Advertisement
ಇದೇ ಜೈಲಿನಲ್ಲಿ, ಇತ್ತೀಚೆಗೆ, ಕೂಲಿ ಕಾರ್ಮಿಕನೊಬ್ಬನನ್ನು ಅಮಾನುಷವಾಗಿ ಕೊಂದು, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಶಂಭು ಲಾಲ್ ರೇಗರ್ ಹಾಗೂ ಭನ್ವಂತರಿ ದೇವಿ ಕೊಲೆ ಆರೋಪ ಹೊತ್ತಿರುವ ಮಾಲ್ಕನ್ ಸಿಂಗ್ ವೈಷ್ಣೋಯಿ ಅವರೂ ಇದ್ದಾರೆ. ಬಿಶ್ನೋಯ್ ಸಮುದಾಯದ ಪಾತಕಿ, ಲಾರೆನ್ಸ್ ಬಿಶ್ನೋಯ್, ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ. ಆತನೂ ಇದೇ ಜೈಲಿನಲ್ಲಿದ್ದಾನೆ. ಹಾಗಾಗಿ, ಜೈಲಿಗೆ ಹಾಗೂ ಸಲ್ಮಾನ್ ಖಾನ್ ಇರುವ ಬರಾಕ್‌ಗೆ ಭಾರೀ ಬಿಗಿಭದ್ರತೆ ಹಾಕಲಾಗಿದೆ.
Related Articles
15ನೇ ಶತಮಾನದಲ್ಲಿ, ರಾಜಸ್ಥಾನದ ಧಾರ್ಮಿಕ ಗುರುಗಳಾಗಿದ್ದ ಗುರು ಜಂಬೇಶ್ವರ್ ಅವರ ಅನುಯಾಯಿಗಳೇ ಬಿಶ್ನೋಯ್ ಜಾತಿಯವರು. ಇವರು ವಿಷ್ಣುವಿನ ಆರಾಧಕರು. ಪ್ರಕೃತಿ ಆರಾಧಕರು. ಹಸಿರು ಮರಗಳನ್ನು ಕತ್ತರಿಸುವುದಿಲ್ಲ. ಪ್ರಾಣಿ ಹತ್ಯೆಗಳನ್ನು ಮಾಡುವುದಿಲ್ಲ. ಶುದ್ಧ ಸಸ್ಯಾಹಾರಿಗಳು. ಅಲ್ಲದೆ, ಇವರು ಕೃಷ್ಣ ಮೃಗಗಳನ್ನು ದೇವರ ಪ್ರತೀಕವೆಂದು ಆರಾಧಿಸುತ್ತಾರೆ. ಸನಾತನ ಧರ್ಮದಲ್ಲಿ, ಗೋವುಗಳಿಗೆ ಇರುವ ಮಹತ್ವ ಹಾಗೂ ಪೂಜ್ಯನೀಯ ಭಾವ, ಇಲ್ಲಿ ಕೃಷ್ಣ ಮೃಗಗಳಿಗಿದೆ. ಬಿಶ್ನೋಯ್ ಕುಲಸ್ಥರ ಹಲವಾರು ಮನೆಗಳಲ್ಲಿ ಇವುಗಳನ್ನು ಪೂಜ್ಯಭಾವದಿಂದ ಸಾಕುತ್ತಾರೆ.
Advertisement
ಯಾವಾಗ ಏನೇನಾಯ್ತು?ಅಕ್ಟೋಬರ್ 2 ,1998
ತಾರೆಯರಾದ ಸಲ್ಮಾನ್‌ಖಾನ್, ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ಟಬು ಮತ್ತು ನೀಲಂ ರಾಜಸ್ಥಾನದ ಜೋಧ್‌ಪುರದಲ್ಲಿ 2 ಕೃಷ್ಣಮೃಗಗಳನ್ನು ಕೊಂದಿದ್ದಾರೆ ಎಂದು ದೂರು ದಾಖಲು ಏಪ್ರಿಲ್ 10, 2006
ಸಲ್ಮಾನ್ ಖಾನ್ ದೋಷಿ ಎಂದು ಸಾಬೀತು. 5 ವರ್ಷ ಜೈಲು ಮತ್ತು ದಂಡ ವಿಧಿಸಿದ ವಿಚಾರಣಾ ನ್ಯಾಯಾಲಯ. ಒಂದು ವಾರದ ಜೈಲುವಾಸದ ಬಳಿಕ ಜಾಮೀನು ಮಂಜೂರು ಆಗಸ್ಟ್ 31, 2006
ಶಿಕ್ಷೆ ಅಮಾನತುಗೊಳಿಸಿದ ರಾಜಸ್ಥಾನ ಹೈಕೋರ್ಟ್. ಅನುಮತಿ ಪಡೆಯದೇ ದೇಶ ಬಿಟ್ಟು ಹೋಗದಂತೆ ಆದೇಶ ಜುಲೈ 25, 2016
ಎಲ್ಲ ಆರೋಪಗಳಿಂದಲೂ ಸಲ್ಮಾನ್‌ರನ್ನು ಖುಲಾಸೆಗೊಳಿಸಿ ರಾಜಸ್ಥಾನ ಹೈಕೋರ್ಟ್ ತೀರ್ಪು. ಕೃಷ್ಣಮೃಗಗಳು ಸಲ್ಲು ಗನ್‌ನಿಂದ ಹೊರಬಂದ ಗುಂ ಡುಗಳಿಂದಲೇ ಸತ್ತವು ಎಂಬುದನ್ನು ಪುರಾವೆಯಿಲ್ಲ ಎಂದ ನ್ಯಾಯಾಲಯ ನವೆಂಬರ್ 11, 2016
ಖುಲಾಸೆ ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನಟನಿಗೆ ನೋಟಿಸ್ ಜಾರಿ ಮಾಡಿದ ಸರ್ವೋಚ್ಚ ನ್ಯಾಯಾಲಯ ಏಪ್ರಿಲ್ 5, 2018
ಸಲ್ಮಾನ್ ಖಾನ್ ದೋಷಿ ಎಂದು ಜೋಧ್‌ಪುರ ಕೋರ್ಟ್ ತೀರ್ಪು.
5 ವರ್ಷ ಜೈಲು ಶಿಕ್ಷೆ. ಇತರೆ ಆರೋಪಿಗಳು ಖುಲಾಸೆ. ಸಲ್ಲುಗೆ ಸುತ್ತಿಕೊಂಡ ಕೇಸುಗಳು
20 ವರ್ಷಗಳ ಹಿಂದಿನ(1998) ಕೃಷ್ಣಮೃಗ ಬೇಟೆ ಪ್ರಕರಣ
ವನ್ಯಜೀವಿ(ರಕ್ಷಣೆ) ಕಾಯ್ದೆಯನ್ವಯ ದಾಖಲಾದ ಪ್ರಕರಣ
ಶಸ್ತ್ರಾಸ್ತ್ರ ಕಾಯ್ದೆ ಕೇಸ್. ಪರವಾನಗಿ ಇಲ್ಲದ ರೈಫಲ್ ಮತ್ತು ರಿವಾಲ್ವರ್ ಇಟ್ಟುಕೊಂಡ ಆರೋಪ
ಹಿಟ್ ಆ್ಯಂಡ್ ರನ್ ಕೇಸ್