ನವದೆಹಲಿ: ಮಾರುಕಟ್ಟೆಯಲ್ಲಿ ದಿನಕ್ಕೊಂದರಂತೆ ಹಲವಾರು ದುಬಾರಿ ಸ್ಮಾರ್ಟ್ ಪೋನ್ ಗಳು ತಮ್ಮ ಸ್ಥಾನವನ್ನು ಗಿಟ್ಟಿಸಿಕೊಳ್ಳುವತ್ತ ಪೈಪೋಟಿ ನಡೆಸುತ್ತಿರುವಾಗಲೇ, ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾದ ಸ್ಯಾಮ್ ಸಂಗ್ ಮದ್ಯಮವರ್ಗದವರನ್ನು ಗಮನದಲ್ಲಿಟ್ಟುಕೊಂಡು ಹೊಸ ಸರಣಿಯ ಮೊಬೈಲ್ ಪೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಹೊರಟಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ M02 ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಈ ಮೊಬೈಲ್ ಪೋನ್ ಕ್ವಾಲ್ ಕ್ಯಾಂ ಸ್ನಾಪ್ ಡ್ರಾಗನ್ 450 Soc ಯನ್ನು ಒಳಗೊಂಡಿರಲಿದ್ದು, 7 ಸಾವಿರ ರೂ.ಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.
ಮುಂಬರುವ ಫೆಬ್ರವರಿ 2 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ಸ್ಮಾರ್ಟ್ ಪೋನ್ ತನ್ನಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಒಟ್ಟು 6.5 ಇಂಚಿನ ಹೆಚ್ ಡಿ +ಇನ್ಫಿನಿಟಿ+ವಿ ಡಿಸ್ ಪ್ಲೇ ಅನ್ನು ಒಳಗೊಂಡಿರಲಿದ್ದು, 5 ಸಾವಿರ mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದೆ.
ಇದನ್ನೂ ಓದಿ:ನೀತಿ ಬೆನ್ನೇರಿದ ಭೀತಿ; ವಾಟ್ಸ್ ಆ್ಯಪ್ ಹೊಸ ಪಾಲಿಸಿ ಏನಂತಾರೆ ಭಾರತೀಯರು?
ಇನ್ನು ಕ್ಯಾಮರಾ ಸೌಲಭ್ಯದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ M02 ಒಟ್ಟು ಡುಯೆಲ್ ಕ್ಯಾಮರಾವನ್ನು ಹೊಂದಿರಲಿದ್ದು, 13 MP ಪ್ರಾಥಮಿಕ ಕ್ಯಾಮರಾ ಮತ್ತು 5MP ಸೆಲ್ಫಿ ಕ್ಯಾಮರಾವನ್ನು ಹೊಂದಿರಲಿದೆ. ಚಾರ್ಚಿಂಗ್ ಗಾಗಿ USB ಟೈಪ್ ಸಿ ಪೋರ್ಟ್ ಅನ್ನು ನೀಡಲಾಗಿದೆ.