Advertisement
ದೇಶದ ಯಾವುದೇ ಮೂಲೆಯಲ್ಲಿ ಉಗ್ರರ ನಂಟು ಕಂಡುಬಂದ ಕೂಡಲೆ ಯಾವುದೇ ಮುಲಾಜು ಇಲ್ಲದೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೊಗಿದರು.
ಭಾಲ್ಕಿ: ಕಾಶ್ಮೀರದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ, ಹುತಾತ್ಮ ವೀರಯೋಧರಿಗೆ ಖಟಕಚಿಂಚೋಳಿಯ ಹುಗ್ಗೆಳ್ಳಿ ಹಿರೇಮಠದ ಶ್ರೀ ಬಸವಲಿಂಗ ದೇವರು ಸಂತಾಪ ವ್ಯಕ್ತಪಡಿಸಿದ್ದಾರೆ.
Related Articles
Advertisement
ಭಾಲ್ಕಿ: ಸರಾಫ್ ಸಂಘದಿಂದ ಯೋಧರಿಗೆ ಶ್ರದ್ಧಾಂಜಲಿಭಾಲ್ಕಿ: ಕಾಶ್ಮೀರದ ಅವಂತಿಪೋರಾದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಸರಾಫ್ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಸಂಘದ ಯುವಮುಖಂಡ ಯೋಗೇಶ ಅಷ್ಟೂರೆ ಮಾತನಾಡಿ, ಯೋಧರು ಹುತಾತ್ಮರಾಗಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಸರಾಫ್ ಹಾಗೂ ಸುವರ್ಣಕಾರರ ಸಂಘದವರು ಒಂದು ದಿನ ಅಂಗಡಿ ಮಂಗಟ್ಟುಗಳನ್ನು ಬಂದ್ ಮಾಡಿ, ಯೋಧರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದರು. ಪಾಕಿಸ್ತಾನದ ಉಗ್ರವಾದಿಗಳು ಇಂತಹ ದುಷ್ಕೃತ್ಯ ನಡೆಸಬಾರದಿತ್ತು. ಭಾರತ ಸರ್ಕಾರ ಶೀಘ್ರವೇ ದಾಳಿಕೋರರ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು ಪ್ರಸ್ತುತ ಸನ್ನಿವೇಷದಲ್ಲಿ ಶತ್ರು ರಾಷ್ಟ್ರಗಳನ್ನು ಹದ್ದುಬಸ್ತಿನಲ್ಲಿಡುವುದು ಅನಿವಾರ್ಯ ಎಂದು ಹೇಳಿದರು. ಮುಖಂಡ ಸುಧಾಕರ ದೇಶಪಾಂಡೆ ಮಾತನಾಡಿ, ಇಂತಹ ಹೇಡಿ ಕೃತ್ಯ ಮತ್ತೂಮ್ಮೆ ನಡೆಯದಂತೆ ದೇಶದ ನಾಗರಿಕರು, ಯೋಧರು ಎಚ್ಚರಗೊಳ್ಳುವುದು ಅಗತ್ಯ ಎಂದರು. ದೇಣಿಗೆ: ಹುತಾತ್ಮ ಯೋಧರ ಕುಟುಂಬದವರ ನೆರವಿಗಾಗಿ ಆರ್ಮಿ ವೆಲ್ಫೆàರ್ ವಿಡೋ ಫಂಡ್‌ಗೆ ಸರಾಫ್ ಹಾಗೂ ಸುವರ್ಣಕಾರರ ಸಂಘದವರು 10,000 ರೂ. ದೇಣಿಗೆ ನೀಡಿದರು. ಪ್ರಭೂ ಧೂಪೆ, ಆಕಾಶ ರಿಕ್ಕೆ, ಸಿರಿಷ ನಾಯಕ, ಹಣಮಂತರಾವ್ ಪವಾರ, ಕಂಟೆಪ್ಪ ಶೀಲವಂತ, ಸಂತೋಷ
ದೇವಪ್ಪ, ಮಹಾದೇವ ಡೊಣಗಾಪುರೆ, ಮಹಾದೇವ ಮದಾರೆ, ಜಾಧವ, ಅರ್ಜುನ, ಪಾಪಯ್ಯ, ವಿಠಲರಾವ್, ಅನೀಲ ಪಾಂಚಾಳ ಇದ್ದರು. ಹುಮನಾಬಾದ ವಕೀಲರ ಖಂಡನೆ
