Advertisement

ಸಂಪಾಜೆ : ಕೊರಗಜ್ಜನ ಪವಾಡ – 12 ದೈವ ಬದಲು ಕಾಣಿಸಿಕೊಂಡಿತು 13 ದೈವ

06:47 PM Mar 27, 2021 | Team Udayavani |

ಅರಂತೋಡು: ತುಳುನಾಡಿನಲ್ಲಿ ಅಲ್ಲಲ್ಲಿ ಆಗಾಗ ಒಂದಲ್ಲ ಒಂದು ರೀತಿಯಲ್ಲಿ ಕೊರಗಜ್ಜನ ಪವಾಡಗಳು ನಡೆಯುತ್ತಿರುತ್ತದೆ. ಇಂಥದೊಂದು ಪವಾಡ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ದೊಡ್ಡಡ್ಕ ರಾಜರಾಂಪುರದಲ್ಲಿನ ಕೊರಗಜ್ಜನ ಸಾನಿಧ್ಯದಲ್ಲಿ ನಡೆದಿದೆ.

Advertisement

ಮಾ.20 ರಂದು ರಾತ್ರಿ ದೊಡ್ಡಡ್ಕ ರಾಜರಾಂಪುರ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ  ಆದಿಬ್ರಹ್ಮ ಮೊಗೇರ್ಕಳ 40 ನೇ ವರ್ಷದ ನೇಮೋತ್ಸವ ಮತ್ತು ಮಂತ್ರಮೂರ್ತಿ ಗುಳಿಗ  ದೈವದ ಕೋಲ ನಡೆಯಿತು. ಮಾ.21 ರಂದು ಬೆಳಿಗ್ಗೆ ಕೊರಗಜ್ಜನ ನೇಮೋತ್ಸವ ನಡೆಯಿತು. ಇಲ್ಲಿ 11 ಹರಕೆ ಕೋಲ ಹಾಗೂ ಒಂದು ಕಾಲಾವಧಿ ಕೋಲ ಇತ್ತು. ಅದರಂತೆ 12 ಅಗೇಲಿಗೆ ತಯಾರಿ ಮಾಡಿ 12 ದೈವದ ತಲೆಗೆ  ಇಡುವ ಮಡಪ್ಪಾಳೆ ಹಾಗೂ  ಇತರ ವಸ್ತುಗಳನ್ನು ಜೋಡನೆ ಮಾಡಲಾಗಿತ್ತು. ಹೀಗೆ 12 ಜನ ದೈವ ಕಟ್ಟಿದ್ದರೂ ನೇಮೋತ್ಸವ ಹೊರಟು ದೈವಗಳ ನರ್ತನ ಪ್ರಾರಂಭವಾಯಿತು. ಸ್ವಲ್ಪ ಹೊತ್ತಲ್ಲಿ 12 ಕೊರಗಜ್ಜ ದೈವಗಳ ಬದಲು ಕೆಲವರಿಗೆ 13 ಕಾಣಿಸಿಕೊಂಡವು. ಈ  ದೈವದ ತಲೆಗೆ  ಮಡಪ್ಪಾಳೆ (ಗೋಂಪಾರು) ಇರಲಿಲ್ಲ. ಮಡಪ್ಪಾಳೆಯನ್ನು ದೈವ ಕೇಳಿದ್ದರಿಂದ ಮತ್ತೆ ಮಡಪ್ಪಾಳೆ ತಯಾರಿ ಮಾಡಿ ಕೊಡಲಾಯಿತು. ಹೀಗೆ ಮಡಪ್ಪಾಳೆ ತಯಾರಿ ಮಾಡಿ ಕೊಟ್ಟ ನಂತರ ಆ ಕೊರಗಜ್ಜ ಕುಣಿದಿದೆ.

ಕೊನೆಗೆ ಅಗೆಲು ಬಳಸುವ ಸಂದರ್ಭದಲ್ಲಿ 13 ದೈವಗಳ ಬದಲು 12 ದೈವಳು ಮಾತ್ರ ಉಳಿದು  ಆ  ದೈವ ಕಾಣದಂತೆ ಮಾಯವಾಗಿದೆ ಎನ್ನಲಾಗಿದೆ. ಸಂದರ್ಭದಲ್ಲಿ ಭಕ್ತರು ಮತ್ತು ಸ್ಥಳೀಯ ಸಮಿತಿಯವರ ಮಧ್ಯೆ ದೈವಗಳ  ಸಂಖ್ಯೆಗಳ ಬಗ್ಗೆ ಚರ್ಚೆಯಾಗಿದೆ. ಕೆಲವರಿಗೆ 12 ದೈವಗಳು ಮಾತ್ರ ಕಾಣಿಸಿಕೊಂಡಿವೆ. ಇನ್ನೂ ಕೆಲವರಿಗೆ 13 ದೈವಗಳು ಕಾಣಿಸಿಕೊಂಡಿವೆ. ಇದು ಭಕ್ತರಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು ಇನ್ನಷ್ಟು ಭಯ ಭಕ್ತಿಯನ್ನು ಹೆಚ್ಚಿಸಿವೆ. ದೈವದ ಪವಾಡದಿಂದ ಭಯ ಭಕ್ತಿಯಿಂದ  ದೈವಸ್ಥಾನದ ಸಮಿತಿಯವರು ಜ್ಯೋತಿಸರ ಮೊರೆ ಹೋಗಿದ್ದು ಪ್ರಶ್ನೆ ಚಿಂತನೆ ನಡೆಸಿದ್ದಾಗ ಸಾನಿಧ್ಯದಲ್ಲಿ ಕಾರಣಿಕದ ಶಕ್ತಿ ಕಂಡು ಬರುತ್ತಿದ್ದು ಸ್ಥಳದಲ್ಲಿಯೇ ಸೂಕ್ಷ್ಮ  ಪ್ರಶ್ನೆ ಚಿಂತನೆ ನಡೆಸಲು ಸೂಚಿಸಿದ್ದಾರೆ. ಈ ಕಾರಣದಿಂದ   ಕಮಿಟಿಯವರು ಪ್ರಶ್ನೆ ಚಿಂತನೆಗೆ ದಿನ ನಿಗದಿಗೊಳಿಸಿದ್ದಾರೆ.

ಇಲ್ಲಿಯ  ಕೊರಗಜ್ಜನ ಕ್ಷೇತ್ರಕ್ಕೆ ಸುಮಾರು 40 ವರ್ಷಗಳ ಇತಿಹಾಸವಿದ್ದು ಇದು ಕಾರಣಿಕ ಕ್ಷೇತ್ರವಾಗಿದೆ. ಸುಳ್ಯ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 15 ಕಿ.ಮೀ ಸಾಗಿದರೆ ರಾಜರಾಮ್‌ಪುರ ಕೊರಗಜ್ಜ ಕ್ಷೇತ್ರ ಬಲಭಾಗದಲ್ಲಿ ಕಾಣಸಿಗುತ್ತದೆ. ಇಲ್ಲಿಗೆ ವಿಶೇಷ ನೇಮೋತ್ಸವ ಇತರೆ ವಿಶೇಷ ಪರ್ವ ದಿನಗಳಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೈವದ ದರ್ಶನ ಪಡೆದುಕೊಂಡು ಹೋಗುತ್ತಾರೆ. ಈ ಕಾರಣಿಕ ಕೊರಗಜ್ಜನ ಪವಾಡವನ್ನು ಸಾವಿರಾರು ಜನರಲ್ಲಿ ಭಯಭಕ್ತಿ ಮೂಡಿಸಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ  ದೈವದ ನೇಮೋತ್ಸವದ ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next