Advertisement

Samsung Galaxy A34 5G: ಹೇಗಿದೆ ಈ ಸ್ಮಾರ್ಟ್ ಫೋನ್? ಇಲ್ಲಿದೆ ಪೂರ್ಣ ಮಾಹಿತಿ

06:42 PM Jun 28, 2023 | Team Udayavani |

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ34 5ಜಿ ಮಧ್ಯಮ ಶ್ರೇಣಿಯಲ್ಲಿ ಬಿಡುಗಡೆ ಮಾಡಲಾಗಿರುವ ಹೊಸ ಮೊಬೈಲ್ ಫೋನ್. ಇದು ಟ್ರಿಪಲ್-ಕ್ಯಾಮೆರಾ ಸೆಟಪ್, 120Hz AMOLED ಡಿಸ್ಪ್ಲೇ ಹೊಂದಿದೆ. ಈ ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ. ಇದರ ಬೆಲೆ ರೂ. 30,999. ರೂ ಹಾಗೂ 8 ಜಿಬಿ ರ್ಯಾಮ್ ಮತ್ತು 256GB ಸ್ಟೋರೇಜ್ ಬೆಲೆ 32,999.

Advertisement

ವಿನ್ಯಾಸ: Samsung Galaxy A34 5G ಲೈಟ್ ವೈಲೆಟ್, ಬ್ಲ್ಯಾಕ್, ಲೈಟ್ ಗ್ರೀನ್ ಮತ್ತು ಸಿಲ್ವರ್ ನಾಲ್ಕು ಬಣ್ಣದಲ್ಲಿ ದೊರಕುತ್ತದೆ.  ಹಿಂಭಾಗದ ಕವರ್ ಮತ್ತು ಫ್ರೇಮ್ ಪಾಲಿಕಾರ್ಬೊನೆಟ್ ನಿಂದ ಮಾಡಲ್ಪಟ್ಟಿದೆ. ಇದು 199 ಗ್ರಾಂ ತೂಕ ಹೊಂದಿದೆ. ಹಿಂಭಾಗದ ಕವರ್ ಸಮತಟ್ಟಾಗಿದ್ದರೆ, ಚೌಕಟ್ಟು ಬಾಗಿದ ಅಂಚುಗಳನ್ನು ಒಳಗೊಂಡಿದೆ. Samsung Galaxy A34 5G ಅಧಿಕೃತ IP67 ರೇಟಿಂಗ್‌ ಪಡೆದಿದೆ. ಇದರರ್ಥ ಫೋನ್ ಸುಮಾರು 30 ನಿಮಿಷಗಳ ಕಾಲ 1 ಮೀಟರ್ ನೀರಿನಲ್ಲಿ ಇಟ್ಟರೂ ಫೋನಿಗೆ ನೀರು ಇಳಿಯದಂಥ ರಕ್ಷಣೆ ಹೊಂದಿದೆ. ಈ ದರದ ಫೋನಿನಲ್ಲಿ ಐಪಿ67 ರೇಟಿಂಗ್ ಇರುವುದು ಪ್ಲಸ್ ಪಾಯಿಂಟ್.

ಕ್ಯಾಮೆರಾ ಸೆಟಪ್‌ ಗಾಗಿ ಹಿಂಬದಿಯ ಪ್ಯಾನೆಲ್‌ ನ ಮೂರು ವೃತ್ತಾಕಾರದ ಲೆನ್ಸ್ ಗಳು ಫ್ಲಾಗ್ ಶಿಪ್ ಫೋನಾದ Samsung Galaxy S23 ನೋಡಿದಂತಾಗುತ್ತದೆ. ಡಿಸ್‌ಪ್ಲೇಯ ಮೇಲ್ಭಾಗದಲ್ಲಿರುವ ವಾಟರ್‌ ಡ್ರಾಪ್ ನಾಚ್ ಹಳೆಯ ಫೋನ್ ಗಳನ್ನು ನೆನಪಿಸುತ್ತದೆ. ಪರದೆಯ ಬೆಜೆಲ್ ಕಿರಿದಾದ ಅಂಚುಗಳನ್ನು ಹೊಂದಿದ್ದು, ಒಟ್ಟಾರೆ ಫೋನಿನ ವಿನ್ಯಾಸ ಪ್ರೀಮಿಯಂ ಆಗಿದೆ.

