Advertisement

ನಮ್ಮೂರಿನ ಕಣ್ಮಣಿ ಕುಂದಾಪುರದ ಸಮೃದ್ಧಿ

11:19 PM Jan 22, 2020 | Sriram |

ಪಟಪಟ ಅಂತ ಅರಳು ಹುರಿದಂತೆ ಮಾತನಾಡುವ ಮಾತಿನಮಲ್ಲಿ ಕುಂದಾಪುರದ ಸಮೃದ್ಧಿ, ಅತ್ತಿಂದಿತ್ತ ಲವಲವಿಕೆಯಿಂದ ಓಡಾಡುವ ಉತ್ಸಾಹದ ಚಿಲುಮೆ.

Advertisement

ಜೀ ಕನ್ನಡ ವಾಹಿನಿಯ “ಕನ್ನಡದ ಕಣ್ಮಣಿ’ ಶೋ ಮೂಲಕ ಪರಿಚಿತಳಾದ ಸಮೃದ್ಧಿ, ಶ್ರೀಧರ್‌ ಮೊಗವೀರ ಮತ್ತು ಭಾರತಿ ದಂಪತಿಯ ಮೊದಲ ಪುತ್ರಿ.

ಪುಟ್ಟ ವಯಸ್ಸಿನಲ್ಲೇ ಕಲಾಕ್ಷೇತ್ರಕ್ಕೆ ಕಾಲಿಟ್ಟ ಹುಡುಗಿ ಎರಡೂ ವರೆ ವಯಸ್ಸಿನಲ್ಲಿ ಸಂಡೂರಿನ ಗಣೇಶೋತ್ಸವ ಸಮಿತಿಯ ವೇದಿಕೆ ಯೇರಿ ನೃತ್ಯ ಮಾಡಿ ಜನರ ಮನ ಗೆದ್ದಳು. ಯಾವುದೇ ಮುದ್ದುಕೃಷ್ಣ ಸ್ಪರ್ಧೆಗೆ ಹೋದರೂ ಬಹುಮಾನ ಕಟ್ಟಿಟ್ಟ ಬುತ್ತಿ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾಳೆ.

ಕಲಿಕೆಯಲ್ಲಿ ಸದಾ ಮುಂದಿರುವ ಇವಳು ತೆಕ್ಕಟ್ಟೆಯ ವಿಶ್ವ ವಿನಾಯಕ ಶಾಲೆಯಲ್ಲಿ ಮೂರನೇ ತರಗತಿಯ ವಿದ್ಯಾರ್ಥಿನಿ. ನಾಲ್ಕೂವರೆ ವಯಸ್ಸಿನಲ್ಲಿ ನಿರೂಪಣೆಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸಿದ್ದು ಇವಳ ಶಾಲೆಯ ಆಡಳಿತ ಮಂಡಳಿ. ಆರೂವರೆ ವಯಸ್ಸಿನಲ್ಲಿ ಜೀ ಕನ್ನಡ ವಾಹಿನಿಯ ಕನ್ನಡದ ಕಣ್ಮಣಿ ಶೋದಲ್ಲಿ ಅಭಿನಯಿಸಿದಳು.

ಸ್ಪರ್ಧೆಗೆ ಅಂತಿಮವಾಗಿ ಆಯ್ಕೆ ಯಾದ 14 ಮಕ್ಕಳಲ್ಲಿ ಇವಳೂ ಸೇರಿದ್ದಳು. ಈ ಶೋಗೆ ಆಯ್ಕೆ ಯಾದ ಅತ್ಯಂತ ಕಿರಿಯ ಸದಸ್ಯರಲ್ಲಿ ಇವಳೂ ಒಬ್ಬಳು. ಭಾಷಣ, ನಿರೂಪಣೆ, ಯಕ್ಷಗಾನ ಇವಳ ಹವ್ಯಾಸ. ಹಲವೆಡೆ ಯಕ್ಷಗಾನ ಪ್ರದರ್ಶನವನ್ನೂ ನೀಡಿರುವ ಸಮೃದ್ಧಿ, ಪ್ರಶಸ್ತಿಯನ್ನು ಪಡೆದಿದ್ದಾಳೆ. ರಿಯಾಲಿಟಿ ಷೋನಿಂದ ಸಿನೆಮಾಗೆ ಕಾಲಿಟ್ಟ ಸಾಧನೆ ಇವಳದ್ದು.

Advertisement

ಹೆಸರಾಂತ ನಿರ್ದೇಶಕರ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಪಡೆದುದಲ್ಲದೆ, ಪಿ. ಶೇಷಾದ್ರಿಯವರ ಮೂಕಜ್ಜಿಯ ಕನಸು, ರವಿ ಬಸೂÅರು ಅವರ ಗಿರ್ಮಿಟ್‌, ಶ್ರೀಧರ್‌ ಉಡುಪ ರವರ ಮಾಡ್ರೆನ್‌ ಮಹಾ ಭಾರತ ಸಿನೆಮಾ ಗಳಲ್ಲಿ ನಟಿಸಿದ್ದಾಳೆ. ಸಮೃದ್ಧಿಗೆ ಹಲವು ಪ್ರಶಸ್ತಿಗಳು ಸಂದಿವೆ.

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ತರಹ ತಾನೂ ವೈದ್ಯ ಶಿಕ್ಷಣವನ್ನು ಕಲಿಯಬೇಕೆಂಬ ಆಸೆ ಸಮೃದ್ಧಿಯದ್ದು. ಜತೆಗೆ ನಟನೆಯಲ್ಲೂ ಮುಂದುವರಿಯುವ ಹಂಬಲ ಆಕೆಯದ್ದು.
-  ನವ್ಯಶ್ರೀ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next