Advertisement

ಮಹರ್ಷಿ ಕಾರ್ವೆ ಸ್ತ್ರೀ ಶಿಕ್ಷಣ ಸಂಸ್ಥೆಯ ಕೋವಿಡ್‌ ಕೇರ್‌ ಸೆಂಟರ್‌ನಿಂದ ಮಾದರಿ ಸೇವೆ

01:18 PM May 10, 2021 | Team Udayavani |

ಪುಣೆ: ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ನಗರದ ಮಹರ್ಷಿ ಕಾರ್ವೆ ಸ್ತ್ರೀ ಶಿಕ್ಷಣ ಸಂಸ್ಥೆಯ ಕೋವಿಡ್‌ ಕೇರ್‌ ಸೆಂಟರ್‌ ಮಾದರಿ ಸಂಸ್ಥೆಯಾಗಿ ಸೇವೆ ಸಲ್ಲಿಸುವುದರ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಮಹಿಳಾ ಶಿಕ್ಷಣಕ್ಕಾಗಿ ಸ್ಥಾಪನೆಯಾದ ಸಮರ್ಥ್ ಭಾರತ್‌ ಯೋಜನೆ ಮಹರ್ಷಿ ಕಾರ್ವೆ ಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಗುಡಿಪಾಡ್ವದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜನಕಲ್ಯಾಣ್‌ ಸಮಿತಿಯ ಸಹಕಾರದೊಂದಿಗೆ ಕೊರೊನಾ ಕೇರ್‌ ಸೆಂಟರ್‌ ಅನ್ನು ಪ್ರಾರಂಭಿಸಲಾಗಿದೆ. ಸಹ್ಯಾದ್ರಿ ಆಸ್ಪತ್ರೆಯ ತಜ್ಞ ವೈದ್ಯರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಮೂರು ಪಾಳಿಯಲ್ಲಿ ಕೆಲಸ ಮಾಡುವ ಎಂಟು ವೈದ್ಯರು ಮತ್ತು 25 ಸ್ವಯಂ ಸೇವಕರು ಸೋಂಕಿತರಿಗೆ ವೈದ್ಯಕೀಯ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿ¨ªಾರೆ. ಅಗತ್ಯವಿದ್ದರೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಯೋಜಿಸಲಾಗಿದೆ ಎಂದು ಕೇಂದ್ರದ ಸಂಯೋಜಕ ಮಹೇಶ್‌ ಪೋಹ್ನಕರ್‌ ಅವರು ಹೇಳಿದರು.ರೋಲ್‌ ಮಾಡೆಲ್‌ ಸಂಸ್ಥೆಪ್ರತಿದಿನ ಬೆಳಗ್ಗೆ ಚಹಾ-ಉಪಹಾರ, ಬಳಿಕ ಪ್ರಾಣಾಯಾಮ ಮತ್ತು ನಗೆ ಯೋಗ, ವೈದ್ಯರ ನಿಯಮಿತ ತಪಾಸಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಖನ್ನತೆಗೆ ಒಳಗಾದವರಿಗೆ ತಜ್ಞರ ಸಮಾಲೋಚನೆ, ಭೋಜನ ಈ ಕೊರೊನಾ ಆರೈಕೆ ಕೇಂದ್ರಕ್ಕೆ ದಾಖಲಾದ ಸೋಂಕಿತರ ದೈನಂದಿನ ದಿನಚರಿಯಾಗಿದೆ.ವಿವಿಧ ಸಂಸ್ಥೆಗಳ ಸಹಕಾರಮಹರ್ಷಿ ಕಾರ್ವೆ ಶ್ರೀ ಶಿಕ್ಷಣ ಸಂಸ್ಥೆಯ ಕೊರೊನಾ ಆರೈಕೆ ಕೇಂದ್ರವು ಪುಣೆ ಮಹಾನಗರ ಪಾಲಿಕೆ, ವಿವೇಕ್‌ ವ್ಯಾಸ್ಪೀತ, ಪಿಪಿಸಿಆರ್‌, ಸಹ್ಯಾದ್ರಿ ಆಸ್ಪತ್ರೆ, ಲೋಹಿಯಾ ಪರಿವಾರದ ಶ್ರೀ ಮುಕುಂದ್‌ ಭವನ ಟ್ರಸ್ಟ್‌, ಲಕ್ಷ್ಮೀನಾರಾಯಣ ದೇವಸ್ತಾನ ಟ್ರಸ್ಟ್‌, ಪರಿಮಲ್‌ ಮತ್ತು ಪ್ರಮೋದ್‌ ಚೌಧರಿ ಪ್ರತಿಷ್ಠಾನದ ಸಹಯೋಗದಿಂದ ಕಾರ್ಯನಿರ್ವಹಿಸುತ್ತಿದೆ.

ಒಂದು ಕೋಣೆಯಲ್ಲಿಮೂರು ಮಂದಿ ಸೋಂಕಿತರುಕಾರ್ವೆ ನಗರದ ಬಯಾ ಕಾರ್ವೆ ಹಾಸ್ಟೆಲ್‌ನಲ್ಲಿ ಪ್ರಾರಂಭವಾದ ಕೇಂದ್ರವು 450 ಹಾಸಿಗೆಗಳನ್ನು ಹೊಂದಿದೆ. ಸಾಮಾಜಿಕ ಅಂತರ ನಿಯಮವನ್ನು ಅನುಸರಿಸುವ ಉದ್ದೇಶದಿಂದ 3 ಮಂದಿ ಸೋಂಕಿತರಿಗೆ ಒಂದೇ ಕೋಣೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೋಗಲಕ್ಷಣಗಳಿಲ್ಲದ, ಆದರೆ ಮನೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲದ ರೋಗಿಗಳಿಗೆ ಈ ಕೇಂದ್ರವು ಉಪಯುಕ್ತವಾಗಿದೆ.ಕೇಂದ್ರದ ವೈಶಿಷ್ಟ್ಯಗಳುಸಹ್ಯಾದ್ರಿ ಆಸ್ಪತ್ರೆಯ ವೈದ್ಯರು ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜಾಗರೂ ಕರಾಗಿರುತ್ತಾರೆ. ಸ್ವಯಂಸೇವಕರು ಕೇಂದ್ರದಲ್ಲಿ ಸಂಪೂರ್ಣವಾಗಿ ಸ್ವಯಂಪ್ರೇರಿತ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗಿದೆ. ಸ್ವಯಂಸೇವಕರನ್ನು ಎಂಟು ದಿನಗಳವರೆಗೆ ಕೆಲಸ ಮಾಡಿದ ಬಳಿಕ ಎಂಟು ದಿನಗಳವರೆಗೆ ಕ್ಯಾರಂಟೈನ್‌ ಗೊಳಿಸಲಾಗುತ್ತಿದೆ.ಯುವ ಸ್ವಯಂ ಸೇವಕರು ಈ ಸಂಸ್ಥೆಯಲ್ಲಿ ಹೊಸ ಗುಣಮಟ್ಟದ ಸೇವೆಯನ್ನು ನೀಡುತ್ತಿ¨ªಾರೆ. ವೈದ್ಯರಿಗೆ ಸಹಾಯ ಮಾಡಲು ಪ್ರತಿ ಮೂರು ಪಾಳಿಯಲ್ಲಿ 25 ಸ್ವಯಂ ಸೇವಕರ ಮಂಡಳಿಯನ್ನು ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next