ಹುಮನಾಬಾದ: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಯೋಧರ ನಡೆಸಿರುವ ದಾಳಿ ಹಿನ್ನೆಲೆಯಲ್ಲಿ ತಾಲೂಕು ವಕೀಲರ ಸಂಘದಿಂದ ಶುಕ್ರವಾರ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು. ಯೋಧರ ಮರಣಕ್ಕೆ ಕಾರಣರಾದ ವ್ಯಕ್ತಿಗಳು ಯಾರಾದರೂ ಸರಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು. ಹುತಾತ್ಮ ಯೋಧರ ಅವಲಂಬಿತ ಕುಟುಂಬ ಸದಸ್ಯರಿಗೆ ಅಗತ್ಯ ಆರ್ಥಿಕ ನೆರವು ನೀಡುವುದರ ಜತೆಗೆ ಕುಟುಂಬದ ಪ್ರಮುಖ ವ್ಯಕ್ತಿಗೆ ಸರ್ಕಾರಿ ಹುದ್ದೆ ನೀಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಶಂಭುಲಿಂಗ ಧುಮದ್ಮನಸೂರ ಒತ್ತಾಯಿಸಿದರು. ಕೃತ್ಯಕ್ಕೆ ಕಾರಣರಾದವನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಸಂಘದ ಉಪಾಧ್ಯಕ್ಷ ಈಶ್ವರ ಚೀನಕೇರಾ, ಕಾರ್ಯದರ್ಶಿ ವಿಜಯಕುಮಾರ ಜೋತಗೊಂಡ, ವಾಜೀದ್ ಖಮರ್, ಉದಯಕುಮಾರ ಶೀಲವಂತ, ಡಿ.ಮಹಾದೇವಪ್ಪ ರಾಂಪೂರೆ, ಭೀಮರಾವ ಓತಿಕರ್, ಕಿರಣ ಹಣುಮಶೆಟ್ಟಿ, ಗೋಖಲೆ, ಮಹ್ಮದಲಿ, ಮಂಜುನಾಥ, ಹರೀಶ ಅಗಡಿ,
ವಿನೋದ ರಾಜೋಳೆ, ಸುನೀಲ ಕುಲಕರ್ಣಿ, ಕಲ್ಯಾಣರಾವ್ ಪರಶಟ್ಟಿ ಇನ್ನಿತರರು ಇದ್ದರು. ಬಸವಕಲ್ಯಾಣ: ಎಬಿವಿಪಿ ಶ್ರದ್ಧಾಂಜಲಿ
ಬಸವಕಲ್ಯಾಣ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದಲ್ಲಿ 43 ಜನ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಅಖೀಲ ಭಾರತೀಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಹರಳಯ್ನಾ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಹುತಾತ್ಮರ ಭಾವಚಿತ್ರದೊಂದಿಗೆ ಆಗಮಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲ್ಲಿ ಸಲ್ಲಿಸಿದರು. ಕೇಂದ್ರ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಭಾರತೀಯ ಸೈನ್ಯಕ್ಕೆ ಸೂಕ್ತ ನೆರವು ನೀಡುವುದರ ಮೂಲಕ ಹಿಂದೆ ನಡೆಸಿದ ಸರ್ಜಿಕಲ್ ದಾಳಿ ರೀತಿಯಲ್ಲಿ ಮತ್ತೂಮ್ಮೆ ಸರ್ಜಿಕಲ್ ದಾಳಿ ನಡೆಸುವ ಮೂಲಕ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಬೇಕು. ಮತ್ತು ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಬೇಕು ಎಂದು ಈ ವೇಳೆ ಒತ್ತಾಯಿಸಲಾಯಿತು. ಎಬಿವಿಪಿ ಜಿಲ್ಲಾ ಎಸ್‌ಎಫ್‌ಡಿ ಲೋಕೇಶ ಮೋಳಕೇರೆ, ನವನಾಥ ಮೇತ್ರೆ, ಅಂಬರೀಶ ಸ್ವಾಮಿ, ಅಭಿಷೇಕ ಬಾಳೆ, ಸಚಿನ್ ಮೇತ್ರೆ, ಅಂಬದಾಸರೆಡ್ಡಿ ಸೇರಿದಂತೆ ಮತ್ತಿರರು ಇದ್ದರು. ವ್ಯಾಪಾರಸ್ಥರ ಮೌನ ಮೆರವಣಿಗೆ
