Advertisement

ಸಂಪಿಗೆ ಪ್ಲಾಸ್ಟಿಕ್‌ ಸರ್ಜರಿ ಕೇಂದ್ರ ಉದ್ಘಾಟನೆ

04:24 PM Apr 21, 2019 | Team Udayavani |

ಹುಬ್ಬಳ್ಳಿ: ಗೋಕುಲ ರಸ್ತೆ ಸಿಗ್ನಿಚರ್‌ ಮಾಲ್ನ 3ನೇ ಮಹಡಿಯಲ್ಲಿ ಸಂಪಿಗೆ ಪ್ಲಾಸ್ಟಿಕ್‌ ಸರ್ಜರಿ ಕೇಂದ್ರವನ್ನು ಮಿಸ್‌ ಗ್ರ್ಯಾಂಡ್‌ ಇಂಡಿಯಾ 2016ರ ಪ್ರಶಸ್ತಿ ಪುರಸ್ಕೃತೆ ಪಂಖುರಿ ಗಿಡ್ವಾಣಿ ಶನಿವಾರ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಅವರು, ಪ್ಲಾಸ್ಟಿಕ್‌ ಸರ್ಜರಿಯನ್ನು ಜನ ಸಾಮಾನ್ಯರು ಮಾಡಿಸಿಕೊಳ್ಳಬಹುದು. ಇದು ಕಡಿಮೆ ಖರ್ಚಿನದ್ದಾಗಿದೆ. ಬಹಳಷ್ಟು ಜನರು ಹೆದರಿಕೊಂಡು ಸರ್ಜರಿ ಮಾಡಿಸಿಕೊಳ್ಳಲ್ಲ. ಅದು ಬಾಲಿವುಡ್‌ ನಟರಿಗೆ, ಮಿಸ್‌ ಇಂಡಿಯಾದವರಿಗೆ ಸೀಮಿತ ಎಂಬ ಭಾವನೆಯಿದೆ. ಜನರಲ್ಲಿ ಪ್ಲಾಸ್ಟಿಕ್‌ ಸರ್ಜರಿ ಬಗ್ಗೆ ಇರುವ ತಪ್ಪು ಕಲ್ಪನೆಯೆ ಇದಕ್ಕೆ ಕಾರಣವೆಂದರು.

ಕಿಮ್ಸ್‌ನ ಪ್ರಭಾರಿ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಆಪರೇಶನ್‌ ಥೇಟರ್‌ ಉದ್ಘಾಟಿಸಿ, ಕಿಮ್ಸ್‌ ಆಸ್ಪತ್ರೆಯಲ್ಲೂ ಇತ್ತೀಚೆಗೆ ಪ್ಲಾಸ್ಟಿಕ್‌ ಸರ್ಜರಿ ಘಟಕ ಆರಂಭಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡು ದೇಹಕ್ಕೆ ಹಾನಿಯಾದ, ಸುಟ್ಟು ಗಾಯಗೊಂಡವರು ಸೇರಿದಂತೆ ಜನಸಾಮಾನ್ಯರು ಸಹಿತ ಕಡಿಮೆ ಖರ್ಚಿನಲ್ಲಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳಬಹುದು ಎಂದರು.

ಸಂಪಿಗೆ ಕೇಂದ್ರದ ಕಾಸ್ಮೆಟಿಕ್‌ ಸರ್ಜನ್‌ ಡಾ| ಸಿದ್ಧಲಿಂಗಪ್ಪ ಶಿರೋಳ ಮಾತನಾಡಿ, ಕೇಂದ್ರದಲ್ಲಿ ಎಲ್ಲ ಬಗೆಯ ಪ್ಲಾಸ್ಟಿಕ್‌ ಹಾಗೂ ಕಾಸ್ಮೆಟಿಕ್‌ ಸರ್ಜರಿ ಮಾಡಲಾಗುತ್ತದೆ. ಚಿಕಿತ್ಸೆ ಪಡೆಯುವವರು ಆಸ್ಪತ್ರೆಯಲ್ಲಿ ದಾಖಲಾಗಬೇಕೆಂದಿಲ್ಲ. ಚಿಕಿತ್ಸೆ ಪಡೆದು ಅದೇ ದಿನ ಮನೆಗೆ ಹೋಗಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಕೇಂದ್ರ ಮೊದಲನೇಯದ್ದಾಗಿದೆ ಎಂದು ತಿಳಿಸಿದರು.

ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಸಿ., ಸಿಇಒ ಬಸವರಾಜ ಸೋಮನ್ನವರ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next