Advertisement
15 ಎಕ್ರೆ ಪ್ರದೇಶಕ್ಕೆ ಸಮಸ್ಯೆ ಕಡಲ ತೀರದ ರೈತರು ಈಗಾಗಲೇ ನಾಟಿ ಕಾರ್ಯವನ್ನು ಪೂರ್ತಿಗೊಳಿಸಿದ್ದಾರೆ. ಕಳೆದ ಬಾರಿ ಉತ್ತಮ ಫಸಲು ಬಂದಿದ್ದು, ಈ ಬಾರಿಯೂ ಉತ್ಸಾಹದಿಂದ ನಾಟಿಗೆ ತೊಡಗಿದ್ದರು. ಆದರೆ ಉಪ್ಪುನೀರು ಜಮೀನು ಆವರಿಸತೊಡಗಿದ್ದರಿಂದ 15 ಎಕ್ರೆ ಭತ್ತ ಕೃಷಿ ಹಾಳಾಗುವ ಆತಂಕ ಎದುರಾಗಿದೆ.
ಕೃಷಿ ಭೂಮಿ ಸೇರುತ್ತಿರುವ ಉಪ್ಪುನೀರನ್ನು ಮತ್ತೆ ಸಮುದ್ರಕ್ಕೆ ಹೋಗುವಂತೆ ಮಾಡಲು ಸ್ಥಳೀಯ ಯುವಕರ ತಂಡ ಮಂಗಳವಾರ ದೊಡ್ಡ ಮರಳಿನ ದಿಬ್ಬವನ್ನು ಅಗೆದಿದ್ದು, ನೀರು ಹೋಗಲು ಶ್ರಮಿಸಿದೆ. 19 ಲಕ್ಷ ರೂ. ವೆಚ್ಚದ
ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕ
2010ರಲ್ಲಿ ತೆಕ್ಕಟ್ಟೆ -ಕೊಮೆ ಹಾಗೂ ಮಣೂರು ಭಾಗದ ಕಡಲ ತೀರದಲ್ಲಿ 19 ಲಕ್ಷ ರೂ. ವೆಚ್ಚದಲ್ಲಿ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಆದರೆ ಇದರ ಹಲಗೆ ಮತ್ತು ಹಲಗೆ ಸಂಗ್ರಹಿಸುವ ಕೊಠಡಿ ಹಾಳಾಗಿದೆ. ಇಲ್ಲಿ ಗಿಡಗಂಟಿ ಆವರಿಸಿ ಗೆದ್ದಲು ಹಿಡಿಯುತ್ತಿದೆ. ಇದರಿಂದ ಸ್ಥಳೀಯ ರೈತರ ಸಮಸ್ಯೆ ಪರಿಹಾರವಾಗದೇ ಉಳಿದಿದೆ.
Related Articles
ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸಮುದ್ರದಲ್ಲಿ ಹೆಚ್ಚಿ ದ ಅಲೆಗಳ ಅಬ್ಬರದಿಂದಾಗಿ ಅಪಾರ ಪ್ರಮಾಣದಲ್ಲಿ ಉಪ್ಪು ನೀರು ತೀರವನ್ನು ಆವರಿಸುವ ಪರಿಣಾಮ ಕೃಷಿ ಸಂಪೂರ್ಣ ಕೊಳೆತು ಹೋಗುತ್ತಿದೆ.
– ಯಡಾಡಿ ಬಸವ ಪೂಜಾರಿ,
ಹಿರಿಯ ಕೃಷಿಕರು
ಶಾಸಕರ ಗಮನಕ್ಕೆ
ಈ ಬಾರಿ ಅಲೆಗಳ ಅಬ್ಬರ ಹೆಚ್ಚಾಗಿ ಉಪ್ಪು ನೀರು ನುಗ್ಗುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆಯನ್ನು ಜೋಡಿಸಲಾಗುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ಹಲಗೆ ತೆರವುಗೊಳಿಸುತ್ತೇವೆ. ಆದರೆ ಸ್ಥಳೀಯರ ಅಭಿಪ್ರಾಯದಂತೆ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟಿನ ಅಗಲ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ 2 ಕಿಂಡಿಗಳನ್ನು ಶಾಶ್ವತವಾಗಿ ಮುಚ್ಚಬೇಕು ಎನ್ನುವ ಆಗ್ರಹದ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇನೆ.
– ಶೇಖರ್ ಕಾಂಚನ್,
ಕೊಮೆ ಅಧ್ಯಕ್ಷರು, ಗ್ರಾ.ಪಂ. ತೆಕ್ಕಟ್ಟೆ
Advertisement