Advertisement

ಸ್ಲೊವಾಕಿಯಾದಲ್ಲಿ ಚಿನ್ನ, ಕಂಚು ಗೆದ್ದ ಕುಂದಾಪುರದ ಸಮರ್ಥ್

01:30 PM Jun 07, 2017 | Harsha Rao |

ಉಡುಪಿ: ವಿಭಿನ್ನ ಸಾಮರ್ಥ್ಯದ ಚೆಸ್‌ ಪಟು, ಕುಂದಾಪುರದ ಬಸೂÅರು ಮೂಲದ ಸಮರ್ಥ್ ಜೆ. ರಾವ್‌ ಸ್ಲೊವಾಕಿಯಾದಲ್ಲಿ ನಡೆದ ವಿಶ್ವ ಮಟ್ಟದ ದೈಹಿಕ ಅಸಮರ್ಥರ ಟೂರ್ನಿಯ ಜೂನಿಯರ್‌ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಮುಕ್ತ ಚೆಸ್‌ನ ಸಾಮಾನ್ಯ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಳ್ಳುವ ಮೂಲಕ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಮತ್ತೂಮ್ಮೆ ದಿಗ್ವಿಜಯ ಸಾಧಿಸಿದ್ದಾರೆ.

Advertisement

ಮೇ 27 ರಿಂದ ಜೂ. 5ರ ವರೆಗೆ ಸ್ಲೊವಾ ಕಿಯಾದಲ್ಲಿ ನಡೆದ ವಿಶ್ವಮಟ್ಟದ ಟೂರ್ನಿ ಯಲ್ಲಿ ಸಮರ್ಥ್ ಎರಡು ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ವೈಯಕ್ತಿಕ 131 ಅಂಕಗಳನ್ನು ತನ್ನ ಬುಟ್ಟಿ ಹಾಕಿಕೊಂಡಿದ್ದಾರೆ. ಈ ಹಿಂದೆಯೂ 2015ರಲ್ಲಿ  ಸ್ಲೊವಾಕಿಯಾದಲ್ಲಿ ನಡೆದ ವಿಶ್ವಮಟ್ಟದ ದೈಹಿಕ ಅಸಮರ್ಥರ ಟೂರ್ನಿಯಲ್ಲಿ ಕಂಚಿನ ಪದಕ, ಕಳೆದ ವರ್ಷ ಸರ್ಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಅಸಮರ್ಥರ ಚೆಸ್‌ ಕೂಟದಲ್ಲಿ ¸ಕಂಚಿನ ಪದಕ ಗೆದ್ದಿದ್ದ ಅವರು ಈ ಬಾರಿ ಮತ್ತೆ ಪದಕ ಗೆದ್ದು ಹ್ಯಾಟ್ರಿಕ್‌ ಸಾಧಿಸಿದರು.

ಈ ಟೂರ್ನಿಯಲ್ಲಿ ಒಟ್ಟು 9 ಸುತ್ತು ಗಳಿದ್ದು, ಸಮರ್ಥ್ 2 ಜಯ, 2 ಡ್ರಾ , 3 ಸೋಲಿನೊಂದಿಗೆ ಒಟ್ಟು 4 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಕೊನೆಯ ದಿನದವರೆಗೂ ಅಗ್ರಸ್ಥಾನದಲ್ಲಿದ್ದ ಸಮರ್ಥ್ ಕೊನೆಯ 2 ಪಂದ್ಯ ಸೋಲುವುದರೊಂದಿಗೆ ಮತ್ತೂಂದು ಚಿನ್ನದಿಂದ ವಂಚಿತರಾದರು.

ಹುಟ್ಟಿನಿಂದಲೇ ಸೆರೆಬ್ರಲ್‌ ಪಾಲ್ಸಿ ಕಾಯಿಲೆಯ ಸಮರ್ಥ್ ಕೈಗಳಿಂದ ಚೆಸ್‌ ಕಾಯಿ ನಡೆಸಲು, ಕಾಲುಗಳಿಂದ ಸರಿಯಾಗಿ ಕುಳಿತು ಕೊಳ್ಳಲು ಆಗದಿದ್ದರೂ, ಅದೊಂದು ಸಮಸ್ಯೆ ಅಲ್ಲ ಎನ್ನುವಂತೆ ಚೆಸ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಈಗಲೂ ಒಂದು ಹೆಜ್ಜೆ ನಡೆಯಲೂ ಆಗದ ಸಮರ್ಥ್ನನ್ನು ತಂದೆ- ತಾಯಿಯೇ ಎತ್ತಿಕೊಂಡು ಓಡಾಡುವ ಮೂಲಕ ನೆರವಾಗುತ್ತಿದ್ದಾರೆ. 

ಬಸೂÅರಿನ ಸಾಧಕ
ಜಗದೀಶ್‌ ರಾವ್‌-ವಿನುತಾ ದಂಪತಿ ಪುತ್ರನಾಗಿರುವ ಸಮರ್ಥ್ ಹುಟ್ಟಿದ್ದು ಕುಂದಾಪುರ ತಾಲೂಕಿನ ಬಸೂÅರಿನಲ್ಲಿ. ತಂದೆ ಜಗದೀಶ್‌ ಹೊನ್ನಾವರದಲ್ಲಿ  ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿರುವುದರಿಂದ ಹೊನ್ನಾವರದ ಎಸ್‌ಡಿಎಂ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿ ವಿನುತಾ ಕಾಲೇಜು ಉಪನ್ಯಾಸಕಿ. ತಂಗಿ ಸಾನ್ವಿ ರಾವ್‌ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next