ಪರದೆ: 6.6-ಇಂಚಿನ ಫುಲ್ HD+ AMOLED ಡಿಸ್‌ಪ್ಲೇಯು ಪ್ರಕಾಶಮಾನವಾಗಿದೆ. ಹೊರಾಂಗಣದಲ್ಲೂ ಪರದೆ ಸ್ಪಷ್ಟವಾಗಿ ಕಾಣುತ್ತದೆ. ಪರದೆಯು 120Hz ರಿಫ್ರೆಶ್ ರೇಟ್ ಹೊಂದಿದೆ. ಬೇಕಾದಾಗ 60Hz ಅಥವಾ 120Hz ನಲ್ಲಿ ರಿಫ್ರೆಶ್ ರೇಟ್ ಹೊಂದಿಸಬಹುದು. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದ್ದು, ವೇಗವಾಗಿ ಕೆಲಸ ಮಾಡುತ್ತದೆ.

Advertisement

ಸಾಫ್ಟ್ ವೇರ್: Samsung Galaxy A34 5G ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ (SoC) ಹೊಂದಿದೆ. ಇದೇ ಚಿಪ್ Realme 10 Pro+ 5G ಮತ್ತು Redmi Note 12 Pro+ 5G ನಲ್ಲಿ ಸಹ ಇದೆ. ಇದರಲ್ಲಿ 8 GB ವರೆಗಿನ ವರ್ಚುವಲ್ RAM ಬೆಂಬಲವಿದೆ. ಇದನ್ನು ಸ್ಯಾಮ್‌ಸಂಗ್ RAM ಪ್ಲಸ್ ಎಂದು ಕರೆಯುತ್ತದೆ.

ಇದರಲ್ಲಿ ಸ್ಯಾಮ್ ಸಂಗ್ ನದೇ One UI 5.1 ಇದೆ. Android 13 ಆವೃತ್ತಿಯನ್ನು ಇದಕ್ಕೆ ಹೊಂದಿಸಲಾಗಿದೆ. ಸ್ಯಾಮ್ ಸಂಗ್ ಫೋನ್ ಬಳಕೆದಾರರಿಗೆ ಒನ್ ಯುಐ ಚಿರಪರಿಚಿತ. ಈ ಫೋನ್ ನಲ್ಲೂ ಅದೇ ವಿನ್ಯಾಸಗಳನ್ನು ಕಾಣಬಹುದು.

ಫೋನಿನ ವೇಗ ಚೆನ್ನಾಗಿದೆ. ಅಪ್ಲಿಕೇಶನ್‌ಗಳು ತ್ವರಿತವಾಗಿ ಲೋಡ್ ಆಗುತ್ತವೆ RAM ನಿರ್ವಹಣೆ ಸಹ ಉತ್ತಮವಾಗಿದೆ. ಈ ಫೋನಿಗೆ ಸ್ಯಾಮ್‌ಸಂಗ್ ನಾಲ್ಕು ಪ್ರಮುಖ ಆಂಡ್ರಾಯ್ಡ್ ಅಪ್ ಡೇಟ್ ಗಳು ಮತ್ತು ಐದು ವರ್ಷಗಳವರೆಗೆ ಸೆಕ್ಯುರಿಟಿ ಪ್ಯಾಚ್ ಒದಗಿಸುವುದಾಗಿ ತಿಳಿಸಿದೆ.

ಅಮೆಜಾನ್ ಸೇರಿದಂತೆ ಕೆಲವು ಆಪ್ ಗಳು ಮೊದಲೇ ಇನ್ ಸ್ಟಾಲ್ ಆಗಿವೆ. ಆದರೆ ನಿಮಗೆ ಬೇಡವಾದ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್ ಇನ್ ಸ್ಟಾಲ್ ಮಾಡಬಹುದಾಗಿದೆ.

ಕಾರ್ಯಾಚರಣೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಸಾಕಷ್ಟು ಸಮರ್ಥ ಪ್ರೊಸೆಸರ್ ಹೊಂದಿದೆ, ಇದು ದಿನನಿತ್ಯದ ಕಾರ್ಯಗಳನ್ನು ಸುಲಭವಾಗಿ ನಿಭಾಯಿಸುತ್ತದೆ. 30 ನಿಮಿಷ ಗೇಮ್ ಗಳನ್ನು ಆಡಿದಾಗಲೂ ಬಿಸಿಯಾಗಲಿಲ್ಲ. ಹೆವಿ ಗೇಮ್ ಗಳಲ್ಲಿ ಸ್ವಲ್ಪ ಅಡಚಣೆ ತೋರುತ್ತದೆ. ಗೇಮ್ ಗಳನ್ನು ಹೆಚ್ಚು ಆಡದ, ಮಾಮೂಲು ಬಳಕೆಗೆ ಫೋನ್ ನ ವೇಗ ಸಾಕಾಗುತ್ತದೆ.

