Advertisement

ಸ್ಯಾಮ್ ಸಂಗ್ ಗ್ಯಾಲಕ್ಸಿ Note10 Lite, S10 Lite ಅನಾವರಣ: ಕ್ಯಾಮರಾದಲ್ಲಿದೆ ವಿಶೇಷ ಫೀಚರ್!

10:34 AM Jan 05, 2020 | Mithun PG |

ನ್ಯೂಯಾರ್ಕ್: ಕಳೆದ ಕೆಲವು ತಿಂಗಳಿಂದ ಬರುತ್ತಿದ್ದ ವದಂತಿ ಕೊನೆಗೂ ನಿಜವಾಗಿದ್ದು ಸೌತ್ ಕೊರಿಯಾದ ಟೆಕ್ ದೈತ್ಯ ಸ್ಯಾಮ್ ಸಂಗ್ ತನ್ನ ಜನಪ್ರಿಯ ಸ್ಮಾರ್ಟ್ ಪೋನ್ ಗಳ ಲೈಟ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ ಮತ್ತು ಎಸ್ 10 ಲೈಟ್ ಸ್ಮಾರ್ಟ್ ಫೋನ್ ಗಳು ಇದಾಗಿದ್ದು ಹಿಂದೆಂದಿಗಿಂತಲೂ ಕ್ಯಾಮಾರದಲ್ಲಿ ಹೆಚ್ಚಿನ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದ್ದು , ಎಸ್ ಪೆನ್ ಸೇರಿದಂತೆ ಇತರ ವಿಶೇಷ ಟೂಲ್ ಗಳನ್ನು ಪರಿಚಯಿಸಿದೆ. ಆ ಮೂಲಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಾವಿನ್ಯತೆಯನ್ನು ಪರಿಚಯಿಸಿದೆ.

Advertisement

ಈ ಎರಡು ಲೈಟ್ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಅನಾವರಣ ಮಾಡಿ ಮಾತನಾಡಿದ ಸ್ಯಾಮ್ ಸಂಗ್ ಸಂಸ್ಥೆಯ ಅಧ್ಯಕ್ಷ ಮತ್ತು ಐಟಿ ಹಾಗೂ ಮೊಬೈಲ್ ಸಂವಹನ ವಿಭಾಗದ ಸಿಇಓ ಡಿಜೆ ಕೊಹ್, ಗ್ಯಾಲಕ್ಸಿ ಎಸ್ ಮತ್ತು ಗ್ಯಾಲಕ್ಸಿ ನೋಟ್ ಪ್ರಪಂಚದಾದ್ಯಂತ ಗ್ರಾಹಕರ ಬೇಡಿಕೆಯನ್ನು ಪೂರೈಸಿದೆ. ಈ ಹೊಸ ಫೋನ್ ಗಳು ಉತ್ತಮ ಕಾರ್ಯಕ್ಷಮತೆ ಮತ್ತು ಶಕ್ತಿಯಿಂದ ಉದ್ಯಮ  ಕ್ಷೇತ್ರಗಳಿಗೆ ನಮ್ಮ ನಿರಂತರ ಪ್ರಯತ್ನವನ್ನು ಸಾರಲು ಪೂರಕವಾಗುತ್ತದೆ. ಗ್ಯಾಲಕ್ಸಿ ಎಸ್ 10 ಲೈಟ್ ಮತ್ತು ಗ್ಯಾಲಕ್ಸಿ ನೋಟ್ 10 ಲೈಟ್ ಈ ಹಿಂದಿನ ಗ್ಯಾಲಕ್ಸಿ ಎಸ್ ಮತ್ತು ಗ್ಯಾಲಕ್ಸಿ ನೋಟ್ ಹೊಂದಿರುವ  ವಿಭಿನ್ನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದಿದ್ದಾರೆ.

ಗ್ಯಾಲಕ್ಸಿ ಎಸ್ 10 ಪ್ರಿಸ್ಮ್ ವೈಟ್ , ಪ್ರಿಸ್ಮ್ ಬ್ಲ್ಯಾಕ್ ಮತ್ತು ಪ್ರಿಸ್ಮ್ ಬ್ಲೂ ಕಲರ್ ನಲ್ಲಿ ಲಭ್ಯವಿದೆ. ಗ್ಯಾಲಕ್ಸಿ ನೋಟ್ 10 ಲೈಟ್ ಔರಾ ಗ್ಲೋ , ಔರಾ ಬ್ಲ್ಯಾಕ್, ಔರಾ ರೆಡ್ ಬಣ್ಣದಲ್ಲಿ ಸಿಗಲಿದೆ. ಆದರೇ ಸ್ಯಾಮ್ ಸಂಗ್ ಸಂಸ್ಥೆ ಎರಡು ಸ್ಮಾರ್ಟ್ ಫೋನ್ ಗಳ ಬೆಲೆ ಮತ್ತು ಮಾರುಕಟ್ಟೆಯ ಲಭ್ಯತೆ ಕುರಿತು ಮಾಹಿತಿ ನೀಡಿಲ್ಲ.

