Advertisement

ತಾಲಿಬಾನಿಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ SP ಪಕ್ಷದ ಸಂಸದ ಶಫಿಕರ್  

09:25 PM Aug 17, 2021 | Team Udayavani |

ಲಖನೌ : ‌ಅಫ್ಗಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದಿರುವ ತಾಲಿಬಾನ್ ನಡೆಯನ್ನು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಹಿರಿಯ ಸಂಸದ ಶಫಕರ್ ರೆಹಮಾನ್ ಬರ್ಗ್  ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ತಾಲಿಬಾನಿಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ.

Advertisement

ಇಂದು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಂಸದ ಬರ್ಗ್, ʼತಾಲಿಬಾನ್‌ ಹೋರಾಟ ಆ ದೇಶ ಮತ್ತು ಆಫ್ಗನ್ನರ ಸ್ವಾತಂತ್ರ್ಯಕ್ಕಾಗಿʼ ನಡೆಯುತ್ತಿದೆ. ಭಾರತದಲ್ಲಿ ಬ್ರಿಟಿಷರ ಅಡಳಿತ ಇದ್ದಾಗ, ನಮ್ಮ ದೇಶ ಸ್ವಾತಂತ್ಯ್ರಕ್ಕಾಗಿ ಹೋರಾಟ ನಡೆಸಿತ್ತು. ಈಗ ತಾಲಿಬಾನ್‌ ಸಹ ತಮ್ಮ ದೇಶವನ್ನು ಸ್ವತಂತ್ರಗೊಳಿಸಲು ಬಯಸುತ್ತಿದೆ. ಬಲಿಷ್ಠ ಶಕ್ತಿಯಾಗಿರುವ ತಾಲಿಬಾನ್‌, ರಷ್ಯಾ ಮತ್ತು ಅಮೆರಿಕದಂತಹ ಪ್ರಬಲ ದೇಶಗಳು ಅಫ್ಗಾನ್‌ನಲ್ಲಿ ನೆಲೆಗೊಳ್ಳಲು ಅವಕಾಶ ನೀಡಲು ಇಚ್ಚಿಸುತ್ತಿಲ್ಲʼ ಎಂದು ಶ್ಲಾಘಿಸಿದ್ದಾರೆ.

ʼಅಫ್ಗಾನಿಸ್ತಾನ ಸ್ವಾಂತಂತ್ರ್ಯವು ಆ ದೇಶದ ಆಂತರಿಕ ವಿಚಾರ. ಅಮೆರಿಕ ಏಕೆ ಅಫ್ಗಾನಿಸ್ತಾನದಲ್ಲಿ ಆಡಳಿತ ನಡೆಸಬೇಕು? ತಾಲಿಬಾನ್‌ ಅಲ್ಲಿ ಒಂದು ಶಕ್ತಿಯಾಗಿದೆ ಮತ್ತು ಆಫ್ಗನ್ನರು ಅದರ ನೇತೃತ್ವದಲ್ಲಿ ಸ್ವತಂತ್ರರಾಗಲು ಬಯಸುತ್ತಿದ್ದಾರೆʼ ಎಂದಿದ್ದಾರೆ.

ಬರ್ಗ್ ಹೇಳಿಕೆಗೆ ವ್ಯಾಪಕ ಖಂಡನೆ :

ಇನ್ನು ತಾಲಿಬಾನ್ ಉಗ್ರರನ್ನು ಬೆಂಬಲಿಸಿರುವ ಬರ್ಗ್ ಅವರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ‘ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಎಸ್‌ಪಿ ನಾಯಕರ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೆ.ಪಿ.ಮೌರ್ಯ ಟೀಕಿಸಿದ್ದಾರೆ.

Advertisement

ಸಮಾಜವಾದಿ ಪಕ್ಷದವರು ಏನು ಬೇಕಾದರೂ ಹೇಳುತ್ತಾರೆ. ತಾಲಿಬಾನ್‌ ಬಗ್ಗೆ ಎಸ್‌ಪಿ ಇಂತಹ ಹೇಳಿಕೆ ನೀಡಬಹುದಾದರೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಎಸ್‌ಪಿ ನಾಯಕರ ನಡುವೆ ವ್ಯತ್ಯಾಸವೇನಿದೆ?ʼ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next