Advertisement

ಸಂಸತ್‌ ಅಧಿವೇಶನ ಇಂದು ಶುರು: ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ

02:29 AM Jan 29, 2021 | Team Udayavani |

ಹೊಸದಿಲ್ಲಿ: ಎರಡು ಹಂತಗಳ ಸಂಸತ್‌ನ ಬಜೆಟ್‌ ಅಧಿವೇಶನ ಶುಕ್ರವಾರ ಶುರುವಾಗಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆರ್ಥಿಕ ಸಮೀಕ್ಷೆಯೂ ಶುಕ್ರವಾರವೇ ಮಂಡನೆಯಾ ಗ ಲಿದೆ. ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮುಂಗಡಪತ್ರ ಮಂಡಿಸಲಿದ್ದಾರೆ.

Advertisement

ಕೊರೊನಾ ನಿಯಮದ ಹಿನ್ನೆಲೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳು ತಲಾ ಐದು ಗಂಟೆಗಳಿಗೆ ನಿಗದಿಯಾಗಿವೆ. ರಾಜ್ಯಸಭೆಯ ಕಲಾಪಗಳು ಬೆಳಗ್ಗೆ, ಲೋಕಸಭೆ ಕಲಾಪಗಳು ಸಂಜೆ ವೇಳೆ ನಡೆಯಲಿವೆ. ಅಧಿವೇಶನದ ಮತ್ತೂಂದು ಪ್ರಮುಖ ಅಂಶವೆಂದರೆ ವಾರಾಂತ್ಯಗಳಲ್ಲಿ ಕಲಾಪಗಳು ನಡೆಯುವುದಿಲ್ಲ. ಮೂರು ಕೃಷಿ ಕಾಯ್ದೆಗಳ ವಿರುದ್ಧ ಜ.26ರಂದು ಹೊಸದಿಲ್ಲಿಯ ಕೆಂಪುಕೋಟೆ ಆವರಣ ಮತ್ತು ಇತರ ಪ್ರದೇಶಗಳಲ್ಲಿ ಕೋಲಾಹಲದ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಬಜೆಟ್‌ ಅಧಿವೇಶನದಲ್ಲಿಯೂ ವಿಪಕ್ಷಗಳು ಸರಕಾರದ ನಿಲುವು ಖಂಡಿಸಿ ಧರಣಿ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ.

ಫೆ.1ರಂದು ಮಂಡನೆಯಾಗಲಿರುವ ಬಜೆಟ್‌ ದೇಶದಲ್ಲಿ ಅರ್ಥವ್ಯವಸ್ಥೆಯ ಹೊಸ ಬೆಳವಣಿಗೆಗೆ ಕಾರಣವಾಗಲಿದೆ. ಉತ್ತಮ ಆರ್ಥ ವ್ಯವಸ್ಥೆ ಉತ್ತಮ ರಾಜಕಾರಣ ಮೋದಿ ಸರಕಾರದ ನಿಲುವು.
– ಗೋಪಾಲಕೃಷ್ಣ ಅಗರ್ವಾಲ್‌, ಬಿಜೆಪಿ ವಕ್ತಾರ

7 ವರ್ಷದ ಮೋದಿ ನೇತೃತ್ವದ ಸರಕಾರದ ಆಡಳಿತ ದೇಶದ ಅರ್ಥ ವ್ಯವಸ್ಥೆ, ಭಾರೀ ಅಭಿವೃದ್ಧಿ ಸಾಧಿಸಲು ಇದ್ದ ಅವಕಾಶವನ್ನು ಹಾಳುಗೆಡವಿದೆ. ಬಜೆಟ್‌ ಕೇವಲ ಅಲಂಕಾರಿಕ ವಿತ್ತೀಯ ನಿರ್ಣಯಗಳು ಆಗಿರಲಿವೆ.
– ಪಿ.ಚಿದಂಬಂರ, ಮಾಜಿ ವಿತ್ತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next