ಗ್ಯಾಲಕ್ಸಿ ಎಸ್ 10 ಲೈಟ್ ಮತ್ತು ಗ್ಯಾಲಕ್ಸಿ ನೋಟ್ 10 ಲೈಟ್ ವಿಶೇಷತೆಗಳು: 

Advertisement

ಎರಡು ಸ್ಮಾರ್ಟ್ ಫೋನ್ ಗಳು ವಿಭಿನ್ನ ಫ್ಲ್ಯಾಗ್ ಶಿಪ್ ಹೊಂದಿದೆ. ಮಾತ್ರವಲ್ಲದೆ   ಸ್ಯಾಮ್ ಸಂಗ್  ಗ್ಯಾಲಕ್ಸಿ ಎಸ್ 10 ಲೈಟ್ ಮತ್ತು ಗ್ಯಾಲಕ್ಸಿ ನೋಟ್ 10 ಲೈಟ್ ಗಳು 6.7 ಇಂಚಿನ ಡಿಸ್ ಪ್ಲೇ ಸಾಮಾರ್ಥ್ಯ ಮತ್ತು ಫುಲ್ ಹೆಚ್ ಡಿ ಪ್ಲಸ್ ರೆಸಲ್ಯೂಸನ್ ಹೊಂದಿದೆ.

ಗ್ಯಾಲಕ್ಸಿ ಎಸ್ 10 ಲೈಟ್ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ಹೊಂದಿದ್ದರೆ, ಗ್ಯಾಲಕ್ಸಿ ನೋಟ್ 10 ಲೈಟ್ ಎಕ್ಸಿನೋಸ್ 8895 ಚಿಪ್ ಸೆಟ್ ಅನ್ನು ಒಳಗೊಂಡಿದೆ. ಇವೆರಡೂ ಕೂಡ 6/8GB+128GB RAM ಮತ್ತು ಸ್ಟೋರೇಜ್ ಕಾನ್ಫಿಗರೇಷನ್ ಹೊಂದಿದೆ.

ಗ್ಯಾಲಕ್ಸಿ ಎಸ್ 10 ಲೈಟ್ ಮತ್ತು ಗ್ಯಾಲಕ್ಸಿ ನೋಟ್ 10 ಲೈಟ್ ಸೂಪರ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದ್ದು 4,500mAh ಬ್ಯಾಟರಿ ಸಾಮಾರ್ಥ್ಯ ಪಡೆದಿದೆ.

ಆದರೇ ಈ ಸ್ಮಾರ್ಟ್ ಫೋನ್ ಗಳು ಕ್ಯಾಮೆರಾ ಫೀಚರ್ ಗಳಲ್ಲಿ ವಿಭಿನ್ನತೆಯನ್ನು ಹೊಂದಿದೆ. ಎಸ್ 10 ಲೈಟ್ ಸ್ಮಾರ್ಟ್ ಫೋನ್ , 12 ಎಂಪಿ f/2,2 ಅಲ್ಟ್ರಾ ವೈಡ್ ಲೆನ್ಸ್ , 12ಎಂಪಿ f/1.7 ಡ್ಯುಯೆಲ್ ಫಿಕ್ಸೆಲ್ ತಂತ್ರಜ್ಙಾನದ ಮತ್ತು ಓಐಎಸ್ ನ ವೈಡ್ ಆ್ಯಂಗಲ್ ಲೆನ್ಸ್,  48 ಎಂಪಿ F2.0 ಸೂಪರ್ ಸ್ಟೆಡಿ ಓಐಎಸ್ ಹೊಂದಿದ ವೈಡ್ ಆ್ಯಂಗಲ್ ಲೆನ್ಸ್ ಮತ್ತು 12 ಎಂಪಿ ಸಾಮಾರ್ಥ್ಯದ f/2.2 123 ಡಿಗ್ರಿ ಆ್ಯಂಗಲ್ ಹೊಂದಿದ ಅಲ್ಟ್ರಾ ವೈಡ್ ಲೆನ್ಸ್ ಒಳಗೊಂಡಿದೆ.

ನೋಟ್ ಲೈಟ್ ಸ್ಮಾರ್ಟ್ ಫೋನ್ 12 ಎಂಪಿ f/2.2 ಅಲ್ಟ್ರಾ ವೈಡ್ ಲೆನ್ಸ್ , 12 ಎಂಪಿ f/1.7 ವೈಡ್ ಆ್ಯಂಗಲ್ ಲೆನ್ಸ್ ಜೊತೆಗೆ ಡ್ಯುಯೆಲ್ ಫಿಕ್ಸೆಲ್ ತಂತ್ರಜ್ಞಾನ ಮತ್ತು ಓಐಎಸ್ ಮತ್ತು 12 ಎಂಪಿ ಸಾಮಾರ್ಥ್ಯದ f/2.4 ಟೆಲಿಫೋಟೋ ಲೆನ್ಸ್ ಅನ್ನು ಓಐಎಸ್ ನೊಂದಿಗೆ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next