Advertisement
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ70 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ 3 ಪ್ರತ್ಯೇಕ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
Related Articles
Advertisement
39 ಕೆರೆಗಳಿಗೆ ಎತ್ತಿನಹೊಳೆ ನೀರುಬಯಲುಸೀಮೆ ಪ್ರದೇಶದ ರೈತರ ಕನಸಿನ ಕೂಸಾದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಇನ್ನೆರಡು ವರ್ಷದಲ್ಲಿ ಪೂರ್ಣ ಆಗಲಿದೆ. ಕೊರಟಗೆರೆ ಕ್ಷೇತ್ರದ 39 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಲು ಈಗಾಗಲೇ ರೂಪುರೇಷು ಸಿದ್ದಗೊಂಡಿದೆ. ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದ್ದೇನೆ. ಕೊರಟಗೆರೆಯ ಇನ್ನೂಳಿದ ಕೆರೆಗಳಿಗೆ ನೀರು ಹರಿಸುವ ಚಿಂತನೆಯು ನಡೆಯುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು. ಯಶಸ್ಸು ಕಂಡ ಜನ ಸಂಪರ್ಕ ಸಭೆ
ತೋವಿನಕೆರೆಯಲ್ಲಿ ಗ್ರಾಮದಲ್ಲಿ ಸೋಮವಾರ ನಡೆದ ಹೋಬಳಿಮಟ್ಟದ ಜನಸಂಪರ್ಕ ಸಭೆಯು ಯಶಸ್ವಿಯಾಗಿ ನಡೆಯಿತು. ತೋವಿನಕೆರೆ, ಕುರಂಕೋಟೆ, ಬುಕ್ಕಾಪಟ್ಟಣ ಮತ್ತು ಬೂದಗವಿ ಗ್ರಾಪಂ ನಿಂದ ಆಗಮಿಸಿದ್ದ ನೂರಾರು ಜನರು ತಮ್ಮ ಸಮಸ್ಯೆಯ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದರು. ಹಲವಾರು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿ ಇನ್ನೂಳಿದ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು. ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆ
ವಿಶ್ವಕ್ಕೆ ಅತಿಹೆಚ್ಚು ಮಾನವ ಸಂಪನ್ಮೂಲ ಪೂರೈಕೆ ಮಾಡುವ ದೇಶ ನಮ್ಮ ಭಾರತ. ತೋವಿನಕೆರೆಯಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಸರಕಾರಿ ಶಾಲೆಯ ಕೊಠಡಿ ನಿರ್ಮಾಣ ಆಗಿವೆ. ವಿದ್ಯೆ ಕಲಿಯುವ ಶಾಲೆಗಳು ದೇವಾಲಯವಿದ್ದಂತೆ. ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆ ಮತ್ತು ದೇಶದ ಅಭಿವೃದ್ದಿ ಸಾಧ್ಯ ಎಂದು ಸಿದ್ದರಬೆಟ್ಟ ಶ್ರೀಮಠ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಹೇಳಿದರು.