Advertisement

ಸ್ಯಾಮ್‌ಸಂಗ್  ಗ್ಯಾಲಕ್ಸಿ A22 ಸ್ಮಾರ್ಟ್‌ಫೋನ್‌ ಬಿಡುಗಡೆ

05:55 PM Jun 04, 2021 | Team Udayavani |

ಸ್ಯಾಮ್‌ಸಂಗ್ ಸಂಸ್ಥೆಯು ಇದೀಗ ಹೊಸದಾಗಿ ಗ್ಯಾಲಕ್ಸಿ A22 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 5G ಮತ್ತು 4G ಅವತರಣಿಕೆಗಳಲ್ಲಿ ಬಿಡುಗಡೆ ಆಗಿದೆ

Advertisement

ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್ ಸಂಸ್ಥೆಯು ಯುರೋಪ್ ಮಾರುಕಟ್ಟೆಯಲ್ಲಿ ಹೊಸದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A22 ಸ್ಮಾರ್ಟ್‌ಫೋನ್‌ ಅನ್ನು 5G ಮತ್ತು 4G ಆವೃತ್ತಿಗಳಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾಗಳನ್ನು ಒಳಗೊಂಡಿರುವುದು ವಿಶೇಷವಾಗಿದ್ದು, 8GB RAMಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. ಇದರೊಂದಗೆ 5,000mAh ಸಾಮರ್ಥ್ಯದ ಬ್ಯಾಟರಿ ಲೈಫ್‌ ಅನ್ನು ಪಡೆದುಕೊಂಡಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A22 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ರೀಫ್ರೇಶ್ ರೇಟ್ 90Hz ಆಗಿದೆ. ಸೆಲ್ಫಿ ಕ್ಯಾಮೆರಾ ನಾಚ್ ರಚನೆ ಇದೆ.

Advertisement

ಪ್ರೊಸೆಸರ್‌ ಸಾಮರ್ಥ್ಯ

ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ ಆಕ್ಟಾಕೋರ್ ಮೀಡಿಯಾ ಟೆಕ್ Dimensity 700 ಪ್ರೊಸೆಸರ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್ ಬೆಂಬಲದಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್ 8GB RAMಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ 1TB ವರೆಗೂ ವಿಸ್ತರಿಸಲು ಅವಕಾಶ ಹೊಂದಿದೆ.

ಕ್ವಾಡ್‌ ಕ್ಯಾಮೆರಾ ರಚನೆ

ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 2 ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿಗಾಗಿ 8 ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಎಡಿಟಿಂಗ್ ಆಯ್ಕೆಗಳು ಇವೆ.

ಗ್ಯಾಲಕ್ಸಿ A22 4G ಸ್ಮಾರ್ಟ್‌ಫೋನ್‌ ಫೀಚರ್ಸ್‌

ಗ್ಯಾಲಕ್ಸಿ A22 4G ಸ್ಮಾರ್ಟ್‌ಫೋನ್ 6.4 ಇಂಚಿನ ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 90Hz ರೀಫ್ರೇಶ್ ರೇಟ್ ಅನ್ನು ಒಳಗೊಂಡಿದೆ. ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G80 ಪ್ರೊಸೆಸರ್‌ ಇದ್ದು, ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಒಳಗೊಂಡಿದೆ. ಇದರೊಂದಿಗೆ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಕ್ವಾಡ್‌ ಕ್ಯಾಮೆರಾ ರಚನೆಯ ಇದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಹಾಗೆಯೇ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಬೆಲೆ ಎಷ್ಟು?

ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ ಆರಂಭಿಕ 4GB RAM ಮತ್ತು 64GB ವೇರಿಯಂಟ್ ಬೆಲೆಯು ಯುರೋಪ್‌ನಲ್ಲಿ EUR 229 (ಭಾರತದಲ್ಲಿ ಅಂದಾಜು 20,300ರೂ.) ಹಾಗೆಯೇ 4GB RAM + 128GB ಸ್ಟೋರೇಜ್ ಬೆಲೆಯು EUR 249 (ಭಾರತದಲ್ಲಿ ಅಂದಾಜು 22,100ರೂ). ಆಗಿರಲಿದೆ. ಇನ್ನು ಈ ಫೋನ್ ಗ್ರೇ, ಮಿಂಟ್, ವೈಲೆಟ್ ಮತ್ತು ವೈಟ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next