ನವದೆಹಲಿ: ಸ್ಯಾಮ್‌ಸಂಗ್ ಕಂಪನಿ, ತನ್ನ ಗ್ಯಾಲಾಕ್ಸಿ ಸರಣಿಯಲ್ಲಿ “ಎ 22′ ಎಂಬ ಹೊಸ ಮೊಬೈಲನ್ನು ಬಿಡುಗಡೆ ಮಾಡಿದೆ. 5 ಜಿ ತಂತ್ರಜ್ಞಾನದೊಂದಿಗೆ, 6 ಹಾಗೂ 8 ಜಿಬಿ RAMನಡಿ ಲಭ್ಯ. 6 ಜಿಬಿ + 128 ಜಿಬಿ ಸಾಮರ್ಥ್ಯದ ಫೋನ್‌ನ ಬೆಲೆ 19,999 ರೂ. ಇದ್ದರೆ, 8 ಜಿಬಿ ರ್ಯಾಮ್ + 128 ಜಿಬಿ ಫೋನ್‌ನ ಬೆಲೆ 21,999 ರೂ. ಇದೆ ಎಂದು ಕಂಪನಿ ತಿಳಿಸಿದೆ. 6.6 ಇಂಚು ಪರದೆ ಹೊಂದಿರುವ ಇದು, 90 ಹರ್ಟ್ಸ್ ರೆಫ್ರೆಶಿಂಗ್ ರೇಟ್, 48 ಎಂಪಿ ರಿಯರ್ ಕ್ಯಾಮೆರಾ ಹೊಂದಿದೆ.
ಭಾರತದಲ್ಲಿ ಟೆಸ್ಲಾ ಕಾರುಗಳು ಸದ್ಯಕ್ಕಿಲ್ಲ
ಬಹುನಿರೀಕ್ಷಿತ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳು ಸದ್ಯದಲ್ಲಿ ಭಾರತಕ್ಕೆ ಲಗ್ಗೆಯಿಡುವುದಿಲ್ಲ ಎಂದು ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಅವರೇ ಸ್ಪಷ್ಟಪಡಿಸಿದ್ದಾರೆ. ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕಾರು ಉತ್ಪಾದನಾ ಘಟಕವನ್ನು ನಿರ್ಮಿಸುವ ಇರಾದೆ ಹೊಂದಿದೆ. ಈ ಹಿನ್ನೆಲೆಯಲ್ಲಿ, ಮದನ್ ಗೌರಿ ಎಂಬವರು ಎಲಾನ್ ಮಸ್ಕ್ ಅವರಿಗೆ ಟ್ವೀಟ್ ಮಾಡಿ, ಭಾರತದಲ್ಲಿ ಆದಷ್ಟು ಬೇಗನೇ ಟೆಸ್ಲಾ ಕಾರುಗಳನ್ನು ಬಿಡುಗಡೆ ಮಾಡ ಬೇಕೆಂದು ಕೋರಿದ್ದರು.
ಇದಕ್ಕೆ ಉತ್ತರಿಸಿರುವ ಮಸ್ಕ್, ಆಮದು ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದರೆ ಶೀಘ್ರವೇ ಕಾರು ಉತ್ಪಾ ದನೆಗೆ ಚಾಲನೆ ದೊರಕಬಹುದು. ಈ ಕುರಿತಂತೆ ಭಾರತ ಸರ್ಕಾರ ಸ್ಪಂದಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಮತ್ತೂಂದೆಡೆ, ಟೆಸ್ಲಾದ ಎಸ್ ಮತ್ತು ಎಕ್ಸ್ ಮಾದರಿಯ ವಿದ್ಯುತ್ ಕಾರುಗಳಲ್ಲಿನ ಸ್ಟಿಯರಿಂಗ್, ಸಾಂಪ್ರದಾಯಿಕ ಸ್ಟಿಯರಿಂಗ್ ರೀತಿಯಲ್ಲಿ ಇರುವುದಿಲ್ಲ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.