ಹೊಸದಿಲ್ಲಿ/ಪುಲ್ವಾಮಾ: ಪಾಕಿಸ್ಥಾನದ ಘಾತಕ ಉಗ್ರರ ಸಂಚಿಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಗೌರವ ಯುತವಾಗಿ ದೇಶಾದ್ಯಂತ ರವಿವಾರ ಸ್ಮರಿಸಲಾ ಯಿತು. ಚೆನ್ನೈನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ಪ್ರತಿಯೊಬ್ಬ ಭಾರತೀಯನೂ ಮರೆಯಲಾಗದ ದಿನ ಇದು. ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸುವೆ. ಅವರ ಶೌರ್ಯ, ತ್ಯಾಗದ ಬಗ್ಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.
ಪ್ರಾಣಾರ್ಪಣೆ ಮಾಡಿದ ಯೋಧರ ಕುಟುಂಬ ಸದಸ್ಯರ ಜತೆಗೆ ರಾಷ್ಟ್ರ ಯಾವತ್ತೂ ನಿಲ್ಲಲಿದೆ. ಅವರ ತ್ಯಾಗವನ್ನು ಯಾವತ್ತೂ ಸ್ಮರಿಸುತ್ತೇವೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. “2019ರಲ್ಲಿ ಪುಲ್ವಾಮಾದಲ್ಲಿ ಉಗ್ರರ ವಂಚನೆಗೆ ಬಲಿ ಯಾದ ಯೋಧರಿಗೆ ನಮಿಸುವೆ. ಅವರ ಅಪ್ರ ತಿಮ ತ್ಯಾಗವನ್ನು ದೇಶ ಯಾವತ್ತೂ ಮರೆಯದು’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಾಲಿವುಡ್ ನಟ-ನಟಿಯರಾಗಿರುವ ಅಕ್ಷಯ ಕುಮಾರ್, ಸುನಿಲ್ ಶೆಟ್ಟಿ, ಪಾಯಲ್ ಘೋಷ್, ಗೌತಮ್ ಅಧಿ ಕಾರಿ, ಕಾರ್ತಿಕ್ ಆರ್ಯನ್ ಸಹಿತ ಹಲವರು ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ.
ಮರೆಯಲಾರೆವು: ಜಮ್ಮು ಮತ್ತು ಕಾಶ್ಮೀರದ ಲೇತ್‌ಪೋರದ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು. ಹೊಸದಿಲ್ಲಿಯಲ್ಲಿರುವ ಸಿಆರ್‌ಪಿಎಫ್ ಕೇಂದ್ರ ಕಚೇರಿಯಲ್ಲಿ ವರ್ಚುವಲ್ ಮೂಲಕ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉಪ ಮಹಾನಿರ್ದೇಶಕ ಮೋಸೆಸ್ ದಿನಕರನ್ “ಈ ಘಟನೆಯನ್ನು ಮರೆಯಲಾರೆವು; ಕ್ಷಮಿಸಲಾರೆವು’ ಎಂದು ಹೇಳಿದ್ದಾರೆ.
ಆ ಕರಾಳ ದಿನ… :
2019ರ ಫೆ.14ರಂದು ಸಿಆರ್‌ಪಿಎಫ್ನ ಯೋಧರು ಶ್ರೀನಗರಕ್ಕೆ ಬರುತ್ತಿರುವಾಗ ಪುಲ್ವಾಮಾಜಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರರು 300 ಕೆಜಿ ಸ್ಫೋಟಕ ಇರಿಸಿ ಬಸ್‌ಗಳನ್ನು ಸ್ಫೋಟಿಸಿದ್ದರು. ಇದರಿಂದಾಗಿ 40 ಯೋಧರು ಪ್ರಾಣಾರ್ಪಣೆ ಮಾಡಿದ್ದರು. ಅದಕ್ಕೆ ಪ್ರತೀಕಾರವಾಗಿ 2019ರ ಫೆ.26ರಂದು ಪಾಕಿಸ್ಥಾನದ ಬಾಲಕೋಟ್‌ನಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಲಾಗಿತ್ತು.