Advertisement

ಅರಿಯಪ್ಪಾಡಿ ಈರ್ವರು ಉಳಾಕ್ಲು ಗೆಳೆಯರ ಬಳಗದಿಂದ ಭತ್ತದ ಬೇಸಾಯ

08:53 PM Jul 29, 2019 | Sriram |

ಕುಂಬಳೆ: ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳಾಕ್ಲು ಗೆಳೆಯರ ಬಳಗದ ವತಿಯಿಂದ ಉಪ್ಪಿನೆಯ ಗದ್ದೆಯಲ್ಲಿ ಭತ್ತದ ಬೇಸಾಯ ಮಾಡಲಾಯಿತು.

Advertisement

ಗದ್ದೆಗಿಳಿದ ಕೃಷಿ ಅಧಿಕಾರಿ
ಪುತ್ತಿಗೆ ಕೃಷಿ ಭವನದ ಕೃಷಿ ಅಧಿಕಾರಿ ಹಂಸೀನಾ ಮೊಗ್ರಾಲ್‌ ಭತ್ತದ ನೇಜಿಯನ್ನು ನೆಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃಷಿಭವನದಿಂದ ದೊರೆಯುವ ನೆರವನ್ನು ಭತ್ತದ ಕೃಷಿಗೆ ನೀಡುವುದಾಗಿ ಭರವಸೆಯಿತ್ತರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ನಾರಾಯಣ ಮೂಲ್ಯ ತುಳುವಾನ, ಮಹಾಲಿಂಗ ಉಪ್ಪಿನೆ, ಸದಾಶಿವ ಮಾಸ್ತರ್‌ ಬೇಳ, ಸುಂದರ ಕಟ್ನಡ್ಕ, ಬಾಬು ಪೂಜಾರಿ ಅರಿಯಪ್ಪಾಡಿ, ಬಟ್ಯ ಮುಂಡಿತ್ತಡ್ಕ, ವೇಣುಗೋಪಾಲ ಶೆಟ್ಟಿ ಕಿನ್ನಿಮಜಲು, ಕ್ಲಬ್‌ ಅಧ್ಯಕ್ಷ ಚಂದ್ರಶೇಖರ ಗುಣಾಜೆ, ಕಾರ್ಯದರ್ಶಿ ಸದಾನಂದ ಪಾರೆ ಮುಂತಾದವರು ಉಪಸ್ಥಿತರಿದ್ದರು.

ಯಂತ್ರಗಳಿಲ್ಲ; ಎತ್ತಿನ ಬಳಕೆ
ಗದ್ದೆ ಬೇಸಾಯಕ್ಕೆ ಯಂತ್ರವನ್ನು ಬಳಸದೆ ಎತ್ತುಗಳ ಮೂಲಕ ಉತ್ತು ನಾಟಿ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಬಾಲಗೋಕುಲ ವಿದ್ಯಾರ್ಥಿಗಳಿಗೆ ಬೇಸಾಯದ ಕುರಿತು ಮಾಹಿತಿ ನೀಡಲಾಯಿತು.ಈರ್ವರು ಉಳಾಕ್ಲು ಗೆಳೆಯರ ಬಳಗದ ಸದಸ್ಯರು ಮಹಿಳಾ ಸಂಘದ ಸದಸ್ಯೆಯರು ಬೇಸಾಯದಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next