Advertisement

ಪ್ರವಾದಿ ವಚನಗಳ ಅನುಸರಣೆಯಿಂದ ಮೋಕ್ಷ: ಹುಸೈನ್‌ ಸಲಫಿ

03:35 PM Mar 13, 2018 | Harsha Rao |

ಬೆಳ್ತಂಗಡಿ: ಅಲ್ಲಾಹು ಪ್ರವಾದಿ ಮಹಮದ್‌ ಅವರ ಮೂಲಕ ಅವತೀರ್ಣಗೊಳಿಸಿದ ಕುರಾನ್‌ ಮತ್ತು ಪ್ರವಾದಿ ಮಹಮದ್‌ ಅವರ ವಚನಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ಮಾನವಕುಲ ಇಹ-ಪರ ಮೋಕ್ಷ ಪಡೆಯಲು ಸಾಧ್ಯ ಎಂದು ಶಾರ್ಜಾದ ಮೌಲವಿ ಹುಸೈನ್‌ ಸಲಫಿ ಹೇಳಿದರು.

Advertisement

ಅವರು ಉಜಿರೆ ಎಸ್‌ಡಿಎಂ ಜನಾರ್ದನ ಶಾಲೆ ಮೈದಾನದಲ್ಲಿ ಹಮ್ಮಿಕೊಂಡಿರುವ ಇಸ್ಲಾಂ ಕುರಿತ ಮಿರಾಕಲ್‌ ವಸ್ತುಪ್ರದರ್ಶನ ಹಾಗೂ ಸಲಫಿ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು.

ಶಮೀರ್‌ ಮದೀನಿ ಅವರು ಮಾತನಾಡಿ, ಭಾರತದಲ್ಲಿ ಮುಸ್ಲಿಮರು ಸೌಹಾರ್ದದಿಂದ ಜೀವಿಸಬೇಕು ಎಂದು ಹೇಳಿದರು. ಮೌಲವಿ ಮುಜಾಹಿದ್‌ ಬಾಲುಶ್ಯೆàರಿ ಅವರು, ಇಸ್ಲಾಮಿನ ಏಕದೇವಾರಾಧನೆ ಸೌಹಾರ್ದಕ್ಕೆ ಪೂರಕವಾಗಿದೆ ಎಂದರು.
ಮೊಬೈಲ್‌ ಆ್ಯಪ್‌ ಬಿಡುಗಡೆ: ಕರ್ನಾಟಕ ಸಲಫಿ ಅಸೋಸಿಯೇಶನ್‌ನ 2ನೇ ಆವೃತ್ತಿಯ ಅಪ್‌ಗೆÅàಡೆಡ್‌ ಆ್ಯಪನ್ನು ಗಣ್ಯರು ಬಿಡುಗಡೆ ಮಾಡಿದರು.

ಕಾರ್ಯಕ್ರಮವನ್ನು ಮೌಲವಿ ಕುಂಞಿ ಮಹಮದ್‌ ಮದನಿ ಪರವೂರ್‌ ಉದ್ಘಾಟಿಸಿದರು. ದಿ ಮಿರಾಕಲ್‌ ವಸ್ತುಪ್ರದರ್ಶನದ ಅಧ್ಯಕ್ಷ ಅಬ್ದುಲ್‌ ಅಝೀಝ್ ಸುನ್ನತ್‌ಕೆರೆ ಅಧ್ಯಕ್ಷತೆ ವಹಿಸಿದ್ದರು. ಮೌಲವಿ ಮೂಸಾ ಸ್ವಲಾಹಿ, ಅಬ್ದುಲ್‌ ಮಲಿಕ್‌ ಸಲಫಿ, ತಲ್‌ಹತ್‌ ಸ್ವಲಾಹಿ, ಆರ್ಶದ್‌ ತಾನೂರ್‌, ಫ‌ದ್‌ಲುಲ್‌ ಹಕ್‌ ಉಮರಿ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು.

ಕಬೀರ್‌ ಕಾಜೂರು, ಅಬ್ದುಲ್‌ ರಹಿಮಾನ್‌ ಉಳ್ಳಾಲ, ಯಹ್ಯಾ ಕಲ್ಲಡ್ಕ, ಉಳ್ಳಾಲ ಅಲ್‌ ಬಯಾನ್‌ ಅರೇಬಿಕ್‌ ಕಾಲೇಜು ಪ್ರಾಂಶುಪಾಲ ಡಾ| ಹಫೀಝ್ ಸ್ವಲಾಹಿ, ಇಜಾಝ್ಸ್ವಲಾಹಿ, ಶಾಮಿರ್‌, ಕೆಎಸ್‌ಎ ಅಧ್ಯಕ್ಷ ಆಬ್ದುಲ್‌ ರಶೀದ್‌ ಎಂಜಿನಿಯರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next