Advertisement

ಬಿಟಿಆರ್‌ ಶೀಲ್ಡ್‌ ಕ್ರಿಕೆಟ್‌: ಮತ್ತೆ ಅಬ್ಬರಿಸಿದ ಸಮಿತ್‌ ದ್ರಾವಿಡ್‌

08:48 AM Feb 22, 2020 | keerthan |

ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯುತ್ತಿರುವ 14 ವಯೋಮಿತಿಯೊಳಗಿನ ಬಿಟಿಆರ್‌ ಶೀಲ್ಡ್‌ ಶಾಲಾ ಕ್ರಿಕೆಟ್‌ ಕೂಟದಲ್ಲಿ ಕ್ರಿಕೆಟ್‌ ದಂತಕಥೆ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸಮಿತ್‌ ದ್ರಾವಿಡ್‌ (ಅಜೇಯ 78 ರನ್‌) ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲೆ 10 ವಿಕೆಟ್‌ ಗೆಲುವು ಸಾಧಿಸಿದೆ.

Advertisement

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀ ಅರೊಬಿಂದೊ ಮೆಮೋರಿಯಲ್‌ ಸ್ಕೂಲ್‌ ತಂಡ 44.3 ಓವರ್‌ಗೆ 153 ರನ್‌ಗಳಿಸಿ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲಾ ತಂಡ ಸಮಿತ್‌ ಅರ್ಧಶತಕ ಹಾಗೂ ಆಕಾಶ್‌ ಶೆಟ್ಟಿ (ಅಜೇಯ 60 ರನ್‌) ನೆರವಿನಿಂದ 19.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ154 ರನ್‌ಗಳಿಸಿ ಸುಲಭ ಗೆಲುವು ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next