Advertisement

ನೆಮ್ಮದಿ ಬದುಕಿಗೆ ಸಂಸ್ಕಾರ ಮುಖ್ಯ: ಮಹಾದೇವ

12:50 PM Feb 02, 2020 | Suhan S |

ಅಡಹಳ್ಳಿ: ಶಿಕ್ಷಣ ಜ್ಞಾನದ ಜೊತೆಗೆ ಉದ್ಯೋಗಕ್ಕೆ ಸಹಕಾರಿಯಾಗಿದೆ. ಆದರೆ, ಸಂಸ್ಕಾರ ಎಂಬುವುದು ಬದುಕಿಗೆ ಅತಿ ಮುಖ್ಯವಾಗಿದೆ ಎಂದು ನಂದಗಾಂವ ಭೂ ಕೈಲಾಸ ಮಂದಿರದ ಮಹಾದೇವ ಮಹಾರಾಜರು ಹೇಳಿದರು.

Advertisement

ನಂದಗಾಂವ ಗ್ರಾಮದ ಭೂ ಕೈಲಾಸ ಮಂದಿರದಲ್ಲಿ ಶನಿವಾರ ಅವಜೀಕರ ಮಹಾರಾಜರ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಭಾವ ಸಮ್ಮಿಲನ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಗುರು-ಹಿರಿಯರ ಬಗ್ಗೆ ಗೌರವ ಇಡಬೇಕು. ನೆರೆಹೊರೆಯವರೊಂದಿಗೆ ಅನೋನ್ಯ ಬಾಂಧವ್ಯದಿಂದ ಇರುವುದೇ ಸಂಸ್ಕಾರದ ಲಕ್ಷಣಗಳಾಗಿವೆ ಎಂದರು.

ಅಭಿಯಂತರ ರಾಜಶೇಖರ ಟೋಪಗಿ ಕಾರ್ಯಕ್ರಮ ಉದ್ಘಾಟಿಸಿದರು. ಮೂಡಲಗಿ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ, ಗುರು ಮಗದುಮ್‌, ಗಿರೀಶ ಮಾಳಿ, ವಿವೇಕ ನಾರಗೊಂಡ, ಮಂಗಲ ಗುಮಟಿ, ಸಿ.ಜಿ. ಜನಗೊಂಡ, ಸಂತೋಷ ಪಾಟೀಲ, ಪರಪ್ಪ ಪಿಸಗುಪ್ಪಿ ಇದ್ದರು. ಕೃಷ್ಣಾ ತೀರ್ಥ ಸ್ವಾಗತಿಸಿದರು. ಆನಂದ ಕುಲಕರ್ಣಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next