ಬಸವಕಲ್ಯಾಣ: ಜಮ್ಮು ಕಾಶ್ಮೀರದಲ್ಲಿ ಸೈನಿಕರ ಮೇಲೆ ನಡೆಸಿದ ಹೇಯ ಕೃತ್ಯವನ್ನು ಖಂಡಿಸಿ ವ್ಯಾಪಾರಸ್ಥರು ನಗರದ ಬಸವೇಶ್ವರ ವೃತ್ತದಿಂದ ಹಳೆ ತಹಶೀಲ್ ಕಚೇರಿ ವರೆಗೆ ಮೌನ ಮೆರವಣಿಗೆ ಮೂಲಕಲ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಸಲ್ಲಿಸಿದರು. ಈ ವೇಳೆ ಉಮೇಶ ಶಿಲವಂತ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಹುತಾತ್ಮ ವೀರ ಸೈನಿಕರ ಜೀವನಕ್ಕೆ ಶಾಂತಿ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡ ವಿಜಯಕುಮಾರ ಮಂಠಾಳೆ, ರವಿ ಚಂದನಕೇರೆ, ಚಂದ್ರಕಾಂತ ಚಿಲ್ಲಾಬಟ್ಟೆ, ಬಸವರಾಜ ಪಾರಾ, ಸುರೇಶ ಸ್ವಾಮಿ, ಲೋಕೇಶ ಮೋಳಕೇರೆ, ರಾಜು ಮಂಠಾಳೆ, ಬಸವರಾಜ, ಚನ್ನಪ್ಪಾ ರಾಜಾಪೂರ, ಶ್ರೀನಿವಾಸ ಚಾರಿ, ಶಂಕರ ಪಾಂಚಾಳ, ಜಗದೀಶ ಅಂಬುಲಗೆ ಮತ್ತಿತರರು ಇದ್ದರು ಬಸವಕಲ್ಯಾಣ: ಎಬಿವಿಪಿ ಶ್ರದ್ಧಾಂಜಲಿ
ಬಸವಕಲ್ಯಾಣ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದಲ್ಲಿ 43 ಜನ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಅಖೀಲ ಭಾರತೀಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಹರಳಯ್ನಾ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಹುತಾತ್ಮರ ಭಾವಚಿತ್ರದೊಂದಿಗೆ ಆಗಮಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲ್ಲಿ ಸಲ್ಲಿಸಿದರು. ಕೇಂದ್ರ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಭಾರತೀಯ ಸೈನ್ಯಕ್ಕೆ ಸೂಕ್ತ ನೆರವು ನೀಡುವುದರ ಮೂಲಕ ಹಿಂದೆ ನಡೆಸಿದ ಸರ್ಜಿಕಲ್ ದಾಳಿ ರೀತಿಯಲ್ಲಿ ಮತ್ತೂಮ್ಮೆ ಸರ್ಜಿಕಲ್ ದಾಳಿ ನಡೆಸುವ ಮೂಲಕ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಬೇಕು. ಮತ್ತು ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಬೇಕು ಎಂದು ಈ ವೇಳೆ ಒತ್ತಾಯಿಸಲಾಯಿತು. ಎಬಿವಿಪಿ ಜಿಲ್ಲಾ ಎಸ್‌ಎಫ್‌ಡಿ ಲೋಕೇಶ ಮೋಳಕೇರೆ, ನವನಾಥ ಮೇತ್ರೆ, ಅಂಬರೀಶ ಸ್ವಾಮಿ, ಅಭಿಷೇಕ ಬಾಳೆ, ಸಚಿನ್ ಮೇತ್ರೆ, ಅಂಬದಾಸರೆಡ್ಡಿ ಸೇರಿದಂತೆ ಮತ್ತಿರರು ಇದ್ದರು.