ಕ್ಯಾಮರಾ: ಇದು ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಒಳಗೊಂಡಿದ್ದು, 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 13-ಮೆಗಾಪಿಕ್ಸೆಲ್ ಕ್ಯಾಮರಾ ಇದೆ.

ಪ್ರಾಥಮಿಕ ಕ್ಯಾಮರಾ ಡೀಟೇಲ್ ಗಳನ್ನು ಚೆನ್ನಾಗಿ ಗ್ರಹಿಸುತ್ತದೆ. ಬಣ್ಣಗಳು ಸ್ಯಾಚುರೇಟೆಡ್ ಆಗಿದ್ದು, ಕಲರ್ ಫುಲ್ ಆಗಿ ಕಾಣಬರುತ್ತವೆ. ಕಡಿಮೆ ಬೆಳಕಿನಲ್ಲೂ ಕ್ಯಾಮರಾ ದೃಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ಸೋಲುವುದಿಲ್ಲ. ಡೇಲೈಟ್ ಚಿತ್ರಗಳು ಉತ್ತಮವಾಗಿ ಮೂಡಿಬರುತ್ತವೆ. ಮ್ಯಾಕ್ರೋ ಕ್ಯಾಮರಾ ಉತ್ತಮವಾಗಿದೆ. ಸೆಲ್ಫೀ ಕ್ಯಾಮರಾ ಪರವಾಗಿಲ್ಲ.

ಬ್ಯಾಟರಿ: ಈ ಫೋನ್ 5000 ಎಂಎಎಚ್ ಬ್ಯಾಟರಿ ಹೊಂದಿದ್ದು, ಪೂರ್ತಿ ದಿನ ಬಾಳಿಕೆ ಬರುತ್ತದೆ. ಸರಾಸರಿ ಸುಮಾರು 8 ಗಂಟೆಗಳ ಸ್ಕ್ರೀನ್-ಆನ್ ಟೈಮ್ (SoT) ನೀಡುತ್ತದೆ. ಶೂನ್ಯದಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು ಸುಮಾರು 1 ಗಂಟೆ, 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.  ಇದು 25W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ. ಎಂದಿನಂತೆ ಇದರ ಬಾಕ್ಸ್ ನಲ್ಲಿ ಚಾರ್ಜರ್ ಇಲ್ಲ. ಗ್ರಾಹಕ ಪ್ರತ್ಯೇಕವಾಗಿ ಖರೀದಿಸಬೇಕು.

Samsung Galaxy A34 5ಜಿ ಫೋನ್ ಸ್ಯಾಮ್ ಸಂಗ್ ನ ಮಧ್ಯಮ ವರ್ಗದ ಹಾರ್ಡ್ ವೇರ್, ಸಾಫ್ಟ್ ವೇರ್ ನಲ್ಲಿ ಸಮರ್ಥವಾದ, ಉತ್ತಮ ಫೋನ್ ಎನ್ನಲಡ್ಡಿಯಿಲ್ಲ. ನಾಲ್ಕು ಆಂಡ್ರಾಯ್ಡ್ ಅಪ್ಡೇಟ್ ಗಳು ಐದು ವರ್ಷಗಳವರೆಗೆ ಸೆಕ್ಯುರಿಟಿ ಪ್ಯಾಚ್ ಅಪ್ಡೇಟ್ ಗಳು ದೊರಕುವುದರಿಂದ, ಐಪಿ 67 ರೇಟಿಂಗ್, ಗೊರಿಲ್ಲಾ ಗ್ಲಾಸ್, ಅಮೋಲೆಡ್ ಪರದೆ ಒಳಗೊಂಡಿರುವುದು ಬಳಕೆದಾರನಿಗೆ ಸೂಕ್ತ ಮೌಲ್ಯ ಒದಗಿಸುತ್ತದೆ ಎನ್ನಬಹುದು.

-ಕೆ.ಎಸ್. ಬನಶಂಕರ ಆರಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next