Advertisement

ಮಣಿಪುರ: ದ್ವೇಷ ರಾಜಕಾರಣದ ಸೇಡಿನ ಕ್ರಿಯೆ

10:38 AM Aug 03, 2023 | Team Udayavani |

ಉಡುಪಿ: ಮಣಿಪುರದಲ್ಲಿ ನಡೆಯುತ್ತಿರುವುದು ಅತ್ಯಾಚಾರವಲ್ಲ ಸರಕಾರ ತನ್ನ ಬೆಂಬಲಿಗರೊಂದಿಗೆ ಸೇರಿಕೊಂಡು ಮಾಡುತ್ತಿರುವ ದ್ವೇಷ ರಾಜಕಾರಣದ ಸೇಡಿನ ಕ್ರಿಯೆ ಎಂದು ಹೋರಾಟಗಾರ ಶಿವಸುಂದರ್‌ ಆಕ್ರೋಶ ಹೊರಹಾಕಿದರು.

Advertisement

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಉಡುಪಿ ಜಿಲ್ಲಾ ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಬುಧವಾರ ಉಡುಪಿ ಮಿಷನ್‌ ಕಾಂಪೌಂಡ್‌ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬೃಹತ್‌ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ದ್ವೇಷ ರಾಜಕಾರಣದ ಬೇರುಗಳು ಹರಡುತ್ತಿವೆ. ಗುಜರಾತ್‌ನಲ್ಲಿ ನರಮೇಧ ಆರಂಭಗೊಂಡು ಮಣಿಪುರಕ್ಕೆ ತಲುಪಿದೆ. 90 ದಿನಗಳಿಂದ ಮಣಿಪುರ ದಲ್ಲಿ ಹಿಂಸಾಚಾರ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮೌನವಾ ಗಿರುವುದು ಆಕಸ್ಮಿಕವಲ್ಲ. ಇದು ದುರು ದ್ದೇಶದಿಂದ ಕೂಡಿರುವ ಮೌನ. ಜನರು ಪ್ರತಿಭಟನೆಯನ್ನು ಆಯುಧ ವನ್ನಾಗಿಸಿ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.

ಕೇಂದ್ರ ಸರಕಾರದ ನೇರ ಹಸ್ತಕ್ಷೇಪ:

ಈಶಾನ್ಯ ಭಾರತದಲ್ಲಿ ಹಿಂದುತ್ವ ಭಾರತದ ಪರಿಕಲ್ಪನೆಯ ಭಾಗವಾಗಿ ನಡೆಯುತ್ತಿರುವ ಹಿಂಸೆಯಾಗಿದೆ. ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದ ಗುಂಪು, ದ್ವೇಷದ ಸರಕಾರ ಮಣಿಪುರದಲ್ಲಿ ಜನರ ಶಾಂತಿಯನ್ನು ಕೆಡಿಸಿದೆ. ಪ್ರಧಾನಿಗಳ ಮೌನದ ಹಿಂದೆ ಸರಕಾರದ ನೇರ ಹಸ್ತಕ್ಷೇಪವಿದೆ. ಬೀರೇಂದ್ರ ಸಿಂಗ್‌ ಸರಕಾರಕ್ಕೆ ಅಧಿಕಾರಕ್ಕೆ ಬಂದ ಬಳಿಕ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದ್ವೇಷವನ್ನು ವ್ಯವಸ್ಥಿತವಾಗಿ ಹುಟ್ಟು ಹಾಕಲಾಯಿತು. ಸಹೋದರರಂತೆ ಬದುಕಿದ್ದ ಮೈತೇಯಿ, ಕೂಕಿ ಸಮುದಾಯದ ನಡುವೆ ದ್ವೇಷವನ್ನು ಮೂಡಿಸಿದ್ದು, ಇಂಪಾಲ ಕಣಿವೆಯಲ್ಲಿ ಸರಕಾರದ ಬೆಂಬಲದೊಂದಿಗೆ ನರಮೇಧ ನಡೆಸಲಾಗಿದೆ ಎಂದರು.

Advertisement

ಸಾಮಾಜಿಕ ಕಾರ್ಯಕರ್ತೆ ಜಾನೆಟ್‌ ಬಬೋìಜಾ, ಚಿಂತಕ ಪ್ರೊ| ಫ‌ಣಿರಾಜ್‌, ದಸಂಸ ಅಂಬೇಡ್ಕರ್‌ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್‌, ಉಡುಪಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೋ, ಉಡುಪಿ ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಅಧ್ಯಕ್ಷ ಯಾಸೀನ್‌ ಮಲ್ಪೆ,  ಕೆಥೋಲಿಕ್‌ ಸಭಾ ನಿಯೋಜಿತ ಅಧ್ಯಕ್ಷ ರೆನಾಲ್ಡ್ ಡಿ’ಅಲ್ಮೇಡಾ, ಭಾರತೀಯ ಕ್ರೈಸ್ತ ಸಂಘ ಟನೆಗಳ ಒಕ್ಕೂಟದ ಜಿಲ್ಲಾ ಗೌರವಾ ಧ್ಯಕ್ಷ ಲೂವಿಸ್‌ ಲೋಬೊ, ಸಮಾನ ಮಾನಸ್ಕರ ವೇದಿಕೆ ಸಂಚಾಲಕ ಪ್ರಶಾಂತ್‌ ಜತ್ತನ್ನ, ಉಡುಪಿ ಧರ್ಮ ಪ್ರಾಂತದ ಪಿಅರ್‌ಒ ಡೆನಿಸ್‌ ಡೇಸಾ ಉಪಸ್ಥಿತರಿದ್ದರು.

ಮಣಿಪುರ ಗಲಭೆಯಲ್ಲಿ ಮೃತಪಟ್ಟ ವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರತಿಭಟನೆ ಸಭೆಗೂ ಪೂರ್ವದಲ್ಲಿ ಉಡುಪಿ ಶೋಕಮಾತಾ  ಇಗರ್ಜಿ ಯಿಂದ ಕ್ರಿಶ್ಚಿಯನ್‌ ಹೈಸ್ಕೂಲು ಮೈದಾನದ ವರೆಗೆ ಬೃಹತ್‌ ಜಾಥಾ ನಡೆಯಿತು. ಸಾವಿರಾರು ಮಂದಿ ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next