 10.5 ಇಂಚುಗಳ ಅಮೋಲ್ಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಗುರುಗ್ರಾಮದಲ್ಲಿ ಮೊತ್ತ ಮೊದಲ ಬಾರಿಗೆ ಇದನ್ನು ಸ್ಯಾಮ್‌ಸಂಗ್‌ ಪರಿಚಯಿಸಿತು. ಈ ಟ್ಯಾಬ್ಲೆಟ್‌ ಆಗಸ್ಟ್‌ನಿಂದ ಗ್ರಾಹಕರಿಗೆ ದೊರೆಯುತ್ತಿದ್ದು, ಇದರಲ್ಲಿ ಡೆಕ್ಸ್‌ ಮತ್ತು ರೆಡಿಫೈನ್ಡ್  ಎಸ್‌ ಪೆನ್‌ ಇಂಟೆಗ್ರೇಶನ್‌ ವ್ಯವಸ್ಥೆಯನ್ನು ಒಳಗೊಂಡಿದೆ. ಇದರೊಂದಿಗೆ ಬುಕ್‌ ಕವರ್‌ ರೀತಿಯಲ್ಲಿರುವ ಕೀ ಬೋರ್ಡ್‌ ಕೂಡ ಲಭ್ಯವಿದೆ.

Advertisement

ಈ ಟ್ಯಾಬ್ಲೆಟ್‌ ಕಪ್ಪು ಮತ್ತು ಬೂದು ಬಣ್ಣದಲ್ಲಿ ಗ್ರಾಹಕರ ಕೈ ಸೇರಲಿದ್ದು, ಸ್ಯಾಮ್‌ಸಂಗ್‌ ಆನ್‌ಲೈನ್‌ ಶಾಪಿಂಗ್‌ ಮೂಲಕ ಇದನ್ನು ಕಾಯ್ದಿರಿಸುವ ಅವಕಾಶವನ್ನು ನೀಡಲಾಗಿದೆ. ಅದರೊಂದಿಗೆ ಸ್ಥಳೀಯ ಮಾರಾಟಗಾರರಲ್ಲಿಯೂ ಈ ಟ್ಯಾಬ್‌ ಕೊಂಡುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಗ್ಯಾಲಕ್ಸಿ ಎಸ್‌4ನ ಕೀಬೋರ್ಡ್‌ ಬುಕ್‌ ಕವರ್‌ನ ಪ್ರತ್ಯೇಕ ಮಾರಾಟಕ್ಕೂ ಮುಂದಾಗಿದ್ದು, ಇದಕ್ಕೆ 7,499 ರೂ., ಬೆಲೆ ನಿಗದಿಪಡಿಸಲಾ ಗಿ ದೆ. ಸಿಂಪಲ್‌ ಬುಕ್‌ ಕವರ್‌ಗೆ 3,999 ರೂ. ಮತ್ತು ಪೋಗೋ ಚಾರ್ಜಿಂಗ್‌ ಡಾಕ್‌ 3,499 ರೂ. ಗಳಿಗೆ ಲಭ್ಯವಿದೆ.

ವಿಶೇಷತೆಗಳು
ಇದು ಕಂಪ್ಯೂಟರ್‌ ರೀತಿಯಲ್ಲಿಯೇ ಕಾರ್ಯನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮೈಕ್ರೋಸಾಫ್ಟ್ ವಿಂಡೋಸ್‌ ಸಹಿತ ಬೇರೆ ಬೇರೆ ವಿಂಡೋಸ್‌ ಗಳನ್ನು ಇದರಲ್ಲಿ ಬಳಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಇದರಲ್ಲಿ ವಿಂಡೋಸ್‌ ನೋಟ್‌ಬುಕ್‌ ಮಾಡುವಂತಹ ಎಲ್ಲ ಕಾರ್ಯಗಳನ್ನು ಮಾಡಲು ಸಮರ್ಥವಾಗಿ ನಿರ್ವಹಿಸುವಂತೆ ರಚಿಸಲಾಗಿದೆ.

ಸ್ಯಾಮ್‌ ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎಸ್‌4, 64 ಜಿಬಿ ಡಾಟಾಗಳನ್ನು ಸಂಗ್ರಹಿಸಿಡುವ ಶಕ್ತಿಯನ್ನು ಹೊಂದಿದೆ. ಅಲ್ಲದೆ 4ಜಿ ಎಲ್‌ಟಿಇ ಸಪೋರ್ಟ್‌, ವೈ- ಫೈ 802, ವೈ-ಫೈ ಡೈರೆಕ್ಟ್ನೊಂದಿಗೆ 11 ಎಸಿ ಮಿಮೋ( ಎಂಐಎಂಒ) ಬ್ಲೂಟೂತ್‌ವಿ 5.0, ಜಿಪಿಎಸ್‌/ ಎಜಿಪಿಎಸ್‌, ಯುಎಸ್‌ಬಿ-ಸಿ. ಮತ್ತು ಪೊಗೋ ಕನೆಕ್ಟರ್‌ ಸಪೋರ್ಟರ್‌ ವ್ಯವಸ್ಥೆಯನ್ನೂ ಒಳಗೊಂಡಿದೆ.

ಆ್ಯಕ್ಸೆಲೆನೋಮೀಟರ್‌ ಸೆನ್ಸಾರ್‌, ಹಾಲ್‌ ಸೆನ್ಸಾರ್‌, ಐರಿಸ್‌ ಸ್ಕ್ಯಾನರ್‌, ಪ್ರಾಕ್ಸಿಮಿಟೀ ಸೆನ್ಸಾರ್‌, ಮತ್ತು ಆರ್‌ಜಿಬಿ ಸೆನ್ಸಾರ್‌, ಫಾಸ್ಟ್‌ ಚಾರ್ಜಿಂಗ್‌ ಬ್ಯಾಟರಿ ಸೌಲಭ್ಯವೂ ಇದರಲ್ಲಿದೆ. ಇದರ ಬ್ಯಾಟರಿ ಕೆಪಾಸಿಟಿ 7,300ಎಂಎಎಚ್‌. ಫ್ರೆಂಟ್‌ ಕೆಮರಾ 8 ಮೆಗಾಫಿಕ್ಸೆಲ್‌ ಆಗಿದ್ದು, ರೆಸಲ್ಯೂಷನ್‌ 2,560x 1,600 ಆಗಿದ್ದು, ಇದರ ಡಿಸ್‌ಪ್ಲೇ 10.50 ಇಂಚು, 2.35ಜಿಎಚ್‌ ಝಡ್‌ ಒಕ್ಟಾ ಕೋರ್‌ ಪ್ರೊಸೆಸರ್‌ ಇದರಲ್ಲಿದೆ. ಒಎಸ್‌ ಆ್ಯಂಡ್ರಾಯ್ಡ 8.1 ಅನ್ನು ಇದು ಒಳಗೊಂಡಿದ್ದು, ರೆಯರ್‌ ಕೆಮರಾ 13 ಮೆಗಾಫಿಕ್ಸೆಲ್‌ ಇದರಲ್ಲಿದೆ. ಬ್ಯಾಟರಿ ಸಾಮರ್ಥ್ಯ 7,300 ಎಂಎ ಎಚ್‌ ಆಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next