Advertisement

ಸಂಪೂರ್ಣೇಶ ಸಂಪೂರ್ಣ ನ್ಯೂಡ್ : ಸದ್ದು ಮಾಡ್ತಿದೆ ‘ಕಾಲಿಫ್ಲವರ್’ ನ್ಯೂ ಲುಕ್

03:22 PM Jul 05, 2021 | Team Udayavani |

ಹೈದರಾಬಾದ್: 2014 ರಲ್ಲಿ ರಿಲೀಸ್ ಆಗಿದ್ದ ಅಮೀರ್ ಖಾನ್ ನಟನೆಯ ‘ಪಿಕೆ’ ಚಿತ್ರದ ಪೋಸ್ಟರ್  ತುಂಬಾನೆ ಸದ್ದು ಮಾಡಿತ್ತು. ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು. ಆ ಲುಕ್ ನಲ್ಲಿ ಅಮೀರ್ ನ್ಯೂಡ್ ಆಗಿ ಕಾಣಿಸಿಕೊಂಡಿದ್ದರು.  ಇದೀಗ ಅಂತಹದೆ ಮತ್ತೊಂದು ಪೋಸ್ಟರ್ ಇದೀಗ ಸಿನಿ ಮಂದಿಯ ಗಮನ ಸೆಳೆಯುತ್ತಿದೆ.

Advertisement

ಟಾಲಿವುಡ್ ಬರ್ನಿಂಗ್ ಸ್ಟಾರ್ ಸಂಪೂರ್ಣೇಶ್ ಬಾಬು ಅಭಿನಯದ ‘ಕಾಲಿಫ್ಲವರ್’ ಚಿತ್ರದ ಪೋಸ್ಟರ್‌ ಎಲ್ಲೆಡೆ ವೈರಲ್ ಆಗುತ್ತಿದೆ. ಪೋಸ್ಟರ್‌ನಲ್ಲಿ ಬಾಬು ಅಸೆಂಬ್ಲಿ ಮುಂದೆ ನಗ್ನವಾಗಿ ನಿಂತು ಕಾಲಿಫ್ಲವರ್ ಹಿಡಿದಿರುವುದಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನಮ್ಮ ರಾಜಕೀಯ ಸ್ಥಿತಿ ಬಗ್ಗೆ ಮಾತನಾಡುವುದಕ್ಕೆ ವ್ಯಂಗ್ಯ ಮಾಡುವುದಕ್ಕೆ ಸಂಪೂರ್ಣೇಶ್ ಬಾಬುಗೆ ಮಾತ್ರ ಹಕ್ಕಿರುವುದು ಎಂದು ಕಾಲೆಳೆಯುತ್ತಿದ್ದಾರೆ.

‘!’ಕಾಲಿಫ್ಲವರ್’ ಚಿತ್ರಕ್ಕಾಗಿ ಸಂಪೂರ್ಣೇಶ ನ್ಯೂಡ್ ಆಗಿರುವುದು ಹಾಟ್ ಟಾಫಿಕ್ ಆಗಿದೆ. ನಟಿಯರು ನ್ಯೂಡ್ ಆಗಿ ಕಾಣಿಸಿಕೊಂಡ ಸಾಕಷ್ಟು ಉದಾಹರಣಗಳು ಇವೆ. ಆದರೆ, ನಟರು ವಿವಸ್ತ್ರವಾದ ಸನ್ನಿವೇಶಗಳು ಸಿನಿಮಾಗಳಲ್ಲಿ ವಿರಳ.

ಇನ್ನು ಕಾಲಿ ಫ್ಲವರ್ ಚಿತ್ರವನ್ನು ಆರ್.ಕೆ. ಮಾಲಿನೇನಿ ನಿರ್ದೇಶನ ಮಾಡಿದ್ದಾರೆ. ಆಶಾ ಜ್ಯೋತಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಶೂಟಿಂಗ ಮುಗಿಸಿಕೊಂಡಿರುವ ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲಿ ತೆರೆ ಕಾಣಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next