Advertisement
ಹೌದು, ಸ್ಯಾಮ್ ಸಂಗ್ 5G ಮೋಡೆಲ್ ನ ಮೂರು ಸ್ಮಾರ್ಟ್ ಪೋನ್ ಗಳು ಬಿಡುಗಡೆಯಾಗಲಿದ್ದು ಗ್ಯಾಲಕ್ಸಿ S20 5G, ಗ್ಯಾಲಕ್ಸಿ S20+5G ಮತ್ತು ಗ್ಯಾಲಕ್ಸಿ S20 Ultra 5G ಎಂದು ಹೆಸರಿಸಲಾಗಿದೆ. ಈ ಮೂರು ಮೊಬೈಲ್ ಗಳು 120Hz ಡಿಸ್ ಪ್ಲೇ ಸಾಮಾರ್ಥ್ಯ ಹೊಂದಿದೆ. ಮಾತ್ರವಲ್ಲದೆ ಎಕ್ಸಿನೋಸ್ 990nm ಚಿಪ್ ಸೆಟ್ಸ್ ಹೊಂದಿದ್ದು, ವಾಟರ್ ರೆಸಿಸ್ಟೆನ್ಸ್ ನೊಂದಿಗೆ ಆಂಡ್ರಾಯ್ಡ್ 10 ಫೀಚರ್ ಅನ್ನು ಒಳಗೊಂಡಿದೆ. ಆದರೂ ಗ್ಯಾಲಕ್ಸಿ S20 Ultra 5G ಉಳಿದೆರಡೂ ಸ್ಮಾರ್ಟ್ ಫೋನ್ ಗಳಿಗಿಂತ ಅತೀ ವಿಶೇಷ ಫೀಚರ್ ಗಳನ್ನು ಒಳಗೊಂಡಿದೆ.
Related Articles
Advertisement
ಗ್ಯಾಲಕ್ಸಿ S20 5G , ಗ್ಯಾಲಕ್ಸಿ S20+5G ವಿಶೇಷತೆಗಳು:
ಗ್ಯಾಲಕ್ಸಿ S20 5G ಸ್ಮಾರ್ಟ್ ಪೋನ್ 6.3 ಇಂಚಿನ WQHD + ಡಿಸ್ ಪ್ಲೇ ಸಾಮರ್ಥ್ಯ ಪಡೆದರೆ ಗ್ಯಾಲಕ್ಸಿ S20 ಪ್ಲಸ್ 5ಜಿ ಅತೀ ಹೆಚ್ಚಿನ 6.7 ಇಂಚಿನ ಸ್ಕ್ರೀನ್ ಅನ್ನು ಒಳಗೊಂಡಿದೆ. ಈ ಎರಡೂ ಫೋನ್ ಗಳು 128 ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಹೊಂದಿದ್ದು 1ಟಿಬಿ ವರೆಗೂ ವಿಸ್ತರಿಸಬಹುದು. ಫೋಟೋಗ್ರಫಿಗಾಗಿ ಗ್ಯಾಲಕ್ಸಿ S20, ಗ್ಯಾಲಕ್ಸಿ S20+ 5G ನಲ್ಲಿ 12 ಮೆಗಾಫಿಕ್ಸೆಲ್ ಪ್ರಾಥಮಿಕ ಸೆನ್ಸಾರ್, 64 ಮೆಗಾಫಿಕ್ಸೆಲ್ ಟೆಲಿಫೋಟೋ ಲೆನ್ಸ್, 12 ಮೆಗಾಫಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು ಟಿಓಎಫ್ ಸೆನ್ಸಾರ್ ಅನ್ನು ಒಳಗೊಂಡಿದೆ.
ಸೆಲ್ಫಿ ಕ್ಯಾಮಾರ ಕೂಡ ಸಾಧಾರಣವಾಗಿದ್ದು 10 ಮೆಗಾಫಿಕ್ಸೆಲ್ ಸಾಮಾರ್ಥ್ಯ ಪಡೆದಿದೆ. ಈ ಸ್ಮಾರ್ಟ್ ಫೋನ್ ಕ್ರಮವಾಗಿ 4,000 mAh ಮತ್ತು 4,500 mAh ಬ್ಯಾಟರಿ ವೈಶಿಷ್ಟ್ಯವನ್ನು ಹೊಂದಿರುವುದು ವಿಶೇಷ.