Advertisement

ಮತ್ತೆ ಕೈ, ಜೆಡಿಎಸ್ ದೋಸ್ತಿ; ಸಂಪತ್ ರಾಜ್ ಗೆ BBMP ಮೇಯರ್ ಪಟ್ಟ

01:32 PM Sep 28, 2017 | Team Udayavani |

ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೈಜೋಡಿಸುವ ಮೂಲಕ  ಬಿಬಿಎಂಪಿಯ 50ನೇ ಮೇಯರ್ ಆಗಿ ಕಾಂಗ್ರೆಸ್ ಕಾರ್ಪೋರೇಟರ್ ಸಂಪತ್ ರಾಜ್ ಹಾಗೂ ಉಪಮೇಯರ್ ಆಗಿ ಜೆಡಿಎಸ್ ಕಾರ್ಪೋರೇಟರ್ ಪದ್ಮಾವತಿ ನರಸಿಂಹಮೂರ್ತಿ ಗುರುವಾರ ಆಯ್ಕೆಯಾಗಿದ್ದಾರೆ.

Advertisement

ಮೇಯರ್, ಉಪಮೇಯರ್ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಪೋರೇಟರ್ ಗಳು ಪ್ರತಿಭಟನೆ ನಡೆಸಿದರು. ಬಳಿಕ ಮತದಾನ ಬಹಿಷ್ಕರಿಸಿ ಸಭಾತ್ಯಾಗ ನಡೆಸಿದರು.

ಡಿಜೆಹಳ್ಳಿ ವಾರ್ಡ್ ನ ಕಾಂಗ್ರೆಸ್ ಕಾರ್ಪೋರೇಟರ್ ಸಂಪತ್ ರಾಜ್ 139 ಮತ ಗಳಿಸುವ ಮೂಲಕ ಮೇಯರ್ ಪಟ್ಟ ಅಲಂಕರಿಸಿದ್ದರೆ, ಜೆಡಿಎಸ್ ಕಾರ್ಪೋರೇಟರ್ ಪದ್ಮಾವತಿ ನರಸಿಂಹಮೂರ್ತಿ 138 ಮತಗಳಿಂದ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಇಂದಿನಿಂದ 2018ರ ಸೆಪ್ಟೆಂಬರ್ 27ರವರೆಗೆ ಮೇಯರ್, ಉಪಮೇಯರ್ ಅಧಿಕಾರಾವಧಿ ಇರಲಿದೆ. ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಪ್ರಾದೇಶಿಕ ಆಯುಕ್ತೆ ಜಯಂತಿ ಅವರು ಅಧಿಕೃತವಾಗಿ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next