Advertisement

ಸಲಿಂಗ ಸೆಕ್ಸ್‌: ವಿಚಾರಣೆ 

12:30 PM Jul 11, 2018 | Harsha Rao |

ಹೊಸದಿಲ್ಲಿ: ಸಲಿಂಗಿಗಳು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಆರಂಭವಾಗಿದೆ. ಸಮಾನ ಲಿಂಗಿಗಳ ನಡುವಿನ ಸಮ್ಮತಿಯ ಸೆಕ್ಸ್‌ ಕೂಡ ಅಪರಾಧ ಎಂದು ಹೇಳುವ ಐಪಿಸಿ ಸೆಕ್ಷನ್‌ 377ರ ಸಿಂಧುತ್ವದ ಬಗ್ಗೆಯಷ್ಟೇ ವಿಚಾರಣೆ ನಡೆಸುವುದಾಗಿ ಹೇಳಿರುವ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ, ಲೈಂಗಿಕ ಅಲ್ಪಸಂಖ್ಯಾಕ ಸಮುದಾಯದ ವಿವಾಹ ಅಥವಾ ಸಹ ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲೂ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next